• Slide
    Slide
    Slide
    previous arrow
    next arrow
  • ಆದರ್ಶ ವನಿತಾ ಸಮಾಜದ ವಾರ್ಷಿಕೋತ್ಸವ ಸಂಪನ್ನ

    300x250 AD

    ಶಿರಸಿ: ನಗರದ ಆದರ್ಶ ವನಿತಾ ಸಮಾಜದ 48ನೇ ವಾರ್ಷಿಕೋತ್ಸವ ಮತ್ತು ಶ್ರಾವಣ ಮಾಸದ ಅಂಗವಾಗಿ ಅರಿಶಿಣ ಕುಂಕುಮ ಕಾರ್ಯಕ್ರಮ ಆ.23ರಂದು ನಡೆಯಿತು. ಈ ವೇಳೆ ಲಲಿತಾ ಸಹಸ್ರನಾಮ ಪಠಣ, ಮತ್ತು ಉಡಿ ತುಂಬುವ ಕಾರ್ಯಕ್ರಮ ನಡೆಸಲಾಯಿತು.

    ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪೋಸ್ಟ್ ಮಾಸ್ಟರ್ ಆಗಿ ಕಾರ್ಯ ಮಾಡಿರುವುದಲ್ಲದೇ ಮಹಿಳಾ ಸಂಘಟನೆ ಸೇರಿದಂತೆ ವಿವಿಧ ಕಾರ್ಯಚಟುವಟಿಕೆಯಲ್ಲಿ ಕ್ರಿಯಾಶೀಲವಾಗಿ ತೊಡಗಿರುವ ಲಕ್ಷ್ಮೀ ಹೆಗಡೆ ವಾನಳ್ಳಿ ಮತ್ತು ಸಾವಯವ ತರಕಾರಿ ಕೃಷಿ, ಪರಿಸರ ಸಂರಕ್ಷಣೆ ಮತ್ತಿತರ ಬಹುಮುಖ ಕಾರ್ಯದಲ್ಲಿ ತೊಡಗಿರುವ ಹೇಮಾ ಆರ್. ಹೆಗಡೆ ಶಿರಸಿ ಇವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಆದರ್ಶ ವನಿತಾ ಸಮಾಜದ ಸಂಸ್ಥಾಪಕ ಅಧ್ಯಕ್ಷೆ ವಾಸಂತಿ ಹೆಗಡೆ ಪಾಲ್ಗೊಂಡು ಮಾತನಾಡಿ, ಆದರ್ಶ ವನಿತಾ ಸಮಾಜವು ಆದರ್ಶ ಪ್ರಾಯವಾಗಿ ಹೀಗೇ ಮುಂದುವರಿಯಲಿ ಎಂದರು.
    ಹಿರಿಯ ಬರಹಗಾರ್ತಿ ಭಾಗೀರಥಿ ಹೆಗಡೆ ಮಾತನಾಡಿ, ಸದಸ್ಯೆಯರಿಗೆ ತವರುಮನೆಯಂತಿರುವ ಈ ಸಮಾಜವು ಇನ್ನೂ ಹೆಚ್ಚು ಚೆನ್ನಾಗಿ ಕಾರ್ಯ ನಿರ್ವಹಿಸುವಂತಾಗಲಿ ಎಂದರು.

    300x250 AD

    ನಂತರದಲ್ಲಿ ನಡೆದ ವನಿತೆಯರ ಸಾಂಸ್ಕೃತಿಕ ಕಾರ್ಯಕ್ರಮವು ಸಭಿಕರ ಮೆಚ್ಚುಗೆಗೆ ಪಾತ್ರವಾಯಿತು. ಗೀತಾ ಹೆಗಡೆ ಪ್ರಾರ್ಥಿಸಿದರು. ಆದರ್ಶ ವನಿತಾ ಸಮಾಜದ ಅಧ್ಯಕ್ಷೆ ಸೀತಾ ಕೂರ್ಸೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹನಾ ಜೋಶಿ ವರದಿ ವಾಚಿಸಿದರು. ವಿಜಯಲಕ್ಷ್ಮೀ ನಾಡಿಗೇರ್ ಮತ್ತು ಜ್ಯೋತಿ ಹೆಗಡೆ ಸನ್ಮಾನ ಪತ್ರ ವಾಚಿಸಿದರು. ಶಾಂತಲಾ ಹೆಗಡೆ ವಂದಿಸಿದರು. ರೇಖಾ ಭಟ್ ಮತ್ತು ವಿಜಯಲಕ್ಷ್ಮೀ ನಿರೂಪಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top