• Slide
    Slide
    Slide
    previous arrow
    next arrow
  • ಮುಂಡಿಗೆಕೆರೆಯಲ್ಲಿ ಅಚ್ಚರಿಯ ವಿದ್ಯಮಾನ; ಅಕಾಲದಲ್ಲಿ ಕೆರೆ ಬಿಟ್ಟು ಹಾರಿ ಹೋದ ಪಕ್ಷಿಗಳು

    300x250 AD

    ಶಿರಸಿ: ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಸುಧಾಪುರ ಕ್ಷೇತ್ರದಲ್ಲಿರುವ ಮುಂಡಿಗೆಕೆರೆ ಪಕ್ಷಿಧಾಮದಲ್ಲಿ ಅಚ್ಚರಿಯ
    ಬೆಳವಣಿಗೆಗೆ ಕಂಡು ಬಂತು. ಈ ವರ್ಷ ಮೇ ೩೦ ರಿಂದ ಕೆರೆಯ ಮೇಲ್ಗಡೆ ಹಾರುತ್ತ ಸಮೀಕ್ಷೆ ಕೈಗೊಂಡ ಬೆಳ್ಳಕ್ಕಿಗಳು ಜೂನ ೧೮ ರಂದು ೧೦೦ಕ್ಕೂ ಮಿಗಿಲಾಗಿ ಪಕ್ಷಿಗಳು ಕೆರೆಗೆ ಇಳಿದಿವೆ. ಈ ವೇಳೆ ಸಣ್ಣ ಪ್ರಮಾಣದಲ್ಲಿ ಮಳೆ ಪ್ರಾರಂಭವಾಗಿದೆ. ಇವು ಜೂನ್ ೨೨ ರಿಂದ ಗೂಡು ಕಟ್ಟಲು ಸುತ್ತಲಿನ ಪರಿಸರದಿಂದ ಕಡ್ಡೀ ತರುವ ಕೆಲಸ ಪ್ರಾರಂಭಿಸಿವೆ.

    ಕೆರೆಗೆ ಇಳಿದಿರುವ ಎಲ್ಲ ಪಕ್ಷಿಗಳು ಗೂಡು ಕಟ್ಟಲು ಉತ್ಸಾಹ ತೋರದಿರುವದು ಕಂಡು ಬಂತು. ಮೊದಲ ಹಂತದಲ್ಲಿ ಸುಮಾರು ೨೦೦ಕ್ಕೂ ಅಧಿಕ ಬೆಳ್ಳಕ್ಕಿಗಳು ಬಂದರೆ ಎರಡನೇ ತಂಡದಲ್ಲಿ ೮೦೦ ಕ್ಕೂ ಅಧಿಕ ಪಕ್ಷಿಗಳು ಬಂದಿಳಿದಿದ್ದು ಜುಲೈ ೧೯ ರ ವೇಳೆಗೆ ಸುಮಾರು ೧೮೫೦ ರಿಂದ ೧೯೦೦ ಬೆಳ್ಳಕ್ಕಿಗಳು ಕೆರೆಯ ತುಂಬೆಲ್ಲ ಇಳಿದಿರುವದು ಕಂಡು ಬಂತು. ದಿನದಿಂದಾ ದಿನಕ್ಕೆ ಮಳೆ ಕ್ರಮೇಣ ಹೆಚ್ಚಾಗುತ್ತಿದ್ದರೂ ಪ್ರಥಮವಾಗಿ ಕೆರೆಗಿಳಿದ ಬೆಳ್ಳಕ್ಕಿಗಳ ಹೊರತಾಗಿ ಮತ್ತೆರಡು ಗುಂಪುಗಳಲ್ಲಿ ಬಂದಿಳಿದ ಪಕ್ಷಿಗಳು ಕೇವಲ ಮುಂಡಿಗೆ ಗಿಡಗಳ ಮೇಲೆ ಕುಳಿತಿವೆಯೇ ಹೊರತಾಗಿ ಗೂಡು ಕಟ್ಟಲು ನಿರಾಸಕ್ತಿ ಹೊಂದಿರುವದು ಎದ್ದು ಕಾಣುತ್ತಿತ್ತು. ಈ ವರ್ಷ ಜುಲೈ ೧೭ ರಿಂದ ೨೬ ರವರೆಗೆ ಅತೀ ಹೆಚ್ಚು ಮಳೆ ಪಕ್ಷಿಧಾಮದಲ್ಲಾಗಿದೆ.

    ನಂತರದ ದಿನಗಳಲ್ಲಿ ಕಡಿಮೆ ಮಳೆ ಬಿದ್ದಿದೆ. ಅಗಸ್ಟ್ ೨ ರ ನಂತರ ಕೆರೆಯಲ್ಲಿ ವಸತಿ ಮಾಡಿದ ಪಕ್ಷಿಗಳು ವಾಪಸ್ ಹೋಗುತ್ತಿರುವದು. ಇದರಿಂದ ಕೆರೆಯಲ್ಲಿ ಪಕ್ಷಿಗಳ ಸಂಖ್ಯೆ ಇಳಿಮುಖವಾಗುವದು ಕಂಡು ಬಂದಿದೆ. ಪ್ರತಿ ವರ್ಷ ಜುಲೈ ಹಾಗೂ ಅಗಸ್ಟ್ ತಿಂಗಳುಗಳಲ್ಲಿ ೨೫೦ ರಿಂದ ೩೦೦ ಗೂಡುಗಳು ಇರುವಂತಹ ಈ ಸ್ಥಳ ಇಂದು ಕೇವಲ ೫೦ ರಿಂದ ೬೦ ಗೂಡುಗಳನ್ನು ಕಾಣಬಹುದಾಗಿದೆ. ನೂರಾರು ಗೂಡುಗಳು ಅರ್ಧ ಕಟ್ಟಿದ ಸ್ಥಿತಿಯಲ್ಲಿ ಕಂಡು ಬರುತ್ತಿವೆ. ಕೆರೆಗೆ ಆಗಮಿಸಿದ ಪಕ್ಷಿಗಳು ಒಮ್ಮೆಲೆ ಕೆರೆ ಬಿಟ್ಟು ಹಾರಿ ಹೋಗಿರುವದು ಅಚ್ಚರಿಯ
    ಸಂಗತಿಯಾಗಿದೆ.


    ೨೦೦೫ ರಲ್ಲಿ ಮೇ ೧೬ ರಂದು ಕೆರೆಗಿಳಿದ ಬೆಳ್ಳಕ್ಕಿಗಳು ಮೇ ೧೮ ರಂದು ವಾಪಸ್ ಹಾರಿ ಹೋಗಿದ್ದು, ಮತ್ತೆ ೧೨ ದಿನಗಳ ನಂತರ ಅ0ದರೆ ಮೇ ೨೨ ಕ್ಕೆ ಪುನಃ ದೊಡ್ಡ ಪ್ರಮಾಣದಲ್ಲಿ ಕೆರೆಗಿಳಿದು ಗೂಡು ಕಟ್ಟಿ-ಸಂತಾನಾಭಿವೃದ್ಧಿ ಮಾಡಿಕೊಂಡು ನೆಮ್ಮದಿಯಿಂದ ಹಾರಿ ಹೋಗಿವೆ. ಅಂದಿನ ದಿನಗಳಲ್ಲಿ ಅಧಿಕ ಮಳೆ ಆಗಿದ್ದು ಕಂಡು ಬರುತ್ತದೆ. ೨೦೧೫ ರಲ್ಲಿ ಸರಾಸರಿ ಮಳೆ ೧೧೯೮.೩ಮಿ.ಮೀ. ಆಗಿದ್ದರೂ ಪಕ್ಷಿಗಳ ವಂಶಾಭಿವೃದ್ಧಿಗೆ ಏನೂ ತೊಂದರೆ ಆಗಲಿಲ್ಲಾ. ೨೦೨೩ ಅಗಸ್ಟ್ ೨೪ ರವರೆಗೆ ಪಕ್ಷಿಧಾಮದ ಸರಹದ್ದಿನಲ್ಲಿ ೧೪೮೮.ಮಿ.ಮೀ ಮಳೆ ಆಗಿದ್ದರೂ ಬೆಳ್ಳಕ್ಕಿಗಳು ಅಕಾಲದಲ್ಲಿ ಕೆರೆಬಿಟ್ಟು ಹೊರಹೋಗಿರುವದು ಕೂತೂಹಲಕ್ಕೆಡೆ ಮಾಡಿ ಕೊಟ್ಟಿವೆ. ಹಾಗೂ ಈ ವರ್ಷದ ಇಲ್ಲಿಯ ವಾತಾವರಣ ಹೆಚ್ಚಿದ ತಾಪಮಾನಗಳು ಪಕ್ಷಿಗಳ ಸಂತಾನಾಭಿವೃದ್ಧಿಗೆ ಪ್ರತಿರೋದವಾಗಿರುವದು ಕಂಡು ಬರುತ್ತದೆ. ಯಾವಾಗಲೂ ಬೆಳ್ಳಕ್ಕಿಗಳು ಮೊಟ್ಟೆ ಇಟ್ಟು ನಂತರ ಮೊಟ್ಟೆಗೆ ಕಾವು ಕೊಡುವಾಗ ಅತ್ಯಧಿಕ ಮಳೆ ಆಗುತ್ತಿತ್ತು. ಮತ್ತು ತಾಪಮಾನ ಅತೀ ಕಡಿಮೆಯಾಗಿ ತಂಪಾಗಿರುತ್ತಿತ್ತು.

    300x250 AD

    ಈ ವರ್ಷ ಹಾಗಾಗಲಿಲ್ಲಾ ಅತಿಯಾದ ತಾಪಮಾನವಿದ್ದು ಪಕ್ಷಿಗಳಿಗೆ ಮಾನವರಿಂದ ಯಾವುದೇ ತೊಂದರೆ ಉಂಟಾಗದಿದ್ದರೂ ಪ್ರಕೃತಿಯೇ ಬೆಳ್ಳಕ್ಕಿಗಳ ವಂಶಾಭಿವೃದ್ಧಿಗೆ ಸಹಕರಿಸದಿರುವದು ನಿಸರ್ಗದಲ್ಲಾಗುತ್ತಿರುವ ಬದಲಾವಣೆಗೆ ಪ್ರಮುಖ ನಿದರ್ಶನವಾಗಿದೆ. ೨೦೦೨ ರಲ್ಲಿ ಮಾನವನ ದುರಾಸೆಗೆ ಪಕ್ಷಿ-ಕಂದಮ್ಮಗಳ ಮರಣ ಹೋಮ ನಡೆದಾಗ ಅವು ಅಕಾಲದಲ್ಲಿ ಕೆರೆ ಬಿಟ್ಟು ತೊಲಗಿದ್ದವು. ನಂತರದ ವರ್ಷಗಳಲ್ಲಿ ಹುಲೇಕಲ್ ಅರಣ್ಯ ಇಲಾಖೆಯವರು ಎಚ್ಚೆತ್ತು. ಪ್ರತಿ ವರ್ಷ ಮಳೆಗಾಲದ ೫ ತಿಂಗಳುಗಳ ಕಾಲ ಕಾವಲುಗಾರನನ್ನು ನಿಯಮಿಸಿ ಪಕ್ಷಿಗಳ ಸಂತತಿಗೆ ರಕ್ಷಣೆ ನೀಡುತ್ತಾ ಬಂದಿರುವದು ಶ್ಲಾಘನೀಯ.

    ೨೦೨೩ ಅಗಸ್ಟ್ ೨೦ ರ ಚಿತ್ರಣದಂತೆ ಮುಂಡಿಗೆ ಕೆರೆಯಲ್ಲಿ ೭ ರಿಂಧ ೧೦ ಬೆಳ್ಳಕ್ಕಿಗಳು-ಬೆರಳೆಣಿಕೆಯ ಮರಿಗಳು, ಹಾಗೂ ೧೦೦ ಕ್ಕೂ ಅಧಿಕ ಬಿಟ್ಟು ಹೋದ ಖಾಲೀ ಗೂಡನ್ನು ಕಾಣಬಹುದಾಗಿದೆ. ಈ ಮೇಲಿನ ಎಲ್ಲ ವಿಧ್ಯಮಾನಗಳನ್ನು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಇಲ್ಲಿಯ ಆಗು-ಹೋಗುಗಳನ್ನು ಹತ್ತಿರದಿಂದ ಪ್ರತಿ ನಿತ್ಯ ಗಮನಿಸುತ್ತಿರುವದು ಅಭಿನಂದನೀಯ ಕಾರ್ಯವಾಗಿದೆ. ಇಲ್ಲಿಯ ಆಗು-ಹೋಗುಗಳನ್ನು ಸೋಂದಾ ಜಾಗೃತ ವೇದಿಕೆಯು ೧೯೯೫ ರಿಂದ ದಾಖಲಿಸುತ್ತಾ ಬಂದಿರುತ್ತದೆ.

    ಚಿತ್ರ ಕೃಪೆ:- ಅರಣ್ಯ ಇಲಾಖೆ ಹುಲೇಕಲ್
    ಮಾಹಿತಿ : ರತ್ನಾಕರ ಬಾಡಲಕೊಪ್ಪ
    ಜಾಗೃತ ವೇದಿಕೆ, ಸೋಂದಾ

    Share This
    300x250 AD
    300x250 AD
    300x250 AD
    Leaderboard Ad
    Back to top