ಶಿರಸಿ: ಇಲ್ಲಿನ ಉತ್ತರ ಕನ್ನಡ ಸಾವಯವ ಒಕ್ಕೂಟದಲ್ಲಿ ಆ.16,ಬುಧವಾರ ಬೆಳಿಗ್ಗೆ 11ಗಂಟೆಗೆ ‘ಸಾಂಬಾರು ಉತ್ಪನ್ನ ನೀಡುವ ಮರಗಳ ಕೃಷಿ ಮತ್ತು ಭವಿಷ್ಯದ ಸಾಧ್ಯತೆಗಳು’ ಎಂಬ ವಿಷಯದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಸಂವಾದ ಮತ್ತು ಗೋಷ್ಠಿಯನ್ನು ಆಯೋಜಿಸಲಾಗಿದೆ.
ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಗತಿಪರ ಕೃಷಿಕ ಕಮಲಾಕರ ಹೆಗಡೆ ಲಿಂಗದಕೋಣ ಆಗಮಿಸಲಿದ್ದು, ಜಾಯಿಕಾಯಿ ಕೃಷಿ ಮತ್ತು ಗುಣಮಟ್ಟದ ಸಂಸ್ಕರಣೆ ವಿಷಯದ ಮಾಹಿತಿ ನೀಡಲಿದ್ದಾರೆ.
ವಿಜ್ಞಾನಿ, ಪ್ರಗತಿಪರ ಕೃಷಿಕ ಬಾಲಚಂದ್ರ ಸಾಯಿಮನೆ ದಾಲ್ಚಿನ್ನಿ ಕೃಷಿ ಹಾಗೂ ಇತರೆ ಸಾಂಬಾರು ಪದಾರ್ಥಗಳ ಸಾಧ್ಯತೆಗಳು ಬಗ್ಗೆ ವಿಷಯದ ಗೋಷ್ಠಿ ನಡೆಸಲಿದ್ದಾರೆ.
ದೇವಿಹೊಸೂರಿನ ದಾನವೀರ ಶಿರಸಂಗಿ ಶ್ರೀ ಲಿಂಗರಾಜ ದೇಸಾಯಿ ತೋಟಗಾರಿಕಾ ಅಭಿಯಾಂತ್ರಿಕ ಮತ್ತು ಆಹಾರ ತಂತ್ರಜ್ಞಾನ ಮಹಾವಿದ್ಯಾಲಯದ ಡೀನ್, ಡಾ. ಲಕ್ಷ್ಮಿ ನಾರಾಯಣ ಹೆಗಡೆ, ಸಾಂಬಾರು ಪದಾರ್ಥಗಳ ಕೃಷಿ ಹಾಗೂ ಮೌಲ್ಯವರ್ಧನೆ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಆಸಕ್ತ ಜನತೆ ಕಾರ್ಯಕ್ರಮಕ್ಕೆ ಆಗಮಿಸಿ, ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಲು ಸಂಘಟಕರು ಕೋರಿದ್ದಾರೆ.