Slide
Slide
Slide
previous arrow
next arrow

ಅಂತರರಾಷ್ಟ್ರೀಯ ಯುವ ದಿನ: ಲಯನ್ಸ ಕ್ಲಬ್’ನಿಂದ ರುದ್ರಭೂಮಿ ಸ್ವಚ್ಛತಾ ಕಾರ್ಯಕ್ರಮ, ದೇಣಿಗೆ

300x250 AD

ಶಿರಸಿ: ಲಯನ್ಸ ಕ್ಲಬ್ ಶಿರಸಿ, ಲಿಯೋ ಕ್ಲಬ್ ಶಿರಸಿ, ಲಿಯೋ ಕ್ಲಬ್ ಶ್ರೀನಿಕೇತನ ಇವರು ಆ.12 ರಂದು ರುದ್ರಭೂಮಿ, ಸಿರಸಿಗೆ ಭೇಟಿ ನೀಡಿ ಸ್ವಚ್ಛತಾ ಕಾರ್ಯದಲ್ಲಿ ನೆರವಾದರು.

ಈ ಸಂದರ್ಭದಲ್ಲಿ ಲಯನ್ಸ ಕ್ಲಬ್ ಶಿರಸಿ ರುದ್ರಭೂಮಿಯ ಕಾರ್ಯ ಚಟುವಟಿಕೆಗಳಿಗೆ ರೂ. 5000/- ಗಳ ಕಿರುಕಾಣಿಕೆ ಲಯನ್ಸ “ಸ್ಪಂದನ” ದಡಿಯಲ್ಲಿ ವಿ.ಪಿ. ಹೆಗಡೆ ವೈಶಾಲಿಯವರಿಗೆ ಹಸ್ತಾಂತರಿಸಿದರು. ಅಧ್ಯಕ್ಷ ಲಯನ್ ಅಶೋಕ ಹೆಗಡೆ,ಕಾರ್ಯದರ್ಶಿ ಲಯನ್ ಜ್ಯೋತಿ ಅಶ್ವಥ ಹೆಗಡೆ, ಖಜಾಂಚಿ ಲಯನ್ ಶರಾವತಿ ಭಟ್, ಲಯನ್ ಅಶ್ವಥ ಹೆಗಡೆ ಮುಳಖಂಡ, ಎಲ್ಲ ಲಯನ್ ಸದಸ್ಯರು, ಲಿಯೋ ಮಕ್ಕಳು ಶ್ರಮದಾನ ಮಾಡಿದರು.

300x250 AD
Share This
300x250 AD
300x250 AD
300x250 AD
Back to top