Slide
Slide
Slide
previous arrow
next arrow

ಜಾನ್ಮನೆ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ತೆಕ್ಕೆಗೆ

300x250 AD

ಶಿರಸಿ: ತೀವ್ರ ಸ್ಪರ್ಧೆ ಮತ್ತು ಕುತೂಹಲ ಮೂಡಿಸಿದ್ದ ಜಾನ್ಮನೆ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ.

ಅವಿರೋಧ ಆಯ್ಕೆ ಪ್ರಯತ್ನ ನಡೆಯಿತಾದರೂ ಸಾಧ್ಯವಾಗದೇ ಅಂತಿಮವಾಗಿ ಈ ಎರಡೂ ಸ್ಥಾನಗಳಿಗೆ ಚುನಾವಣೆ ನಡೆಯಿತು. ರೇಖಾ ನಾಯ್ಕ, ಶೈಲಶ್ರೀ ತಳವಾರ ಅವರ ವಿರುದ್ಧ ಜಯ ಸಾಧಿಸಿ ಅಧ್ಯಕ್ಷ ಸ್ಥಾನ ಒಲಿಸಿಕೊಂಡರು. ಉಪಾಧ್ಯಕ್ಷ ಸ್ಥಾನವನ್ನು ಅಬ್ದುಲ್ ಕರೀಂ, ರಘುಪತಿ ಭಟ್ ವಿರುದ್ಧ ಜಯ ಸಾಧಿಸಿ ಪಡೆದುಕೊಂಡರು. ಚುನಾವಣಾ ಅಧಿಕಾರಿಯಾಗಿ ಇಂಜಿನಿಯರ್ ನವೀನಕುಮಾರ ಭಾಗವಹಿಸಿದ್ದರು. ಕಾಂಗ್ರೆಸ್ ಪ್ರಮುಖರಾದ ಜಗದೀಶ ಗೌಡ, ಕಾಂಗ್ರೆಸ್ ಘಟಕಾಧ್ಯಕ್ಷ ವಿ.ಎಂ. ಹೆಗಡೆ ಹಣಗಾರ, ಜಿಲ್ಲಾ ಹಿಂ. ವರ್ಗ ಪ್ರಧಾನ ಕಾರ್ಯದರ್ಶಿ ಚಂದ್ರು ಮಡಿವಾಳ ಸಂಪಖಂಡ ಇತರರಿದ್ದರು.

300x250 AD
Share This
300x250 AD
300x250 AD
300x250 AD
Back to top