ಕುಮಟಾ: ತಾಲೂಕಿನ ಬಾಡ ಗ್ರಾಮದ ಕಡಲತೀರದಲ್ಲಿ ಸಿಲಿಂಡರ್ ರೂಪದ ವಸ್ತುವೊಂದು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕದ ಜೊತೆಗೆ ಕುತೂಹಲ ಮೂಡಿಸುತ್ತಿದೆ.
ಬಾಡದ ಕಡಲತೀರದಲ್ಲಿ ಸಿಲಿಂಡರ್ ರೂಪದ ವಸ್ತು ಪತ್ತೆಯಾಗಿದ್ದು, ಇದನ್ನ ನೋಡಿದ ಸ್ಥಳೀಯರು ಒಮ್ಮೆ ಆತಂಕಕ್ಕೆ ಒಳಗಾಗಿದ್ದರು. ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಬಳಿಕ ಕರಾವಳಿ ಕಾವಲು ಪಡೆಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ತಂಡ ಸಹ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಆದರೆ ಇದು ನಿಖರವಾಗಿ ಯಾವ ವಸ್ತು ಎನ್ನುವುದು ಇದುವರೆಗೂ ಖಚಿತ ಪಡಿಸಲು ಸಾಧ್ಯವಾಗಿಲ್ಲ. ಒಂದು ಮೂಲಗಳ ಪ್ರಕಾರ ಇದು ಮರ್ಚೆಂಟ್ ಶಿಪ್ ನಲ್ಲಿರುವ ವಸ್ತು ಎಂದು ಹೇಳಲಾಗುತ್ತಿದ್ದು ಎಲ್ಲೋ ಆಳ ಸಮುದ್ರದಲ್ಲಿ ಯಾವುದೋ ಒಂದು ಶಿಪ್ ಮುಳುಗಡೆಯಾಗಿ ಅದರಲ್ಲಿರುವ ಸಿಲಿಂಡರ್ ರೂಪದ ಈ ವಸ್ತು ಕಡಲ ಅಲೆಗೆ ಕೊಚ್ಚಿಕೊಂಡು ಸಮುದ್ರದ ತೀರದಕ್ಕೆ ಬಂದು ಬಿದ್ದಿರಬಹುದು ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಅಗ್ನಿಶಾಮಕ ಅಧಿಕಾರಿಗಳಾಗಲಿ, ಕರಾವಳಿ ಕಾವಲು ಪಡೆಯ ಪೊಲೀಸರು ಇನ್ನೂ ಸಹ ಸ್ಪಷ್ಟಪಡಿಸಿಲ್ಲ.
ಕಡಲತೀರದಲ್ಲಿ ಸಿಲಿಂಡರ್ ರೂಪದ ವಸ್ತು ಪತ್ತೆ
