ದಾಂಡೇಲಿ: ನಗರದ ಕರ್ನಾಟಕ ಸಂಘದ ಪಂಚಗಾನ ಸಭಾ ಭವನದಲ್ಲಿ ಆ.6ರಂದು ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಹುಬ್ಬಳ್ಳಿಯ ವಿಹಾನ ಹಾರ್ಟ್ ಕೇಂದ್ರ ಸೆಂಟರ್, ಡಾ.ಜಿ.ವಿಭಟ್ ಹಾಸ್ಪಿಟಲ್ ಹಾಗೂ ಲಯನ್ಸ್ ಕ್ಲಬ್ ವತಿಯಿಂದ ಉಚಿತ ಹೃದಯರೋಗ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಹುಬ್ಬಳ್ಳಿಯ ವಿಹಾನ ಹಾರ್ಟ್ ಕೇರ್ ಸೆಂಟರಿನ ಸಂಯೋಜಕ ಕೇಶವ ರಂಗಾಪುರ ಅವರು ಶಿಬಿರ ಕುರಿತು ಮಾತನಾಡಿ, ಶಿಬಿರದಲ್ಲಿ ಉಚಿತವಾಗಿ ಬಿಪಿ, ಇಸಿಜಿ, 2ಡಿ ಇಕೋ ತಪಾಸಣೆಯೊಂದಿಗೆ ತಜ್ಞ ವೈದ್ಯರೊಂದಿಗೆ ಸಮಾಲೋಚನೆ ನಡೆಸಲಾಗುವದು ಎಂದರು.ಸುದ್ದಿಗೋಷ್ಠಿಯಲ್ಲಿ ಹೃದಯ ರೋಗ ತಜ್ಞ ಡಾ.ಈ.ವಿ.ಭಟ್, ಕ್ಯಾಬಿನೆಟ್ ಸದಸ್ಯ ಯು.ಎಸ್.ಪಾಟೀಲ, ಲಯನ್ಸ್ ಕ್ಲಬಿನ ಅಧ್ಯಕ್ಷ ವೀರೇಶ ಯರಗೇರಿ, ನಿಕಟಪರ‍್ವ ಅಧ್ಯಕ್ಷ ಸೈಯ್ಯದ್ ತಂಗಳ್, ಖಜಾಂಚಿ ಇಮ್ತಿಯಾಜ್ ಎಂ.ಅತ್ತಾರ ಇದ್ದರು.
ಆ.6ಕ್ಕೆ ಉಚಿತ ಹೃದಯ ರೋಗ ತಪಾಸಣೆ ಶಿಬಿರ
