• Slide
    Slide
    Slide
    previous arrow
    next arrow
  • ಇಕೋ ಕ್ಲಬ್‌ನಿಂದ ಕಲಿಕಾ ಪರಿಕರಗಳ ವಿತರಣೆ

    300x250 AD

    ದಾಂಡೇಲಿ: ಪರಿಸರ ಸಂರಕ್ಷಣೆ, ವನ್ಯ ಪ್ರಾಣಿಗಳ ಸಂರಕ್ಷಣೆ ಮತ್ತು ಜಾಗೃತಿಗಾಗಿ ಕಳೆದ ಹಲವು ವರ್ಷಗಳಿಂದ ಕಾರ‍್ಯನಿರ್ವಹಿಸುತ್ತಾ ಬಂದಿರುವ ನಗರದ ಗ್ರೀನ್ ಅಂಬ್ರೆಲ್ಲಾ ಇಕೋ ಕ್ಲಬ್ ಕಳೆದ 6 ವರ್ಷಗಳಿಂದ ಪ್ರತಿವರ್ಷವೂ ದಾಂಡೇಲಿ, ಜೊಯಿಡಾ ಮತ್ತು ಹಳಿಯಾಳ ತಾಲ್ಲೂಕು ವ್ಯಾಪ್ತಿಯ ವಿವಿಧ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟುಬುಕ್ ಮತ್ತು ಕಲಿಕಾ ಸಾಮಾಗ್ರಿಗಳನ್ನು ವಿತರಿಸುತ್ತಾ ಬರುವುದರ ಮೂಲಕ ಶೈಕ್ಷಣಿಕ ಕಾಳಜಿಯನ್ನು ಮೆರೆದಿದೆ.

    ಈ ವರ್ಷವೂ ಇದೀಗ ಅಂಬಿಕಾನಗರದ ಜಮಗಾದಲ್ಲಿರುವ ಸರಕಾರಿ ಹಿ.ಪ್ರಾ.ಶಾಲೆ, ಅಂಬಿಕಾನಗರದ ಸರಕಾರಿ ಕಿ.ಪ್ರಾ.ಶಾಲೆ, ಕೇಗದಾಳದ ಸರಕಾರಿ ಕಿ.ಪ್ರಾ.ಶಾಲೆ, ಕಲಬಾವಿ ಗ್ರಾಮದ ಸರಕಾರಿ ಕಿ.ಪ್ರಾ. ಶಾಲೆ, ಕುಳಗಿಯ ಸರಕಾರಿ ಕಿ.ಪ್ರಾ.ಶಾಲೆ, ಅಡ್ಡಿಗೇರಾದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಫಣಸೋಲಿಯ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಭಾಗವತಿ ವ್ಯಾಪ್ತಿಯ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟುಬುಕ್‌ಗಳನ್ನು ಹಾಗೂ ಕಲಿಕಾ ಸಾಮಾಗ್ರಿಗಳನ್ನು ವಿತರಿಸಿದೆ. ಇದರ ಹೊರತಾಗಿಯೂ ವನ್ಯಜೀವಿ ಇಲಾಖೆಯಲ್ಲಿ ಗುತ್ತಿಗೆ ಚಾಲಕರಾಗಿ ಸೇವೆ ಸಲ್ಲಿಸುತ್ತಿರುವ ಚಾಲಕರ ಮಕ್ಕಳಿಗೂ ನೋಟುಬುಕ್ ಮತ್ತು ಕಲಿಕಾ ಪರಿಕರಗಳನ್ನು ಗ್ರೀನ್ ಅಂಬ್ರೆಲ್ಲಾ ಇಕೋ ಕ್ಲಬ್ ವಿತರಿಸುವ ಮೂಲಕ ನಿಜವಾದ ಶೈಕ್ಷಣಿಕ ಸೇವಾ ಕೈಂಕರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ.

    300x250 AD

    ಗ್ರೀನ್ ಅಂಬ್ರೆಲ್ಲಾ ಇಕೋ ಕ್ಲಬಿನ ಪ್ರವರ್ತಕರಾದ ಅವಳಿ ಜೋಡಿ ರಾಹುಲ್ ಬಾವಾಜಿ ಮತ್ತು ರೋಶನ್ ಬಾವಾಜಿಯವರ ನೇತೃತ್ವದಲ್ಲಿ ಮೂರರಿಂದ ನಾಲ್ಕು ಲಕ್ಷ ರೂ. ಮೊತ್ತದ ನೋಟ್‌ಬುಕ್ ಮತ್ತು ಕಲಿಕಾ ಸಾಮಾಗ್ರಿಗಳ ವಿತರಣಾ ಕಾರ‍್ಯದ ಯಶಸ್ಸಿಗೆ ಬಾವಾಜಿ ಪರಿವಾರದವರು ಕೈಜೋಡಿಸಿದರೆ, ತುಳಸಿದಾಸ್ ನಾಯ್ಕ ಸಹಕರಿಸುತ್ತಿದ್ದಾರೆ. ರಾಹುಲ್ ಬಾವಾಜಿ ಮತ್ತು ರೋಶನ್ ಬಾವಾಜಿ ನೇತೃತ್ವದ ಗ್ರೀನ್ ಅಂಬ್ರೆಲ್ಲಾ ಇಕೋ ಕ್ಲಬಿನ ಶೈಕ್ಷಣಿಕ ನೆರವು ಕರ‍್ಯಕ್ರಮಕ್ಕೆ ಈ ಎಲ್ಲಾ ಶಾಲೆಗಳ ಶಿಕ್ಷಕ ವೃಂದದವರು ಮತ್ತು ಶಾಲಾಭಿವೃದ್ಧಿ ಸಮಿತಿಯವರು ಹಾಗೂ ವಿಶೇಷವಾಗಿ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿ, ಕೃತಜ್ಞತೆ ಸಲ್ಲಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top