ಸಿಕರ್: ಪ್ರತಿಪಕ್ಷಗಳ ಹೊಸ ಮೈತ್ರಿಕೂಟದ ವಿರುದ್ಧ ಕಿಡಿಕಾರಿರುವ ಪ್ರಧಾನಿ ನರೇಂದ್ರ ಮೋದಿ, ಅವುಗಳು ತಮ್ಮ ಹಿಂದಿನ ತಪ್ಪುಗಳನ್ನು ಮರೆಮಾಚಲು ಹೆಸರನ್ನು ಯುಪಿಎಯಿಂದ INDIA ಎಂದು ಬದಲಾಯಿಸಿದ್ದಾರೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ,ಮಾತನಾಡು ಕೇಂದ್ರ ಸರ್ಕಾರವು ಒಂಬತ್ತು ವರ್ಷಗಳಿಂದ ರೈತರ ಹಿತದೃಷ್ಟಿಯಿಂದ ನಿರ್ಧಾರಗಳನ್ನು ತೆಗೆದುಕೊಂಡಿದೆ ಮತ್ತು ಅವರಿಗೆ ಬೀಜದಿಂದ ಮಾರುಕಟ್ಟೆಗೆ ಹೊಸ ವ್ಯವಸ್ಥೆಯನ್ನು ರಚಿಸಿದೆ ಎಂದು ಹೇಳಿದರು.
ತಾವು ಬಡವರ ವಿರುದ್ಧ ಹೇಗೆ ಸಂಚು ರೂಪಿಸಿದ್ದೀರಿ ಎಂಬುದನ್ನು ಮರೆಮಾಚಲು ತಮ್ಮ ಹೆಸರನ್ನು ಯುಪಿಎಯಿಂದ INDIAಗೆ ಬದಲಾಯಿಸಿದ್ದಾರೆ ಎಂದು ರಾಜಸ್ಥಾನದ ಸಿಕಾರ್‌ನಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಪ್ರಧಾನಿ ಮೋದಿ ಹೇಳಿದ್ದಾರೆ.
ರಾಜಸ್ಥಾನದ ಸರ್ಕಾರ ಯುವಕರ ಭವಿಷ್ಯದ ಜೊತೆ ಆಟವಾಡುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಪ್ರಧಾನಿ ವಾಗ್ದಾಳಿ ನಡೆಸಿದರು.
”ಕೇಂದ್ರ ಸರಕಾರ ಯುವಕರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಆದರೆ ರಾಜಸ್ಥಾನದಲ್ಲಿ ಏನಾಗುತ್ತಿದೆ, ರಾಜಸ್ಥಾನ ಸರ್ಕಾರ ಯುವಕರ ಭವಿಷ್ಯದೊಂದಿಗೆ ಆಟವಾಡುತ್ತಿದೆ. ರಾಜ್ಯದಲ್ಲಿ ಪೇಪರ್ ಲೀಕ್ ಕಾರ್ಯಕ್ರಮ ನಡೆಸಲಾಗುತ್ತಿದೆ. ರಾಜ್ಯದ ಯುವಕರು ಸಮರ್ಥರು ಆದರೆ ಇಲ್ಲಿನ ಸರ್ಕಾರ ಅವರ ಭವಿಷ್ಯವನ್ನು ಹಾಳು ಮಾಡುತ್ತಿದೆ” ಎಂದರು.
“ಇಂದು ದೇಶದ ರೈತರು ಪಿಎಂ ಕಿಸಾನ್ ಸಮೃದ್ಧಿಯ ಅಡಿಯಲ್ಲಿ 18,000 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ. ಮತ್ತು, ದೇಶದಲ್ಲಿ 1,25,000 PM ಕಿಸಾನ್ ಸಮೃದ್ಧಿ ಕೇಂದ್ರಗಳು (PMKSKs) ಕೇಂದ್ರಗಳು ಪ್ರಾರಂಭವಾಗಿವೆ. ಈ ಉಪಕ್ರಮವು ಬ್ಲಾಕ್ ಮತ್ತು ಗ್ರಾಮ ಮಟ್ಟದಲ್ಲಿ ರೈತರಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಹಳ್ಳಿಗಳಲ್ಲಿ ನಗರದಂತಹ ಸೌಲಭ್ಯಗಳನ್ನು ಆಯೋಜಿಸಲಾಗುತ್ತಿದೆ” ಎಂದರು.