Slide
Slide
Slide
previous arrow
next arrow

ಹಾಲಮಡ್ಡಿ- ಕೇರವಾಡ ರಸ್ತೆ ಸಂಪರ್ಕ ಕಡಿತ

300x250 AD

ದಾಂಡೇಲಿ: ತಾಲ್ಲೂಕಿನ ಕೇರವಾಡದ ಕೆರೆ ಒಡೆದಿದ್ದು, ಪರಿಣಾಮವಾಗಿ ಸರಿ ಸುಮಾರು 40 ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಸ್ಥಳೀಯ ಭತ್ತದ ಗದ್ದೆ ಮತ್ತು ಕಬ್ಬಿನ ಗದ್ದೆಯೂ ಜಲಾವೃತಗೊಂಡು ಹಾನಿಯಾಗಿದೆ. ಇದರ ನಡುವೆ ಒಮ್ಮೇಲೆ ರಭಸವಾಗಿ ಬಂದ ನೀರಿನ ಸೆಳೆತಕ್ಕೆ ಓರ್ವ ಮಹಿಳೆ ಮತ್ತು ಮೂವರು ಮಕ್ಕಳು ಹಾಗೂ ಒಂದು ನಾಯಿ ನೀರಿನಲ್ಲಿ ಕೊಚ್ಚಿ ಹೋಗುವ ಸಾಧ್ಯತೆಯಿತ್ತಾದರೂ ಅವರನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಘಟನೆ ನಡೆದು ಸಾಕಷ್ಟು ಸಮಯವಾದರೂ ಸ್ಥಳಕ್ಕೆ ತಾಲ್ಲೂಕು ಪಂಚಾಯ್ತು ಕರ‍್ಯನಿರ್ವಹಣಾಧಿಕಾರಿ ಮತ್ತು ಪಿಡಿಓ ಬರದೇ ಇರುವುದಕ್ಕೆ ಸ್ಥಳೀಯ ಗ್ರಾಮ ಪಂಚಾಯ್ತು ಸದಸ್ಯರಾದ ಸುಭಾಷ್ ಬೋವಿವಡ್ಡರ್ ಸೇರಿದಂತೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾನಿ ಸಂಭವಿಸಿದ ಕುಟುಂಬಗಳಿಗೆ ತಕ್ಷಣವೆ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ತಹಶೀಲ್ದಾರ್ ಅಶೋಕ್ ಶಿಗ್ಗಾವಿ, ಕಂದಾಯ ನಿರೀಕ್ಷಕರಾದ ರಾಘವೇಂದ್ರ ಪಾಟೀಲ್ ಅವರು ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರ ಜೊತೆ ಚರ್ಚೆ ನಡೆಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top