Slide
Slide
Slide
previous arrow
next arrow

ಶಾರ್ಟ್ ಸರ್ಕ್ಯೂಟ್’ನಿಂದ ಕೊಟ್ಟಿಗೆಗೆ ಬೆಂಕಿ: 7ಜಾನುವಾರುಗಳ ಸಜೀವ ದಹನ

300x250 AD

ಮುಂಡಗೋಡ: ತಾಲೂಕಿನ ಹಳೂರಿನಲ್ಲಿ ವಿದ್ಯುತ್ ಶಾರ್ಟಸೆರ್ಕ್ಯೂಟ್’ನಿಂದ ದನದ ಕೊಟ್ಟಿಗೆಗೆ ಬೆಂಕಿ ತಗುಲಿ 7 ಜಾನುವಾರಗಳು ಸಜೀವ ದಹನಗೊಂಡ ಘಟನೆ ನಡೆದಿದೆ.

ಮಂಜುನಾಥ ಶೇಟ್ ಎಂಬುವವರಿಗೆ ಸೇರಿದ ಜಾನುವಾರಗಳು ಇದಾಗಿದ್ದು ತಡ ರಾತ್ರಿ ಆಕಸ್ಮಿಕವಾಗಿ ಆದ ವಿದ್ಯುತ್ ಶಾರ್ಟ ಸರ್ಕ್ಯೂಟ್’ನಿಂದ ಕೊಟ್ಟಿಗೆಗೆ ಬೆಂಕಿ ತಗುಲಿ ನಾಲ್ಕು ಆಕಳು, ಮೂರು ಕರುಗಳು ಸಜೀವ ದಹಿಸಿ ಹೋಗಿದೆ. ಅಂದಾಜು 2.5 ಲಕ್ಷ ಮೌಲ್ಯದ ಜಾನುವಾರಗಳು ಇದಾಗಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದೆ. ಅದೃಷ್ಟವಶಾತ್ ಮನೆಯಿಂದ ಕೊಟ್ಟಿಗೆ ದೂರ ಇರುವುದರಿಂದಾಗಿ ಮನೆಯವರು ಬೆಂಕಿ ಅನಾಹುತದಿಂದ ಪಾರಾಗಿದ್ದಾರೆ.

300x250 AD
Share This
300x250 AD
300x250 AD
300x250 AD
Back to top