Slide
Slide
Slide
previous arrow
next arrow

ಕಾಂಗ್ರೆಸ್‌ನಿಂದ ಗೊಂದಲಮಯ ಭ್ರಮಾ ಲೋಕ ಸೃಷ್ಟಿ: ಕಾಗೇರಿ

300x250 AD

ಶಿರಸಿ: ಮಾಯಾ ಲೋಕದ ಕಲ್ಪನೆ ಸೃಷ್ಟಿಸಿ ಆಡಳಿತಕ್ಕೆ ಬಂದ ಕಾಂಗ್ರೆಸ್ ಈಗ ಎರಡುವರೆ ತಿಂಗಳಿ0ದ ಗೊಂದಲಮಯ ಭ್ರಮಾ ಲೋಕ ಸೃಷ್ಟಿಸಿದೆ ಎಂದು ವಿಧಾನಸಭೆ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಮತ ಗಳಿಕೆಯ ಹಂಬಲದಲ್ಲಿ ಬಡವರನ್ನು ಇನ್ನಷ್ಟು ಕಷ್ಟಕ್ಕೆ ನೂಕಿದ್ದಾರೆ. ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನರ ಬದುಕು ಇನ್ನಷ್ಟು ಕಠಿಣವಾಗಿದೆ ಎಂದರು. ಸರ್ಕಾರದ ಆಡಳಿತ ಗೊಂದಲ ಗೂಡಾಗಿದೆ. ಸ್ಪಷ್ಟತೆ, ಪಾರದರ್ಶಕ ಇಲ್ಲ. ಬೆಲೆ ಏರಿಕೆ ಒಂದೆಡೆ ಆದರೆ ಅಭಿವೃದ್ಧಿ ಶೂನ್ಯವಾಗಿದೆ. ಅವರ ಗ್ಯಾರಂಟಿಗಳೇ ಗೊಂದಲಮಯವಾಗಿವೆ. ಉಳಿದ ಮಂತ್ರಿಗಳು ತಮ್ಮ ಇಲಾಖೆಯ ಬಗ್ಗೂ ಸಹ ಇದುವರೆಗೆ ತಿಳಿದುಕೊಂಡಿಲ್ಲ. ಚುನಾವಣೆ ಪೂರ್ವ ಹೇಳಿದಂತೆ ಯಾವ ಯೋಜನೆಯೂ ಸಮರ್ಪಕವಾಗಿ ಅನುಷ್ಠಾನ ಆಗಿಲ್ಲ. 200 ಯುನಿಟ್ ಫ್ರೀ ವಿದ್ಯುತ್ ಎಂಬ ಭರವಸೆ ಅವರದ್ದಾಗಿತ್ತಾದರೂ, ವಿದ್ಯುತ್ ದರವನ್ನು ಎರಡು ಪಟ್ಟು ಏರಿಕೆ ಮಾಡಿದ್ದಾರೆ. ವಿದ್ಯುತ್ ಬಿಲ್ ನಿರೀಕ್ಷೆಗೂ ಮೀರಿ ಬರುತ್ತಿದೆ. ಇದರಿಂದಾಗಿ ಸಣ್ಣ ಕೈಗಾರಿಕೆ ನಡೆಸುವುದು ಕಷ್ಟವಾಗಿದೆ ಎಂದರು.

300x250 AD

ಉಚಿತ ಬಸ್ ಆರಂಭಿಸುವ ಮುನ್ನ ಸೂಕ್ತ ಸಿದ್ಧತೆಯನ್ನು ಸರ್ಕಾರ ಮಾಡಿಕೊಂಡಿಲ್ಲ. ಹೆಚ್ಚುವರಿ ಬಸ್, ಚಾಲಕ ನಿರ್ವಾಹಕರನ್ನು ಸಂಸ್ಥೆಗೆ ನೀಡಿಲ್ಲ. ಖಾಸಗಿ ವಾಹನ ಪರಿಸ್ಥಿತಿ ಏನು ಎಂದು ಅರಿಯದೇ ಯೋಜನೆ ಜಾರಿಗೆ ತಂದಿದ್ದಾರೆ. ಆಟೋ, ಬಾಡಿಗೆ ವಾಹನಕ್ಕೆ ಸಮಸ್ಯೆ ಆಗಿದೆ. ಇನ್ನೊಂದೆಡೆ ಗೃಹ ಲಕ್ಷ್ಮೀ ಸರ್ವರ್ರೇ ಸರಿ ಇಲ್ಲ. ಕಾಂಗ್ರೆಸ್ ಈಗ ಅಧಿಕಾರಿಗಳ ವರ್ಗಾ ವರ್ಗಿಯಲ್ಲಿ ಬ್ಯೂಸಿ ಆಗಿದೆ. ಆರಂಭದಲ್ಲಿಯೇ ಈ ರೀತಿ ಭ್ರಷ್ಟಾಚಾರ ಆರಂಭ ಆಗಿರುವುದು ಆತಂಕಕಾರಿಯಾಗಿದೆ ಎಂದರು.
ಕಿಸಾನ ಸಮ್ಮಾನ ಯೋಜನೆ ವಾಪಸ್ ಪಡೆದು ರೈತರ ಮೇಲೆ ಏಕೆ ಹೊಡೆಯುತ್ತೀರಿ ? ವಿದ್ಯಾನಿಧಿ ಏಕೆ ಸ್ಥಗಿತಗೊಳಿಸಬೇಕಿತ್ತು ? ಹವಾಮಾನ ಆಧಾರಿತ ಬೆಳೆ ವಿಮೆಯನ್ನು ಜಾರಿಗೆ ತರುವಲ್ಲಿಯೂ ರಾಜ್ಯ ಸರ್ಕಾರ ವಿಳಂಬ ಮಾಡಿದ್ದು, ಜುಲೈ ಒಂದು ತಿಂಗಳ ಹಾನಿಗೆ ರೈತರಿಗೆ ಏನೂ ಪರಿಹಾರ ಇಲ್ಲದಂತಾಗಿದೆ.
ಇನ್ನೊ0ದೆಡೆ ಮದ್ಯ ಮಾರಾಟ ದರ , ಮೊಟಾರ್ ವಾಹನದ ಟ್ಯಾಕ್ಸ್ ಏರಿಸಿದ್ದಾರೆ. ಶಾಲಾ ವಾಹನದ ಟ್ಯಾಕ್ಸ್ ಸಹ ಮನಸೋ ಇಚ್ಚೇ ಏರಿಸಿದ್ದಾರೆ. ಬಡವರಿಗೆ ಅಕ್ಕಿ ಕೊಡುವ ಆಸಕ್ತಿಯೂ ಸರ್ಕಾರಕ್ಕಿಲ್ಳ. ಪ್ರಾಮಾಣಿಕವಾಗಿ ಅಕ್ಕಿ ಕೊಡಬೇಕೆಂಬ ಹಂಬಲ ಇದ್ದರೆ ಕೇಂದ್ರದ ಆಹಾರ ಸಚಿವರನ್ನು ಆರಂಭದಲ್ಲಿಯೇ ಹೋಗಿ ಭೇಟಿ ಮಾಡಬೇಕಿತ್ತು. ಅತಿವೃಷ್ಟಿ ಹಾನಿಗೆ ಇದುವರೆಗೂ ಹಣ ಬಿಡುಗಡೆ ಮಾಡಿಲ್ಲ. ಎನ್ ಡಿ ಆರ್ ಎಫ್ ಹಣ ಒಂದರಿoದಲೇ ಈಗ ಪರಿಹಾರ ನೀಡುವಂತಾಗಿದೆ. ಸಭಾಧ್ಯಕ್ಷನಾಗಿ ನಾನು ಕ್ಷೇತ್ರದಲ್ಲಿ ಆರಂಭಿಸಿದ ಕಾಮಗಾರಿ ಪೂರ್ಣಗೊಳಿಸಬೇಕು ಎಂದರು. ಪ್ರಶ್ನೆಗೆ ಉತ್ತರಿಸಿದ ಕಾಗೇರಿ, ಪ್ರತಿ ಪಕ್ಷ ನಾಯಕನ ಆಯ್ಕೆಯಲ್ಲಿ ಕೇಂದ್ರ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ. ರಾಜ್ಯದ ಆಗು ಹೋಗು ಕೇಂದ್ರಕ್ಕೆ ಮನದಟ್ಟು ಮಾಡಿಕೊಡಲಾಗುತ್ತಿದೆ ಎಂದರು.
ಚ0ದ್ರು ಎಸಳೆ, ನಂದನ ಸಾಗರ, ಆರ್.ಡಿ. ಹೆಗಡೆ, ಗಣಪತಿ ನಾಯ್ಕ, ಸದಾನಂದ ಭಟ್, ರವಿ ಹೆಗಡೆ ಇತರರಿದ್ದರು.

Share This
300x250 AD
300x250 AD
300x250 AD
Back to top