Slide
Slide
Slide
previous arrow
next arrow

ಟಿಆರ್‌ಸಿಯಲ್ಲಿ ದಿ. ಶ್ರೀಪಾದ್ ಹೆಗಡೆ ಕಡವೆ ಸಂಸ್ಮರಣಾ ಕಾರ್ಯಕ್ರಮ

300x250 AD

ಶಿರಸಿ: ಸಹಕಾರಿ ರಂಗದ ಭೀಷ್ಮ ದಿವಂಗತ ಶ್ರೀಪಾದ ಹೆಗಡೆ, ಕಡವೆ ಅವರ ಪುಣ್ಯತಿಥಿಯ ನಿಮಿತ್ತ ಜು.24 ಸೋಮವಾರ ಇಲ್ಲಿನ ಟಿಆರ್‌ಸಿ ಕಚೇರಿಯಲ್ಲಿ ಸಂಸ್ಮರಣಾ ಕಾರ್ಯಕ್ರಮ ನಡೆಯಿತು.

ಟಿಆರ್‌ಸಿ ಉಪಾಧ್ಯಕ್ಷರಾದ ವಿಶ್ವಾಸ ಪುಂಡಲೀಕ ಬಲ್ಸೆ, ಚವತ್ತಿ ದಿ.ಶ್ರೀಪಾದ ಹೆಗಡೆ ಅವರ ಭಾವಚಿತ್ರಕ್ಕೆ ದೀಪ ಬೆಳಗಿ ಪುಷ್ಪನಮನ ಸಲ್ಲಿಸಿ ಕಡವೆ ಹೆಗಡೆಯವರಿಗೆ ರೈತರ ಮೇಲಿದ್ದ ಕಾಳಜಿ ಹಾಗೂ ಅವರ ಕಾರ್ಯವೈಖರಿ ಕುರಿತು ಮಾತನಾಡಿದರು. ಕಡವೆ ಹೆಗಡೆಯವರ ಜನ್ಮಶತಾಬ್ಧಿ ವರ್ಷಾಚರಣೆ ಪೂರ್ವಭಾವಿ ಅಂಗವಾಗಿ ತೋಟಗಾರರ ಸ್ವಯಂ ಸಹಕಾರಿ ಅಭಿಯಾನವನ್ನು ಈಗಾಗಲೇ ಕೈಗೊಂಡು ಅನೇಕ ಕಡೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಭಾಗಿಯಾದ ಸಂದರ್ಭಗಳಲ್ಲಿ ಅಲ್ಲಿನ ಸ್ಥಳೀಯರಿಂದ ಕಡವೆಯವರ ಪ್ರಾಮಾಣಿಕ ಸೇವೆ, ಸಂಘದ ಸದಸ್ಯರ ಮೇಲಿದ್ದ ಕಾಳಜಿಯ ಬಗ್ಗೆ ಹೆಚ್ಚೆಚ್ಚು ವಿಷಯಗಳು ನಮಗೆ ತಿಳಿಯುತ್ತಿದೆ ಎಂದರು.

300x250 AD

ನಿರ್ದೇಶಕರಾದ ಆರ್.ವಿ. ಹೆಗಡೆ ಚಿಪಗಿ ಮಾತನಾಡಿ ಸಹಕಾರಿ ಸಂಘಗಳ ಮೂಲಕ ರೈತರ ಸರ್ವತೋಮುಖ ಅಭಿವೃದ್ಧಿಯನ್ನು ಹೇಗೆ ಮಾಡಬಹುದೆಂದು ಕಡವೆ ಹೆಗಡೆಯವರು ತೋರಿಸಿಕೊಟ್ಟಿದ್ದಾರೆ. ಇಂದು ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಪ್ರವೇಶಿಸದಿರಲು ಅವರೇ ಕಾರಣರಾಗಿದ್ದಾರೆ. ತೋಟಿಗರಿಗೆ ಇಂತಹ ಒಂದು ಉತ್ತಮ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟ ಕಡವೆಯವರನ್ನು ಎಲ್ಲರೂ ಸ್ಮರಿಸಲೇ ಬೇಕಿದೆ ಎಂದರು.
ಮುಖ್ಯಕಾರ್ಯನಿರ್ವಾಹಕರಾದ ರಮೇಶ ಹೆಗಡೆ ಬಾಳೆಗದ್ದೆ, ಸಿಬ್ಬಂದಿ ವಿನೋದಾ ಹೆಗಡೆ ಜುಮ್ನಕೊಪ್ಪ, ಜಿ.ಜಿ. ಹೆಗಡೆ, ಕುರುವಣಿಗೆ, ಎಂ.ಟಿ. ಮಡಿವಾಳ ಮಾತನಾಡಿದರು. ನಿರ್ದೇಶಕ ವಿಘ್ನೇಶ್ವರ ಹೆಗಡೆ, ಅಗ್ಸಾಲ ಕಿಬ್ಬಳ್ಳಿ ಹಾಗೂ ಟಿಆರ್‌ಸಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top