ಶಿರಸಿ: ಸ್ವರ ಸಂವೇದನಾ ಪ್ರತಿಷ್ಠಾನ (ರಿ) ಗಿಳಿಗುಂಡಿ ಆಯೋಜಿಸಿದ್ದ ‘ನಾದಸಿಂಚನ’ ಸಂಗೀತ ಕಾರ್ಯಕ್ರಮವು ಜುಲೈ 15 ಶನಿವಾರದಂದು ಸಂಜೆ ಶಿರಸಿಯ ಟಿ.ಆರ್.ಸಿ. ಸಭಾಭವನದಲ್ಲಿ ಟಿ.ಆರ್.ಸಿ.ಎ.ಸಿ. ಸೊಸೈಟಿಯವರ ಸಹಕಾರದೊಂದಿಗೆ ಯಶಸ್ವಿಯಾಗಿ ನೆರವೇರಿತು.
ಟ್ರಸ್ಟನ ಗೌರವಾಧ್ಯಕ್ಷ ಎಂ.ಕೆ. ಹೆಗಡೆ ಧಾರವಾಡ, ಸಿವಿಲ್ ಇಂಜೀನಿಯರ್ ಮತ್ತು ಕಾಂಟ್ರೆಕ್ಟರ್ ವಿ.ಎನ್. ಹೆಗಡೆ ಶಿರಸಿ ನಾಡಿನ ಪ್ರಸಿದ್ಧ ಗಾಯಕರಾದ ಪಂ.ಎಂ. ಪಿ. ಹೆಗಡೆ ಪಡಿಗೆರೆ, ಟ್ರಸ್ಟನ ಅಧ್ಯಕ್ಷ ರಾಜಾರಾಮ ಹೆಗಡೆ ಇವರು ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಟ್ರಸ್ಟನ ಅಧ್ಯಕ್ಷರು ಪ್ರಾಸ್ತಾವಿಕ ನುಡಿಯನ್ನು ನುಡಿದರು.
ಮೊದಲನೆಯದಾಗಿ ಕುಮಾರಿ ಸಂಗೀತಾ ಹೆಗಡೆ ಗಿಳಿಗುಂಡಿ ತಮ್ಮ ಗಾಯನ ಕಾರ್ಯಕ್ರಮದಲ್ಲಿ, ರಾಗ ಮುಲ್ತಾನಿ ಹಾಗೂ ‘ರಾಗ ಮೇಘ ಮಲ್ಹಾರ್’ನ್ನು ಪ್ರಸ್ತುತ ಪಡಿಸಿದರು. ಈ ಕಾರ್ಯಕ್ರಮಕ್ಕೆ ತಬಲಾದಲ್ಲಿ ಗುರುರಾಜ ಹೆಗಡೆ ಆಡುಕಳ ಹಾಗೂ ಸಂವಾದಿನಿಯಲ್ಲಿ ಸತೀಶ ಭಟ್ಟ ಹೆಗ್ಗಾರ ಇವರು ಸಹಕರಿಸಿದರು.
ನಂತರದಲ್ಲಿ ಪ್ರಸಿದ್ಧ ಬಾನ್ಸುರೀ ವಾದಕರಾದ ಪಂ. ಪ್ರವೀಣ ಗೋಡ್ಖಿಂಡಿ ಹಾಗೂ ಪ್ರಸಿದ್ಧ ಸಂವಾದಿನಿ ಕಲಾವಿದರಾದ ಪಂ. ಗುರುಪ್ರಸಾದ ಹೆಗಡೆ ಇವರ ಬಾನ್ಸುರಿ, ಸಂವಾದಿನಿ ಜುಗಲ್ಬಂದಿ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮಕ್ಕೆ ಪ್ರಸಿದ್ಧ ತಬಲಾ ಕಲಾವಿದರಾದ ಪಂ. ರವೀಂದ್ರ ಯಾವಗಲ್ ತಬಲಾದಲ್ಲಿ ಸಹಕರಿಸಿದರು. ಇವರು ರಾಗ ಪೂರಿಯಾ ಹಾಗೂ ರಾಗ ಜನಸಮ್ಮೋಹಿನಿಯನ್ನು ಪ್ರಸ್ತುತಪಡಿಸಿದರು.ಈ ಅಪರೂಪದ ಕಾರ್ಯಕ್ರಮಕ್ಕೆ ಶಿರಸಿಯ ಪ್ರಸಿದ್ಧ ಕಲಾವಿದರುಗಳು ಉಪಸ್ಥಿತರಿದ್ದರು. ಅಲ್ಲದೇ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಈ ಕಾರ್ಯಕ್ರಮವನ್ನು ಶ್ರೀಮತಿ ಸಿಂಧೂ ಚಂದ್ರ ನಿರೂಪಿಸಿದರೆ, ಟ್ರಸ್ಟಿನ ಅಧ್ಯಕ್ಷ ರಾಜಾರಾಮ ಹೆಗಡೆ ಬಿಳೇಕಲ್ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.