ಶಿರಸಿ: ಉತ್ತರ ಕನ್ನಡ ಸಾವಯವ ಒಕ್ಕೂಟ ಹಾಗೂ ವನಸ್ತ್ರೀ ಸಂಸ್ಥೆಯ ಸಹಯೋಗದಲ್ಲಿ ಜು.14,15ರಂದು ಶಿರಸಿ ಎಪಿಎಂಸಿ ಯಾರ್ಡ್, ಟಿಆರ್‌ಸಿ ಪಕ್ಕದ ಉತ್ತರ ಕನ್ನಡ ಸಾವಯವ ಒಕ್ಕೂಟದ ಕಟ್ಟಡದಲ್ಲಿ ಆಯೋಜಿಸಲಾಗಿದೆ.
ಹಿನ್ನೆಲೆ:
ಕೊರೋನಾ ನಂತರದ ಕಾಲಘಟ್ಟದಲ್ಲಿ ಸಾಂಪ್ರದಾಯಿಕ ತರಕಾರಿ ಬೀಜಗಳು, ಕೈತೋಟ ಎಲ್ಲವೂ ಮರೆಯಾಗುತ್ತಿದ್ದು, ಆಧುನಿಕ ಜೀವನದ ಭರಾಟೆಯಲ್ಲಿ ಎಲ್ಲಾ ಆಹಾರೋತ್ಪನ್ನಗಳು,ರೆಡಿ ಟು ಕುಕ್,ರೆಡಿ ಟು ಈಟ್ ಎಂಬ ವಿಷಯಗಳಿಗೆ ಮಾತ್ರ ಸೀಮಿತವಾಗಿದೆ.
ಮೊದಲು ತಮ್ಮ ಮನೆಯ ಹಿತ್ತಲುಗಳಲ್ಲಿ ತಮಗೆ ಸಾಕಾಗುವಷ್ಟು ತರಕಾರಿ, ಸೊಪ್ಪುಗಳನ್ನು ಬೆಳೆದುಕೊಳ್ಳುವುದರ ಜೊತೆ ತಮ್ಮ ಸುತ್ತಮುತ್ತಲಿನ ಎಲ್ಲರಿಗೂ ತರಕಾರಿಗಳನ್ನು ಹಂಚುತ್ತಿದ್ದರು. ಆದರೆ ಇವೆಲ್ಲವೂ ಕಣ್ಮರೆಯಾಗಿದ್ದು, ಇವೆಲ್ಲದರ ಮಧ್ಯದಲ್ಲಿ ನಮ್ಮ ಸಾಂಪ್ರದಾಯಿಕ ತರಕಾರಿಗಳು ಮರೆಯಾಗಿ ಹೈಬ್ರಿಡ್ ತರಕಾರಿಗಳ ಅಂದ-ಚಂದಗಳಿಗೆ ಮಾರುಹೋಗುತ್ತಿದ್ದಾರೆ.
ಈ ನಿಟ್ಟಿನಲ್ಲಿ ಸಾಂಪ್ರದಾಯಿಕ ತರಕಾರಿ ಬೀಜಗಳನ್ನು ಹಾಗೂ ತಳಿಗಳನ್ನು ಸಂರಕ್ಷಿಸುವ ಉದ್ದೇಶದಿಂದ, ಇದಕ್ಕೆ ವಾಣಿಜ್ಯ ರೂಪ ನೀಡಿ, ರೈತರು ನೇರವಾಗಿ ತಾವು ಸಂರಕ್ಷಿಸಿದ ತರಕಾರಿ ಬೀಜಗಳನ್ನು ನೇರವಾಗಿ ಗ್ರಾಹಕರಿಗೆ ಒದಗಿಸುವ ಅಪರೂಪದ ಕ್ಷಣಗಳಿಗೆ ಉತ್ತರ ಕನ್ನಡ ಸಾವಯವ ಒಕ್ಕೂಟ ಸಾಕ್ಷಿಯಾಗುತ್ತಿದೆ. ಕಳೆದ 20ವರ್ಷಗಳಿಂದ ಸಾಂಪ್ರದಾಯಿಕ ತರಕಾರಿ ಬೀಜಗಳನ್ನು ಸಂರಕ್ಷಿಸಲು ರೈತರಿಗೆ ಮಾರ್ಗದರ್ಶನ ನೀಡುತ್ತಿರುವ ವನಸ್ತ್ರೀ ಸಂಸ್ಥೆಯು ಈ ಮೇಳಕ್ಕೆ ಸಹಕಾರ ನೀಡುತ್ತಿದೆ.
2022ರಲ್ಲಿಯೂ ಉತ್ತರ ಕನ್ನಡ ಸಾವಯವ ಒಕ್ಕೂಟವು ವನಸ್ತ್ರೀ ಸಂಸ್ಥೆಯ ಸಹಯೋಗದಲ್ಲಿ ಸಾಂಪ್ರದಾಯಿಕ ತರಕಾರಿ ಬೀಜಮೇಳವನ್ನು ಆಯೋಸಿತ್ತು. 2022 ರ ಮೇಳದಲ್ಲಿ 20ಕ್ಕೂ ಹೆಚ್ಚಿನ ಸಾಂಪ್ರದಾಯಿಕ ತರಕಾರಿ ಬೀಜ ಸಂರಕ್ಷಕರು ಭಾಗವಹಿಸಿ ಬೀಜಗಳನ್ನು ಮಾರಾಟ ಮಾಡಿದ್ದು, 800ಕ್ಕೂ ಅಧಿಕ ಆಸಕ್ತ ಗ್ರಾಹಕರು ಈ ಮೇಳಕ್ಕೆ ಭೇಟಿ ನೀಡಿ ಬೀಜಗಳನ್ನು ಖರೀದಿಸಿದ್ದಾರೆ. ಗ್ರಾಹಕರ ಈ ಸಕಾರಾತ್ಮಕ ಸ್ಪಂದನೆಯು ಈ ಬಾರಿಯ ಮೇಳದ ಆಯೋಜನೆಗೆ ಪ್ರೇರಣೆಯಾಗಿದೆ.