Slide
Slide
Slide
previous arrow
next arrow

ಜೈನ ಮುನಿ ಹತ್ಯೆ: ಶಿರಸಿಯಲ್ಲಿ ಜೈನ ಸಮುದಾಯದಿಂದ ಮೌನ ಪ್ರತಿಭಟನೆ

300x250 AD

ಶಿರಸಿ: ಚಿಕ್ಕೋಡಿಯಲ್ಲಿ ನಡೆದ ಆಚಾರ್ಯ ಶ್ರೀ 108 ಕಾಮಕುಮಾರನಂದಿ ಮುನಿಗಳ ಹತ್ಯೆಯನ್ನು ಖಂಡಿಸಿ ಕ್ರಮ ತೆಗೆದುಕೊಳ್ಳುವಂತೆ ಕೋರಿ ಹಾಗೂ ಜೈನಸಮುದಾಯಕ್ಕೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ಇಲ್ಲಿನ ಜೈನ ಸಮುದಾಯದವರು ಸೋಂದಾ ಜೈನಮಠದ ಸ್ವಸ್ತಿ ಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿಯವರ ನೇತೃತ್ವದಲ್ಲಿ ನಗರದ ಬಸ್ತಿಗಲ್ಲಿಯಲ್ಲಿರುವ ಪಾರ್ಶ್ವನಾಥ ಜೈನ ಮಂದಿರದಲ್ಲಿ ಸೇರಿ ಅಲ್ಲಿಂದ ಉಪವಿಭಾಗಾಧಿಕಾರಿಗಳ ಕಚೇರಿಯವರೆಗೆ ಮೌನ ಮೆರವಣಿಗೆ ನಡೆಸಿ ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸ್ವಸ್ತಿ ಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಜೈನ ಧರ್ಮವು ಹಿಂಸೆಯನ್ನು ಮಾಡಬಾರದೆನ್ನುವುದು ಹೇಳುತ್ತದೆ. ಜೈನ ಸಮುದಾಯದವರು ಯಾರಿಗೂ ತೊಂದರೆ ಮಾಡಿಲ್ಲ.ಆದರೆ ವಿಕೃತ ಮನಸ್ಸಿನವರು ಸ್ವಾಮಿಯವರ ಹತ್ಯೆ ಮಾಡಿದ್ದಾರೆ. ಶಿರಸಿಯ ಸಮಸ್ತ ಜೈನರು ಸೇರಿ ಈ ಹತ್ಯೆಯನ್ನು ಖಂಡಿಸುತ್ತೆವೆ. ಜೈನ ಸಮುದಾಯದವರಿಗೆ ರಕ್ಷಣೆ ನೀಡಬೇಕು ಮತ್ತು ಹಂತಕರಿಗೆ ಸೂಕ್ತ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

300x250 AD
Share This
300x250 AD
300x250 AD
300x250 AD
Back to top