Slide
Slide
Slide
previous arrow
next arrow

ಅರಣ್ಯವಾಸಿಗಳಿಂದ ಜಿಲ್ಲಾದ್ಯಂತ ವನಮಹೋತ್ಸವ; ಒಂದು ಲಕ್ಷ ಗಿಡ ನೆಟ್ಟು, ಪರಿಸರ ಜಾಗೃತೆ: ರವೀಂದ್ರ ನಾಯ್ಕ.

300x250 AD

ಶಿರಸಿ: ಅರಣ್ಯ ಅಭಿವೃದ್ಧಿ ಮತ್ತು ಪರಿಸರ ಜಾಗೃತೆ ಹೆಚ್ಚಿಸುವ ಉದ್ದೇಶದಿಂದ ಅರಣ್ಯ ಭೂಮಿ ಹಕ್ಕು ಹೋರಾಟಕ್ಕೆ 32 ವರ್ಷವಾಗಿರುವ ಹಿನ್ನೆಲೆಯಲ್ಲಿ ಅರಣ್ಯವಾಸಿಗಳಿಂದ ‘32 ವರ್ಷ ಹೋರಾಟ- ಒಂದು ಲಕ್ಷ ಗಿಡ’ ನೆಡುವ ಮೂಲಕ ವನಮಹೋತ್ಸವವನ್ನು ಜಿಲ್ಲಾದ್ಯಂತ ಆಚರಿಸಲು ನಿರ್ಧರಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.

ಅವರು ಹೋರಾಟಗಾರರ ವೇದಿಕೆ ಕಾರ್ಯಾಲಯದಲ್ಲಿ ‘32 ವರ್ಷ ಹೋರಾಟ- ಒಂದು ಲಕ್ಷ ಗಿಡ’’ ಎಂಬ ವಿನೂತನ ರೀತಿಯ ವನಮಹೋತ್ಸವ’ ಕಾರ್ಯಕ್ರಮದ ಲಾಂಛನ ಬಿಡುಗಡೆ ಮಾಡುತ್ತಾ ಮಾತನಾಡಿದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಅಭೀವೃದ್ಧಿ ಕಾರ್ಯ, ಬೆಂಕಿ, ಜಲವಿದ್ಯುತ್ ಯೋಜನೆ, ಸಾರಿಗೆ, ಅರಣ್ಯ ಇಲಾಖೆಯ ಕಾಮಗಾರಿ ಮುಂತಾದ ಉದ್ದೇಶದಿಂದ ಜಿಲ್ಲೆಯಲ್ಲಿನ ಅರಣ್ಯ ಸಾಂಧ್ರತೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದು ವಿಷಾದಕರ. ಈ ಹಿನ್ನೆಲೆಯಲ್ಲಿ ಅರಣ್ಯ ಭೂಮಿಯ ಮೇಲೆ ಅವಲಂಭಿತ ಅರಣ್ಯವಾಸಿಗಳು ಜಿಲ್ಲಾದ್ಯಂತ ಅರಣ್ಯ ಇಲಾಖೆಯ ಸಹಕಾರವಿಲ್ಲದೇ, ಗಿಡ ನೆಟ್ಟು ಪರಿಸರ ಜಾಗೃತೆ ಮೂಡಿಸಲಾಗುವುದೆಂದು ಅವರು ಹೇಳಿದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಭೌಗೋಳಿಕವಾಗಿ 10,571 ಚದರ್.ಕೀ.ಮೀ ಪ್ರದೇಶ ಹೊಂದಿದ್ದು ಇರುತ್ತದೆ. ಅವುಗಳಲ್ಲಿ 8,500 ಚದರ್.ಕೀ.ಮೀ ಅರಣ್ಯ ಪ್ರದೇಶವಾಗಿದೆ. ಭೌಗೋಳಿಕವಾಗಿ ಜಿಲ್ಲೆಯ ಜನಸಂಖ್ಯೆಯ ಸಾಂಧ್ರತೆಯ ಪ್ರಮಾಣ ಪ್ರತಿ ಸ್ಕ್ವೇರ್ ಕೀ. ಮೀ ಗೆ 202 ಜನ ಇದ್ದರೇ, ಅರಣ್ಯ ಸಾಂದ್ರತೆಯ ಪ್ರದೇಶವು ಜನಸಂಖ್ಯೆಯ ಸಾಂಧ್ರತೆಗಿAತ 10 ಪಟ್ಟು ಹೆಚ್ಚಾಗಿ ಇದ್ದರೂ ವಾಸ್ತವಿಕವಾಗಿ ಗಿಡ, ಮರ ಪ್ರಮಾಣ ಕಡಿಮೆ ಇರುವುದು ಉಲ್ಲೇಖನಾರ್ಹ.

300x250 AD

ಈ ಸಂದರ್ಭದಲ್ಲಿ ಯಲ್ಲಾಪುರ ತಾಲೂಕ ಅಧ್ಯಕ್ಷ ಭಿಮ್ಸಿ ವಾಲ್ಮೀಕಿ, ಮುಂಡಗೋಡ ಅಧ್ಯಕ್ಷ ಶಿವಾನಂದ ಜೋಗಿ, ಜಿಲ್ಲಾ ಸಂಚಾಲಕರಾದ ಇಬ್ರಾಹಿಂ ಗೌಡಳ್ಳಿ, ರಾಜು ನರೇಬೈಲ್ ಹಾಗೂ ಪ್ರಮುಖರಾದ ದುಗ್ಗು ಮರಾಠಿ, ನೂರ್ ಅಹಮ್ಮದ್, ಗಣೇಶ ಧಾಕು ಮರಾಠಿ ಉಪಸ್ಥಿತರಿದ್ದರು.

ಅರಣ್ಯ ಇಲಾಖೆ ವನಮಹೋತ್ಸವ ಬೊಗಸ್: ಪ್ರತಿವರ್ಷ ಅರಣ್ಯ ಇಲಾಖೆಯು ನೇಡುವ ಗಿಡಗಳ ಸಂಖ್ಯೆ ಪ್ರಕಟಿಸುತ್ತದೆ. ವಿನಾಃ, ನೆಟ್ಟಂತ ಗಿಡಗಳ ರಕ್ಷಣೆ ಆಗಿರುವ ಕುರಿತು ಯಾವುದೇ ದಾಖಲೆಗಳು ಇರುವುದಿಲ್ಲ. ಕಳೆದ ವರ್ಷ ತೆಗೆದ ಹೊಂಡಕ್ಕೆ ಪ್ರಸಕ್ತ ವರ್ಷ ಗಿಡ ನೆಡುವ ನೀತಿ ಅರಣ್ಯ ಇಲಾಖೆಯದಾಗಿದೆ. ಜಿಲ್ಲೆಯ ಪರಿಸರ ಮತ್ತು ಮಣ್ಣಿಗೆ ಮಾರಕವಾಗಿರುವ ಗಿಡ, ಮರಗಳನ್ನು ಅರಣ್ಯ ಇಲಾಖೆ ನೆಡುವ ಅವೈಜ್ಞಾನಿಕವಾಗಿರುವ ಪದ್ಧತಿ ಬಿಡಬೇಕೆಂದು ಅವರು ಅಗ್ರಹಿಸಿದ್ದಾರೆ. ಅರಣ್ಯ ಇಲಾಖೆ ಗಿಡ ನೆಡುವ ವನಮೋತ್ಸವ ಯೋಜನೆ ಬೋಗಸ್ ಯೋಜನೆಯಾಗಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

Share This
300x250 AD
300x250 AD
300x250 AD
Back to top