Slide
Slide
Slide
previous arrow
next arrow

ಆಚರಣೆಗಳ ಔಚಿತ್ಯ ಅರಿತು ರೂಢಿಸಿಕೊಂಡರೆ ಫಲ ಅನನ್ಯ: ರಾಘವೇಶ್ವರ

300x250 AD

ಗೋಕರ್ಣ: ಶ್ರೇಷ್ಠ ಸಂಸ್ಕೃತಿಯ ವಾರಸುದಾರರಾಗಿರುವ ನಾವು ಸನಾತನ ಸಂಸ್ಕೃತಿ, ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುವ ಜತೆಗೆ ಅದರ ಔಚಿತ್ಯವನ್ನು ಅರ್ಥ ಮಾಡಿಕೊಂಡು ಜೀವನದಲ್ಲಿ ರೂಢಿಸಿಕೊಳ್ಳುವುದು ಅಗತ್ಯ ಎಂದು ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಪ್ರತಿಪಾದಿಸಿದರು.

ಸಂಘಟನಾ ಚಾತುರ್ಮಾಸ್ಯದ ಅಂಗವಾಗಿ ಭಾನುವಾರ ಶ್ರೀಸಂದೇಶ ಅನುಗ್ರಹಿಸಿದ ಸ್ವಾಮೀಜಿ, ನಮ್ಮದಲ್ಲದ, ಅರ್ಥಹೀನ ಆಚರಣೆಗಳು ಬೇಡ. ಈ ಅಂಧಾನುಕರಣೆ ನಿಜವಾದ ಮೂಢನಂಬಿಕೆ. ಅದರ ಬದಲು ನಮ್ಮ ಶ್ರೇಷ್ಠ ಆಚರಣೆಗಳ ಮಹತ್ವವನ್ನು ಅರಿತು ಅಳವಡಿಸಿಕೊಳ್ಳೋಣ ಎಂದು ಸಲಹೆ ಮಾಡಿದರು.

ಭಾರತೀಯ ಆಚರಣೆಗಳು ಎಂದೂ ಮೂಢನಂಬಿಕೆಗಳಲ್ಲ. ನಮ್ಮಲ್ಲಿ ಅತಿಥಿಗಳು, ಅಪರಿಚಿತರು ಭೇಟಿಯಾದಾಗ ಹಿರಿಯರಾದರೆ ನಮಸ್ಕರಿಸುವುದು, ಕಿರಿಯರಾದರೆ ಆರ್ಶೀದಿಸುವ ಪದ್ಧತಿ ಇದೆ. ಆದರೆ ವಿದೇಶಿಯರಲ್ಲಿ ಹಸ್ತಲಾಘವದ ಸಂಪ್ರದಾಯ ಇದೆ. ಸ್ಪರ್ಶದಿಂದ ಗುಣದೋಷಗಳು ಇನ್ನೊಬ್ಬರಿಗೆ ಹರಿಯುತ್ತವೆ. ಆದ್ದರಿಂದ ಅಪರಿಚಿತರ ಜತೆ ವ್ಯವಹರಿಸುವಾಗ ಎಚ್ಚರ ವಹಿಸಬೇಕು ಎಂದು ಕಿವಿಮಾತು ಹೇಳಿದರು.

300x250 AD

ವಿವಿವಿ ವಿದ್ಯಾರ್ಥಿಗಳಿಗೆ ಕಳೆದ ಮೂರು ವರ್ಷಗಳಿಂದ ಪ್ರತಿ ವಾರ ಹಣ್ಣು- ತರಕಾರಿ ಒದಗಿಸುತ್ತಾ ಬಂದಿರುವ ಬುತ್ತಿ ಬಳಗದ ವತಿಯಿಂದ ರೈಟ್ ಟೂ ಲೀವ್ ಹಾಗೂ ಕೋಟೆ ಫೌಂಡೇಷನ್ ಸಹಯೋಗದಲ್ಲಿ ಗುರುಕುಲ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್‌ಗಳನ್ನು ವಿತರಿಸಲಾಯಿತು. ಬುತ್ತಿ ಬಳಗದ ಆರ್.ಸಿ.ಭಾರಧ್ವಜ ಕುಳಮರ್ವ, ರೈಟ್ ಟೂ ಲೀವ್ ಸಂಸ್ಥೆಯ ವ್ಯವಸ್ಥಾಪಕ ವೀರೇಶ್, ಕೋಟೆ ಫೌಂಡೇಷನ್‌ನ ಗಣಪಯ್ಯ ಮತ್ತಿತರರು ವೇದಿಕೆಯಲ್ಲಿದ್ದರು. ಶಶಿಕಲಾ ಕೂರ್ಸೆಯವರು ಸಾರ್ವಭೌಮ ಗುರುಕುಲದ ಪಿಯು ವಿಭಾಗದ ಪ್ರಾಚಾರ್ಯರಾಗಿ ಶ್ರೀಗಳಿಂದ ನಿಯುಕ್ತಿಪತ್ರ ಪಡೆದರು. ವಿವಿವಿ ಆಡಳಿತಾಧಿಕಾರಿ ಪ್ರಸನ್ನಕುಮಾರ್ ಟಿ.ಜಿ, ಶಿಕ್ಷಣ ಸಂಯೋಜಕಿ ಅಶ್ವಿನಿ ಉಡುಚೆ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top