• Slide
    Slide
    Slide
    previous arrow
    next arrow
  • ಜು.9ಕ್ಕೆ ‘ತೋಟಗಾರರ ಸ್ವಯಂ-ಸಹಕಾರಿ ಅಭಿಯಾನ’ ಉದ್ಘಾಟನೆ

    300x250 AD

    ಶಿರಸಿ: ಹಿರಿಯ ಸಹಕಾರಿ ದಿವಂಗತ ಶ್ರೀಪಾದ ಹೆಗಡೆ ಕಡವೆಯವರ ಜನ್ಮಶತಾಬ್ಧಿ – 2024 ವರ್ಷಾಚರಣೆಯ ಪೂರ್ವಭಾವಿ ಅಂಗವಾಗಿ ನಡೆಸಲಿರುವ ‘ತೋಟಗಾರರ ಸ್ವಯಂ-ಸಹಕಾರಿ ಅಭಿಯಾನ’ ದ ಉದ್ಘಾಟನಾ ಕಾರ್ಯಕ್ರಮವು ಜು.9, ರವಿವಾರ ಮಧ್ಯಾಹ್ನ 3.30 ಕ್ಕೆ ನಗರದ ಎಪಿಎಂಸಿ ಆವಾರದಲ್ಲಿನ ಟಿ.ಎಸ್.ಎಸ್ ಸಭಾಭವನದಲ್ಲಿ ನಡೆಯಲಿದೆ.

    ಕಾರ್ಯಕ್ರಮದ ಉದ್ಘಾಟಕರಾಗಿ ಟಿ.ಆರ್.ಸಿ ಅಧ್ಯಕ್ಷ, ಟಿಎಸ್ಎಸ್ ಕಾರ್ಯಾಧ್ಯಕ್ಷ, ಕೆಡಿಸಿಸಿ ನಿರ್ದೇಶಕರಾಗಿರುವ ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ ಆಗಮಿಸುವರು. ಮುಖ್ಯ ಅತಿಥಿಗಳಾಗಿ ಶಿರಸಿಯ ಅಗ್ರಿಕಲ್ಚರಲ್ ಡೆವಲಪ್ಮೆಂಟ್ ಸೊಸೈಟಿ ಅಧ್ಯಕ್ಷ ಭಾಸ್ಕರ ಹೆಗಡೆ ಕಾಗೇರಿ, ಎಪಿಎಂಪಿಸಿ ಅಧ್ಯಕ್ಷ ಜಿ.ಆರ್.ಹೆಗಡೆ ಸೋಂದಾ, ಟಿಎಸ್ಎಸ್ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ, ಎಂ.ಇ.ಎಸ್ ನಿರ್ದೇಶಕ ಎಸ್.ಕೆ.ಭಾಗ್ವತ್ ಸೇರಿದಂತೆ ದಿವಂಗತ ಕಡವೆ ಹೆಗಡೆಯವರ ಒಡನಾಡಿಗಳು ಉಪಸ್ಥಿತರಿರುವರು. ಎಲ್ಲ ಸಹಕಾರಿ ಬಂಧುಗಳು, ಕಡವೆ ಹೆಗಡೆಯವರ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಿದೆ.

    300x250 AD

    Share This
    300x250 AD
    300x250 AD
    300x250 AD
    Leaderboard Ad
    Back to top