• Slide
  Slide
  Slide
  previous arrow
  next arrow
 • ಸಿಎ ಫಲಿತಾಂಶ ಪ್ರಕಟ: ನಿತ್ಯಾನಂದ ಮರಾಠಿ ಮೊದಲ ಪ್ರಯತ್ನದಲ್ಲೇ ತೇರ್ಗಡೆ

  300x250 AD

  ಹೊನ್ನಾವರ: ಮೊದಲ ಪ್ರಯತ್ನದಲ್ಲೇ ತಾಲೂಕಿನ ಕಾಸಗೆರಿಯ ವಿಷ್ಣು ಮರಾಠಿ ಮತ್ತು ರಾಧಾ ಮರಾಠಿ ಅವರ ಮಗನಾದ ನಿತ್ಯಾನಂದ ಮರಾಠಿ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಸಿ.ಎ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾನೆ.

  ಕುಂಬ್ರಿ ಮರಾಠಿ ಸಮುದಾಯದ ಈತನು ಸಾಧಾರಣ ಸರ್ಕಾರಿ ಶಾಲಾ ಕಾಲೇಜಿನಲ್ಲಿ ಯಾವುದೇ ತರಬೇತಿ ಕೇಂದ್ರದ ಸಹಕಾರವಿಲ್ಲದೆ ಸ್ವ ಪ್ರಯತ್ನದಿಂದ ತನ್ನ ಪರೀಕ್ಷೆಯನ್ನು ಮುಗಿಸಿದ್ದಾನೆ. ಸಿಎ ಜಿ.ಎಸ್.ಕಾಮತ್ ಆ್ಯಂಡ್ ಕಾಮತ್ ಕಂಪನಿಯಲ್ಲಿ ಇಂಟರ್ನ್ಶಿಪ್ ಮುಗಿಸಿ ಅಲ್ಲಿಯೂ ತನ್ನ ಹೆಸರನ್ನು ಸಾಧಿಸಿದ್ದಾನೆ.

  300x250 AD

  ಸಿ.ಎ. ಆಗಬೇಕೆಂಬುದು ಹಲವಾರು ವಿದ್ಯಾರ್ಥಿಗಳ ಕನಸು. ಸಾಮಾನ್ಯ ಕೃಷಿ ಕುಟುಂಬದ ಈ ಛಲಗಾರ ತನ್ನ ಕನಸನ್ನು ನನಸು ಮಾಡುವಲ್ಲಿ ಸಫಲನಾಗಿದ್ದಾನೆ. ಇದರೊಂದಿಗೆ ಮನೆಯವರಿಗೆ, ಗುರುವೃಂದಕ್ಕೆ, ಸಮುದಾಯಕ್ಕೆ ಕೀರ್ತಿ ತಂದಿದ್ದಾನೆ.

  Share This
  300x250 AD
  300x250 AD
  300x250 AD
  Leaderboard Ad
  Back to top