Slide
Slide
Slide
previous arrow
next arrow

ರೋವರ್ಸ್,ರೇಂಜರ್ಸ್ ತಂಡದಿಂದ ಸರ್ಕಾರಿ ಶಾಲೆಗೆ ಬಣ್ಣ: ಸಾರ್ವಜನಿಕರ ಮೆಚ್ಚುಗೆ

300x250 AD

ಶಿರಸಿ: ‘ಸ್ಕೌಟ್ಸ್ , ಗೈಡ್ಸ್ ,ರೋವರ್ಸ್ ಹಾಗೂ ರೇಂಜರ್ಸ್ ನಡಿಗೆ.. ಶಾಲೆಯ ಸೌಂದರ್ಯವನ್ನು ಹೆಚ್ಚಿಸುವತ್ತ..’ ಎಂಬ ವಿನೂತನ ಪರಿಕಲ್ಪನೆಯೊಂದಿಗೆ ತಾಲೂಕಿನ ಮಾಡನಕೇರಿಯ  ಸ.ಹಿ.ಪ್ರಾ.ಶಾಲೆಯ ಅಡುಗೆ ಕೋಣೆ , ದಾಸ್ತಾನು ಕೊಠಡಿ ಹಾಗೂ ಮುಂಭಾಗಕ್ಕೆ ಬಣ್ಣ ಬಳಿಯುವ ಮೂಲಕ ಶಿರಸಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರೋವರ್ಸ್ ಹಾಗೂ ರೇಂಜರ್ಸ್ ತಮ್ಮ ಸೇವೆ ಸಲ್ಲಿಸಿದರು. 

 ASOC ವೀರೇಶ್ ಮಾದರ್ ನೇತೃತ್ವದಲ್ಲಿ ಶಿರಸಿ ಸ್ಥಳೀಯ ಸಂಸ್ಥೆಯೊಂದರ ಕಾರ್ಯದರ್ಶಿ ಎನ್.ಎಸ್.ಭಾಗ್ವತ್ ಮಾರ್ಗದರ್ಶನದಲ್ಲಿ ಸಂತೋಷ, ಕಿರಣ, ವಿನಾಯಕ, ಮನೋಜ್, ಅಭಿಷೇಕ್,ರವಿ,ವಿಠ್ಠಲ್,ಕಿರಣ,  ಸುಬ್ರಮಣ್ಯ, ದೀಕ್ಷಾ,ರಮ್ಯಾ ಹಾಗೂ ದಿವ್ಯಾ ಬಣ್ಣಬಳಿಯುವ ಮೂಲಕ ಶಾಲೆಯ ಸೌಂದರ್ಯವನ್ನು ಹೆಚ್ಚಿಸಿದರು. ರೋವರ್ಸ್ ಹಾಗೂ ರೇಂಜರ್ಸ್ ಗಳ ಈ ಸೇವೆ ಸಾರ್ವಜನಿಕ ಮೆಚ್ಚುಗೆಗೆ ಪಾತ್ರವಾಗಿದೆ.

300x250 AD
Share This
300x250 AD
300x250 AD
300x250 AD
Back to top