• Slide
    Slide
    Slide
    previous arrow
    next arrow
  • ಅಕ್ಕಿ ಬದಲು ಹಣ ನೀಡಲು ಮುಂದಾದ ಸರ್ಕಾರ: ಪಡಿತರ ವಿತರಕರ ಸಂಘದಿಂದ ಆಕ್ಷೇಪ

    300x250 AD

    ಶಿರಸಿ: ಕಾಂಗ್ರೆಸ್ ಸರ್ಕಾರವು ಕೊಟ್ಟ ಮಾತಿನಂತೆ 10 ಕೆ.ಜಿ ಅಕ್ಕಿ ನೀಡದೆ ಪಡಿತರ ಖಾತೆಗೆ ಹಣ ನೀಡಲು ಮುಂದಾಗಿರುವುದಕ್ಕೆ ಉತ್ತರ ಕನ್ನಡ ಜಿಲ್ಲಾ ಪಡಿತರ (ನ್ಯಾಯ ಬೆಲೆ ಅಂಗಡಿ ಮಾಲೀಕರ ಸಂಘ) ವಿತರಕರ ಸಂಘವು ಆಕ್ಷೇಪ ವ್ಯಕ್ತಪಡಿಸಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರವು ಕೊಟ್ಟ ಮಾತಿನಂತೆ 10 ಕೆ.ಜಿ ಅಕ್ಕಿ ನೀಡಿ, ಬದಲಾಗಿ ನೀವು ಹಣ ನೀಡುವ ನಿರ್ಧಾರದಿಂದ ಮಾತು ತಪ್ಪಿದಂತೆ ಆಗುತ್ತದೆ. ಆದುದರಿಂದ ಪಡಿತರದಾರರ ಖಾತೆಗೆ ಹಣ ಹಾಕುವ ಬದಲು ಆಹಾರ, ಧಾನ್ಯಗಳಾದ, ಸಕ್ಕರೆ, ಗೋಧಿ, ಜೋಳ, ರಾಗಿ ಮುಂತಾದ ಆಹಾರ ಪದಾರ್ಥಗಳನ್ನು ರೈತರಿಂದ ನೇರವಾಗಿ ಖರೀದಿ ಮಾಡಿ ಮೂರು ಕೆ.ಜಿ, ರಾಗಿ, ಎರಡು ಕೆ.ಜಿ. ಗೋಧಿ ಮತ್ತು ಈಗಾಗಲೇ ಬಿಪಿಎಲ್ ಪಡಿತರದಾರರಿಗೆ ಐದು ಕೆ.ಜಿ ಅಕ್ಕಿ ಕೊಡುತ್ತಿರುವುದರಿಂದ ಒಟ್ಟಾಗಿ 10 ಕೆ.ಜಿ ಕೊಟ್ಟಂತಾಗುತ್ತದೆ. ಹಾಗೂ ರಾಜ್ಯದಲ್ಲಿರುವ ರೈತರಿಗೂ ಅನುಕೂಲವಾಗುತ್ತದೆ. ಸಕ್ಕರೆ ಕೊಟ್ಟಲ್ಲಿ ನಷ್ಟದಲ್ಲಿರುವ ಶುಗರ್ ಫ್ಯಾಕ್ಟರಿಗಳಿಗೂ, ಮತ್ತು ಕಬ್ಬು ಬೆಳೆಗಾರರಿಗೂ ಸಹಾಯವಾಗುತ್ತದೆ.
    ಆಹಾರ ಧ್ಯಾನಗಳನ್ನು ಕೊಡದೆ, ಹಣವನ್ನೇ ಪಡಿತರದಾರರಿಗೆ ಕೊಟ್ಟಲ್ಲಿ ಹಿಂದೆ ಕೇಂದ್ರ ಸರ್ಕಾರವು ಪುದುಚೇರಿ ಮತ್ತು ಛತ್ತೀಸ್ಗಡದಲ್ಲಿ ಅಕ್ಕಿ ಬದಲು ಹಣ ನೀಡುವ ಯೋಜನೆ ಆರಂಭಿಸಿತ್ತು ಯೋಜನೆ ಆರಂಭವಾಗಿ ಕೆಲ ತಿಂಗಳಲ್ಲೇ ಸ್ಥಗಿತಗೊಂಡಿತ್ತು. ಈಗ ರಾಜ್ಯ ಸರ್ಕಾರ ಅದೇ ಮಾದರಿ ಅನುಸರಿಸುತ್ತಿರುವುದು ಸರಿಯಲ್ಲ. 10 ಕೆ.ಜಿ ಅಕ್ಕಿ ಅಥವಾ ಆಹಾರ ಧಾನ್ಯಗಳನ್ನು ನೀಡಿದ್ದಲ್ಲಿ, ನಾವುಗಳು ಪಡಿತರದಾರರಿಗೆ ವಿತರಿಸಲು ಸಿದ್ದರಿದ್ದೇವೆ ಎಂದು ವಿನಂತಿಸಿದ್ದಾರೆ.
    ಕೋವಿಡ್ ಸಂದರ್ಭದಲ್ಲಿ ಪಡಿತರ ವಿತರಕರಾದ ನಾವು ಅತ್ಯಂತ ಶ್ರಮವಹಿಸಿ ನಿಷ್ಠೆಯಿಂದ ಸಾರ್ವಜನಿಕರಿಗೆ ಪಡಿತರ ನೀಡಿದ್ದೇವೆ. ಕಾಲ ಕಾಲಕ್ಕೆ ಕಮೀಶನ್ ಹಣ ಬರದೇ ಇರುವ ಸಂದರ್ಭದಲ್ಲಿ ಸಹ ಸರಕಾರದೊಂದಿಗೆ ಕೈ ಜೊಡಿಸಿದ್ದೇವೆ. ಇವೆಲ್ಲವನ್ನು ಮನಗಂಡು ಪಡಿತರ ವಿತರಕರಿಗೆ ಅನುಕೂಲವಾಗುವಂತೆ ಮತ್ತು ಸಾರ್ವಜನಿಕರಿಗೂ ಅನುಕೂಲವಾಗುವಂತೆ ಕ್ರಮಕೈಗೊಳ್ಳುವಂತೆ ಮನವಿ ನೀಡಲಾಗಿದೆ

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top