Slide
Slide
Slide
previous arrow
next arrow

ನ್ಯಾಯ ಸಮ್ಮತವಲ್ಲದ ಸೃಜನಾತ್ಮಕ ಸ್ವಾತಂತ್ರ್ಯ: ಕತೃಗಳಿಗೆ ಬೇಕಿದೆ ಪಾಠ

300x250 AD

ಆದಿ ಪುರುಷ್ ಚಲನ ಚಿತ್ರ ಎಲ್ಲೆಡೆ ಸದ್ದು ಮಾಡುತ್ತಿದೆ. ಸ್ಟಾರ್ ನಟರ ಚಿತ್ರ ಎಂಬ ಹಿರಿಮೆ ಒಂದು ಕಡೆ ಆದರೆ ರಾಮಾಯಣದ ಕಥೆ ಎಂದು ಇನ್ನೊಂದು ಹಿರಿಮೆ.

ನಮಗೆಲ್ಲ ಭಗವಾನ್ ಶ್ರೀರಾಮಾರಾಧ್ಯ ಮಾತ್ರವಲ್ಲ, ಆದರ್ಶ ಪೂಜನೀಯ. ರಾನಾಯಣ ಕೇವಲ ಕತೆಯಲ್ಲ. ಯಾರದೋ ತಲೆಯಿಂದ ಉದ್ಭವಿಸಿದ ವಿಚಾರವೂ ಅಲ್ಲ. 

ಇತ್ತೀಚೆಗೆ ಕೃತಕ ಬುದ್ಧಿಮತ್ತೆ ಬಳಸಿ ರಾಮನ ಚಿತ್ರ ವೈರಲ್ ಆಗಿತ್ತು. ಅದರ ನಂತರ ಬಿಡುಗಡೆಯಾದ ಆದಿಪುರುಷ ಚಿತ್ರ ರಾಮಾಯಣ ಒಂದು ಕಾಲ್ಪನಿಕ ಎಂದು ಬಿಂಬಿಸುವಂತಿದೆ. ಭಾರತೀಯರು ರಾಮಾಯಣ ಜೀವನದ ಭಾಗ, ಇತಿಹಾಸದ ಸ್ವರ್ಣಮಯ ಅಧ್ಯಾಯ ಎಂದೆ ನಂಬಿದ್ದಾರೆ. ಕ್ರಿಯೇಟಿವಿಟಿ, ಸೃಜನಶೀಲತೆ ಬಳಸಿ ಏನು ಬೇಕಾದರೂ ಮಾಡಬಹುದೇ? ಆದರ್ಶಗಳನ್ನು ಊಹೆ ಎಂದೆನ್ನಬಹುದೆ? ಇದು ಅಪಮಾನವಲ್ಲವೇ? ಅನಾದರ ಅಲ್ಲವೇ? 

ಹೌದು ರಾಮನನ್ನು ಯಾರೂ ಕಂಡಿಲ್ಲ. ಕಲಾವಿದರ ಚಿತ್ರದ ಮೂಲಕ ಕಂಡಿದ್ದಾರೆ. 

ಹೌದು ನಮ್ಮಲ್ಲಿಯೂ ರಾಮಾಯಣ ವಿಧ ವಿಧವಾಗಿದೆ. ವಾಲ್ಮೀಕಿಯ ಮೂಲ ರಾಮಾಯಣದ ಹಾಗೆ ಕಾಳಿದಾಸನದ್ದಿಲ್ಲ ಕಾಳಿದಾಸ ಕಂಡ ಹಾಗೆ ಕಂಬ ರಾಮಾಯಣ ಇಲ್ಲ‌. ಹೀಗಿದ್ದ ಮೇಲೆ ಈ ಚಿತ್ರದಲ್ಲಿ ವಿಭಿನ್ನ ರೀತಿಯಲ್ಲಿ ತೋರಿಸಿದರೆ ತಪ್ಪೇನು ಎನ್ನಬಹುದು ನೀವು..

300x250 AD

ಇಲ್ಲಿಯವರೆಗೆ ಯಾವ ಕವಿ ಚಿತ್ರಿಸಿದರೂ ಅದು ಆದರ ಪೂರ್ವಕವಾಗಿ ಮೂಲ ರಾಮಾಯಣದ ಆಶಯದಂತೆಯೇ ಇದೆ. ಅದಕ್ಕೆ ಧಕ್ಕೆ ತರುವಂತಿಲ್ಲ. ಆದಿ ಪುರುಷನ ರಾಮಾಯಣ ಯಾವುದನ್ನು ಆಧರಿಸಿ ನಿರ್ಗಮಿಸಲಾಗಿದೆ ಎಂದು ನಿರ್ಮಾಪಕರು ಹೇಳಬೇಕು. ಬರಹಗಾರ ಓದಿದ ರಾಮಾಯಣ ಯಾವುದು ಎಂದಾದರೂ ಹೇಳಲಿ. ಹನುಮಂತನ ಪಾತ್ರವನ್ನು ಉದಾಹರಣೆಗೆ ನೋಡಿ. ಅಲ್ಲಿನ ಸಂಭಾಷಣೆ ” ಬಟ್ಟೆ ನಿನ್ನಪ್ಪನದು, ತೈಲ ನಿನ್ನಪ್ಪನದು ಬೆಂಕಿಯೂ ನಿನ್ನಪ್ಪನದು. ಹೀಗಾದ ಮೇಲಕೆ ಸುಡುವುದು ನಿನ್ನಪ್ಪಂದೇ” ಎನ್ನುವುದು ಯಾವ ರಾಮಾಯಾಣದಲ್ಲಿ ಬರೆದಿದೆಯೋ ಗೊತ್ತಿಲ್ಲ. ಚಿತ್ರಾದ್ಯಂತ ಇಂಥದೇ ಸಂಭಾಷಣೆಗಳ ಮೂಲಕ ಸಂವಾದ ನಡೆಯುತ್ತದೆ. ಈ ಚಿತ್ರಗಳೆಂ ಕಲಾಜಗತ್ತು ವಿಶ್ವವ್ಯಾಪಿಯಾದ ಕಾರಣ , ರಾಮಾಯಣವೇ ಗೊತ್ತಿರದ ವಿಶ್ವದ ಜನರಿಗೆ ತಪ್ಪಾಗಿ ತಿಳುವಳಿಕೆ ಉಂಟಾಗುತ್ತದೆ. ರಾಮಾಯಣ ಇಂಥದ್ದು ಎಂಬ ಭಾವನೆ ಮನೆ ಮಾಡುತ್ತದೆ. ನೀವೂ ಕೂಡ ಬರಲಿರುವ ಪೀಳಿಗೆ ಮರ್ಯಾದಾ ಪುರುಷೋತ್ತಮನ ಬಗ್ಗೆ ಅನಾದರ ಭಾವ ತಳೆಯಬೇಕೆ?  ಕಾರ್ಟೂನಿನ ಸೂಪರ್ಹೀರೋಗೆ ಸೀಮಿತವಾಗಿಬಿಡಬೇಕೆ? ಯೋಚಿಸಿ.

ಜೈ ಶ್ರೀ ರಾಮ್.

Link:https://youtu.be/oqzJbbRiOac

ಕೃಪೆ: https://www.youtube.com/@vedscienceandmaths

Share This
300x250 AD
300x250 AD
300x250 AD
Back to top