• Slide
  Slide
  Slide
  previous arrow
  next arrow
 • ಬಿಜೆಪಿಗರ ಮನಸ್ಥಿತಿ ಸುಧಾರಣೆಗೆ ದಿನಕ್ಕೊಮ್ಮೆ ದೇವಸ್ಥಾನಕ್ಕೆ ಭೇಟಿ ಅವಶ್ಯ :ಮಂಕಾಳ ವೈದ್ಯ

  300x250 AD

  ಕಾರವಾರ: ‘ಅಧಿಕಾರ ಕಳೆದುಕೊಂಡ ಬಳಿಕ ಬಿಜೆಪಿಯವರ ಮನಸ್ಥಿತಿ ಸರಿ ಇಲ್ಲ. ದಿನಕ್ಕೆ ಒಮ್ಮೆಯಾದರೂ ದೇವಸ್ಥಾನಕ್ಕೆ ಹೋಗಿ ಬಂದರೆ ಅವರ ಮನಸ್ಥಿತಿ ಸುಧಾರಿಸಬಹುದು’ ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಹೇಳಿದ್ದಾರೆ.

  ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ಮೇಲೆ ಇಲ್ಲಸಲ್ಲದ ಟೀಕೆ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ನನ್ನ ವಿರುದ್ಧವೂ ಅಪಪ್ರಚಾರ ನಡೆದಿತ್ತು. ನಾನೇ ಐದು ದೂರು ನೀಡಿದ್ದೇನೆ. ಆದರೆ ನಮ್ಮ ದೇಶದಲ್ಲಿ ಕಾನೂನು ಸರಿಯಾಗಿಲ್ಲದಿರುವುದು ಅಪಪ್ರಚಾರ ಮಾಡುವವರಿಗೆ ಅನುಕೂಲವಾಗಿದೆ.

  ‘ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ, ಅಪಪ್ರಚಾರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನು ರೂಪಿಸಲಾಗುತ್ತಿದೆ. ಅಶಾಂತಿ ವಾತಾವರಣ ನಿರ್ಮಿಸುವವರು, ತೇಜೋವಧೆ ಮಾಡುವವರ ಮೇಲೆ ಕ್ರಮ ಜರುಗಿಸಲಾಗುತ್ತದೆ’ ಎಂದು ಹೇಳಿದ್ದಾರೆ

  300x250 AD

  ‘ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ಬದಲು ದೇಶವ್ಯಾಪಿ ಅಕ್ಕಿ ಬೆಲೆ ಒಂದೇ ರೀತಿ ಇರುವಂತೆ ಕೇಂದ್ರ ಸರ್ಕಾರ ಕಾನೂನು ತರಲಿ. ಇದರಿಂದ ಬಡವರಿಗೆ ಉಪಯೋಗವಾಗಲಿದೆ’ ಎಂದು ಏಕರೂಪ ನಾಗರಿಕ ಸಂಹಿತೆ ಜಾರಿ ಯತ್ನದ ಬಗ್ಗೆ ಟೀಕಿಸಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top