ಯಲ್ಲಾಪುರ: ಮನೆಯಲ್ಲಿ ವಿದ್ಯುತ್ ಹೋಯಿತೆಂದು ಚಿಮಣಿ ದೀಪ ಹಚ್ಚಲು ಹೋದ 4 ವರ್ಷದ ಬಾಲಕನೊರ್ವನಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮೃತಪಟ್ಟ ಹೃದಯವಿದ್ರಾವಕ ಘಟನೆ ತಾಲೂಕಿನ ಹಂಸನಗದ್ದೆಯಲ್ಲಿ ನಡೆದಿದೆ.
ಈ ಘಟನೆ ಜೂ,26 ರಂದು ನಡೆದಿದ್ದು, ಗಾಯಗೊಂಡ ಬಾಲಕ ಯತಿನ್ ರವಿ ಗೌಡನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜೂ.29ರಂದು ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.