• Slide
    Slide
    Slide
    previous arrow
    next arrow
  • ಲ್ಯಾಬ್’ನಲ್ಲಿ ಕೊರೋನಾ ವೈರಸ್ ಸೃಷ್ಟಿಸಿದ ಚೀನಾ: ಸತ್ಯ ಹೊರಹಾಕಿದ ಚೀನಾ ವಿಜ್ಞಾನಿ

    300x250 AD

    ಬೀಜಿಂಗ್‌: ಜಗತ್ತಿನಾದ್ಯಂತ ಕೊರೊನಾ ಸೋಂಕಿನಿಂದ ಲಕ್ಷಾಂತರ ಜನ ಮೃತಪಟ್ಟು, ಕೋಟ್ಯಂತರ ಜನ ಸಂಕಷ್ಟ ಅನುಭವಿಸಿದ್ದಾರೆ. ಆರ್ಥಿಕ ಹೊಡೆತದಿಂದ ಹಲವು ರಾಷ್ಟ್ರಗಳು ನಲುಗಿಹೋಗಿವೆ. ಶ್ರೀಲಂಕಾದಂತಹ ರಾಷ್ಟ್ರಗಳು ದಿವಾಳಿಯಾಗಿವೆ. ಇದರ ಬೆನ್ನಲ್ಲೇ, ಕೊನೆಗೂ ಕೊರೊನಾ ಸೋಂಕಿನ ವಿಚಾರದಲ್ಲಿ ಚೀನಾದ ಕುತಂತ್ರ ಬುದ್ಧಿ ಬಯಲಾಗಿದೆ. “ಚೀನಾದ ಲ್ಯಾಬ್‌ನಲ್ಲಿಯೇ ಕೊರೊನಾ ಅಥವಾ ಕೋವಿಡ್ 19 ಸಾಂಕ್ರಾಮಿಕವನ್ನು ಅಭಿವೃದ್ಧಿಪಡಿಸಿ, ಜಗತ್ತಿನಾದ್ಯಂತ ಹರಡಲಾಗಿದೆ” ಎಂದು ಅದೇ ರಾಷ್ಟ್ರದ ಸಂಶೋಧಕರೊಬ್ಬರು ತಿಳಿಸಿದ್ದಾರೆ.

    ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯ ವೈರಾಣು ತಜ್ಞ ಚಾವೋ ಶಾವೋ ಎಂಬುವರು ಇಂಟರ್‌ನ್ಯಾಷನಲ್ ಪ್ರೆಸ್ ಅಸೋಸಿಯೇಷನ್‌ನ ಜೆನಿಫರ್ ಜೆಂಗ್ ಅವರಿಗೆ ನೀಡಿದ ಸಂದರ್ಶನದ ವೇಳೆ ಕಮ್ಯುನಿಸ್ಟ್ ರಾಷ್ಟ್ರದ ಬಣ್ಣವನ್ನು ಬಯಲು ಮಾಡಿದ್ದಾರೆ. “ಉದ್ದೇಶಪೂರ್ವಕವಾಗಿಯೇ ಕೋವಿಡ್-19ಅನ್ನು ಅಭಿವೃದ್ಧಿಪಡಿಸಿ, ಜಗತ್ತಿನಾದ್ಯಂತ ಪಸರಿಸಲಾಗಿದೆ. ಸೋಂಕಿನಿಂದ ಜನ ಪರಿತಪಿಸಬೇಕು ಎಂಬ ಕಾರಣಕ್ಕಾಗಿಯೇ ಅಭಿವೃದ್ಧಿಪಡಿಸಲಾಗಿದೆ’ ಎಂದು ಹೇಳಿದ್ದಾರೆ. ಇದು ಈಗ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.

    “ಜಗತ್ತಿನ ವಿರುದ್ಧ ಜೈವಿಕ ಸಮರ ಸಾರುವುದು ಚೀನಾ ಉದ್ದೇಶವಾಗಿತ್ತು. ಇದೇ ಕಾರಣಕ್ಕಾಗಿ ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯ ನಮಗೆ ನಮ್ಮ ಸೀನಿಯರ್ ಒಬ್ಬರು ಕೊರೊನಾ ವೈರಸ್‌ನ ನಾಲ್ಕು ತಳಿಗಳನ್ನು ನೀಡಿದರು. ನಾಲ್ಕು ತಳಿಗಳ ಸೋಂಕುಗಳು ಎಷ್ಟು ಸಾಧ್ಯವೋ ಅಷ್ಟು ಹರಡಬೇಕು, ಮನುಷ್ಯರು, ಪ್ರಾಣಿಗಳು ಸೇರಿ ಯಾವ ಜೀವಿಗಳಿಗೆ ಬೇಕಾದರೂ ಸೋಂಕು ಹರಡುವಂತಿರಬೇಕು ಎಂದರು. ಅದರಂತೆ ಸೋಂಕನ್ನು ಅಭಿವೃದ್ಧಿಪಡಿಸಲಾಯಿತು” ಎಂದು ಚಾವೋ ಶಾವೋ ತಿಳಿಸಿದರು.

    300x250 AD

    “ಕೊರೊನಾ ಸೋಂಕನ್ನು ಜೈವಿಕ ಅಸ್ತ್ರವನ್ನಾಗಿ ಮಾಡಿಕೊಳ್ಳಲಾಯಿತು. 2019ರಲ್ಲಿ ವುಹಾನ್‌ನಲ್ಲಿ ಮಿಲಿಟರಿ ವರ್ಲ್ಡ್ ಗೇಮ್ಸ್ ನಡೆಯಿತು. ಇದೇ ವೇಳೆ, ನಮ್ಮ ಒಂದಿಷ್ಟು ಸಹೋದ್ಯೋಗಿಗಳು ಕಾಣೆಯಾದರು. ಅವರು ಅಥ್ಲೆಟ್‌ಗಳು ತಂಗುವ ಹೋಟೆಲ್ ಕೋಣೆಗಳಲ್ಲಿ ವಾಸವಿದ್ದರು. ಬೇರೆ ದೇಶಗಳ ಅಥೀಟ್‌ಗಳಿಗೆ ಸೋಂಕು ಹರಡಲೆಂದೇ ನಮ್ಮ ಸಹೋದ್ಯೋಗಿಗಳು ಹೋಟೆಲ್‌ಗೆ ತೆರಳಿರಬೇಕು” ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಕೊರೊನಾದಿಂದ ಭಾರತ ಸೇರಿ ಜಗತ್ತಿನಾದ್ಯಂತ 69 ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಸುಮಾರು 76 ಕೋಟಿ ಮಂದಿಗೆ ಸೋಂಕು ತಗುಲಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top