Slide
Slide
Slide
previous arrow
next arrow

ಉಳಗಾದ ಐಟಿಐನಲ್ಲಿ ಸರಸ್ವತಿ ದೇವಿಪೂಜೆ

300x250 AD

ಕಾರವಾರ: ಉಳಗಾದ ಮಹಾಸತಿ ಐಟಿಐನಲ್ಲಿ ಪ್ರತಿವರ್ಷದಂತೆ ಎರಡು ವರ್ಷಗಳ ತರಬೇತಿ ಪಡೆದ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆ ಬರೆಯುವ ಪೂರ್ವ ಕಾರ್ಯಾಗಾರದಲ್ಲಿ ವಿದ್ಯಾದೇವತೆ ಸರಸ್ವತಿಯ ದೇವಿ ಹಾಗೂ ಯಂತ್ರೋಪಕರಣಗಳ ಪೂಜೆ ಅತಿ ಭಕ್ತಿಭಾವದಿಂದ ನಡೆಯಿತು.
ಶಿವಾಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುನೀಲದತ್ತ ಗಾವಂಕಾರ ಕಾರ್ಯಕ್ರಮದಲ್ಲಿದ್ದು ವಿದ್ಯಾರ್ಥಿಗಳಿಗೆ ಶುಭಕೋರಿದರು. ಮಹಾಸತಿ ದೇವಿಗೆ ಪೂಜೆ ಸಲ್ಲಿಸಿ ಹಾಗೂ ದಿವಂಗತ ಎಸ್.ಕೆ.ಗಾವಂಕಾರರವರ ಪುತ್ಥಳಿಗೆ ಮಾಲಾರ್ಪಣೆ ಕಾರ್ಯಕ್ರಮದ ಬಳಿಕ ಜೋಡಣೆ ಹಾಗೂ ವಿದ್ಯುತ್ತ್ಕರ್ಮಿ ಕಾರ್ಯಾಗಾರದಲ್ಲಿ ವಿಜೃಂಭಣೆಯಿ0ದ ಸರಸ್ವತಿ ದೇವಿಯ ಹಾಗೂ ಯಂತ್ರೋಪಕರಣಗಳ ಪೂಜೆ ನೆರವೇರಿತು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಸಂಜಯ ರಾಣೆ, ತರಬೇತಿ ಅಧಿಕಾರಗಳಾದ ನಾಗೇಂದ್ರ ಅಂಚೇಕರ, ವಿದ್ಯುತ್ತ್ಕರ್ಮಿ ವಿಭಾಗದ ಅಧಿಕಾರಗಳಾದ ಪ್ರಶಾಂತ ಪಿ.ನಾಯ್ಕ, ಅಕ್ಷಯ ನಾಗೇಕರ, ಶ್ರದ್ಧಾ ಶೇಟ್, ಗೀತಾ ಗಾಂವಕರ, ಅಶೋಕ ಗುನಗಿ, ಎಲ್ಲಾ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.

300x250 AD
Share This
300x250 AD
300x250 AD
300x250 AD
Back to top