ಗೋಕರ್ಣ: ಇಲ್ಲಿಯ ಸಮೀಪದ ಹನೇಹಳ್ಳಿ ಘಟಗಿಯಲ್ಲಿ ‘ಅಣ್ಣ ನಮಸ್ಕಾರ ಇಲ್ಲಿ ತ್ಯಾಜ್ಯ ವಸ್ತುಗಳನ್ನು ಚೆಲ್ಲಬೇಡಾ, ಸ್ವಚ್ಛತೆ ಕಾಪಾಡು’ ಎಂದು ನಾಮಫಲಕ ಅಳವಡಿಸಿದ್ದರೂ ಕೂಡ ಕಸ ಚೆಲ್ಲುವುದು ಮಾತ್ರ ಜನರು ಬಿಡುತ್ತಿಲ್ಲ. ಹೀಗಾಗಿ ಇದು ಸ್ಥಳೀಯ ಗ್ರಾ.ಪಂ.ನವರಿಗೂ ಕೂಡ ತಲೆನೋವು ತರುವಂತಾಗಿದೆ.
ಸಮಾಜದಲ್ಲಿ ತ್ಯಾಜ್ಯದ ಕುರಿತು ಸರಕಾರ ಹಾಗೂ ವಿವಿಧ ಸಂಘ ಸಂಸ್ಥೆಗಳು ನಿರಂತರವಾಗಿ ಜಾಗೃತಿ ಮೂಡಿಸುತ್ತ ಬಂದಿದ್ದರೂ ಕೂಡ ಇನ್ನುವರೆಗೂ ಜನರ ಮನಸ್ಥಿತಿ ಮಾತ್ರ ಬದಲಾಗಿಲ್ಲ ಎನ್ನುವುದಕ್ಕೆ ಇಲ್ಲಿಯ ಸ್ಥಳವೇ ಸಾಕ್ಷಿ ಎನ್ನುವಂತಾಗಿದೆ. ಯಾರೂ ಇಲ್ಲದ ನಿರ್ಜನ ಪ್ರದೇಶವಾಗಿರುವ ಇಲ್ಲಿ ಕೆಲವರು ತಮ್ಮ ಮನೆಯ ತ್ಯಾಜ್ಯಗಳನ್ನು ಕಾರ್, ಬೈಕ್, ಸೈಕಲ್ ಮೂಲಕ ಬರುವವರು ಕೂಡ ಇಲ್ಲಿ ಎಸೆದು ಹೋಗುತ್ತಿದ್ದಾರೆ.