ಅಂಕೋಲಾ: ತಾಲೂಕಿನ ಅಂತರಾಷ್ಟ್ರೀಯ ಅಥ್ಲೇಟಿಕ್ ಕ್ರೀಡಾ ತರಬೇತುದಾರ ಗೋವಿಂದರಾಯ್ ವೆಂಕಟರಮಣ ಗಾಂವಕರ ಅವರಿಗೆ 6 ನೇ ಪಿಫಿ ರಾಷ್ಟ್ರೀಯ ಪ್ರಶಸ್ತಿ-2023 ರ ಆಯ್ಕೆಯ ಸಮಿತಿಯು ಜೀವನದ ಅತ್ಯುತ್ತಮ ಕ್ರೀಡಾ ತರಬೇತಿಗಾಗಿ ‘ರಾಷ್ಟ್ರಮಟ್ಟದ ಡಾ. ಅಜಮೀರ್ ಸಿಂಗ ಪ್ರಶಸ್ತಿ’ಯನ್ನು ಘೋಷಿಸಿದೆ
ತಾಲೂಕಿನ ಬಾವಿಕೆರೆಯಲ್ಲಿ ಜನಿಸಿದ ಗೋವಿಂದರಾಯ್ ಅಂಕೋಲೆಯ ಜೆಸಿ ಕಾಲೇಜಿನ ವಿದ್ಯಾರ್ಥಿಯಾಗಿ, ವಿಶ್ವವಿದ್ಯಾಲಯ ಮತ್ತು ಅಂತರ್ ವಿಶ್ವವಿದ್ಯಾಲಯುದ ಕ್ರೀಡಾಕೂಟದಲ್ಲಿ ಪದಕಗಳಿಸಿ 1981 ರಿಂದ ರಾಷ್ಟ್ರೀಯ ಕ್ರೀಡಾ ಸಂಸ್ಥೆ (ಎನ್‌ಐಎಸ್) ಹಾಗೂ ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರದ ತರಬೇತುದಾರರಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪದಕ ಪಡೆದಿರುವಂತಹ ಪಿ.ಟಿ ಉಷಾ, ಎನ್ ಅಣ್ಣಾವಿ, ಸಹನಾ ಕುಮಾರಿ, ಬಾಬಿ ಆಳ್ವಾಸಿಸ್, ಚೇತನಾ ನಾಗೇಂದ್ರ ಮುಂತಾದ ಕ್ರೀಡಾಪಟುಗಳಿಗೆ ಏಷಿಯನ್ ಮತ್ತು ಒಲಂಪಿಯನ್ ಸ್ಪರ್ಧೆಗೆ ಅರ್ಹತೆ ಪಡೆದಂತಹ ಕ್ರೀಡಾಪಟುಗಳಿಗೆ ತರಬೇತಿ ನೀಡಿರುವುದು ವಿಶೇಷವಾಗಿದೆ.
ಇತ್ತಿಚಿಗೆ ಕರ್ನಾಟಕ ಸರಕಾರವು ಇವರ ಕ್ರೀಡಾ ತರಬೇತಿ ಸಾಧನೆಗಾಗಿ ಏಕಲವ್ಯ ಪ್ರಶಸ್ತಿಯನ್ನೂ ನೀಡಿದ್ದು, ಅಲ್ಲದೇ, ಬಾಂಗ್ಲಾದೇಶದ ಅಥ್ಲೇಟಿಕ್ ಫೇಡರೇಶನ್ ಪರಿಣಿತವನ್ನು ಗಮನಿಸಿ ಎತ್ತರ ಜಿಗಿತಕ್ಕೆ ಬಾಂಗ್ಲಾದೇಶದ ಕ್ರೀಡಾಪಟುಗಳಿಗೆ ತರಬೇತುದಾರರಾಗಿ ನೇಮಿಸಿರುವುದು ಗಮನಾರ್ಹ ಅಂಶವಾಗಿದೆ.
ಗೋವಿಂದರಾಯ್ ಧರ್ಮಪತ್ನಿ ನಾಗವೇಣಿ, ಮಗ ವಿಶ್ವಕಿರಣ, ಮಗಳು ಡಾ. ವಿಶ್ವಭಾರತಿ ಹಾಲಿ ಬೆಂಗಳೂರಿನಲ್ಲಿ ವಾಸ್ತವ್ಯ ಮಾಡುತ್ತಿದ್ದಾರೆ.
ಅಭಿನಂದನೆ:
ರಾಷ್ಟ್ರೀಯ ಪ್ರಶಸ್ತಿ ಪಡೆದಂತಹ ಗೊವಿಂದರಾಯ್ ಗಾಂವಕರ ಅವರಿಗೆ ಸ್ಪಂದನಾ ಸ್ಪೋರ್ಟ್ಸ ಅಕಾಡೆಮಿ ಅಧ್ಯಕ್ಷ ರವೀಂದ್ರ ನಾಯ್ಕ ಅಭಿನಂದನೆ ಸಲ್ಲಿಸುತ್ತಾ, ಅವರಿಂದ ಇನ್ನೂ ಹೆಚ್ಚಿನ ಉತ್ತಮ ತರಬೇತಿ ಕ್ರೀಡಾಪಟುಗಳಿಗೆ ದೊರಕುವಂತಾಗಲಿ ಎಂದು ಹಾರೈಸಿದ್ದಾರೆ.