Slide
Slide
Slide
previous arrow
next arrow

ಉದ್ಘಾಟನೆಗೆ ಸಜ್ಜಾದ ಶರಾವತಿ ಕುಡಿಯುವ ನೀರಿನ ಯೋಜನೆ

300x250 AD

ಹೊನ್ನಾವರ: ಪಟ್ಟಣದ ಜನತೆಗೆ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಶರಾವತಿ ಕುಡಿಯುವ ನೀರಿನ ಯೋಜನೆಯು ಮುಕ್ತಾಯ ಹಂತ ತಲುಪುತ್ತಿದ್ದು ಉದ್ಘಾಟನೆಗೆ ಸಜ್ಜಾಗಿದೆ.

ವರ್ಷವಿಡೀ ಪಟ್ಟಣದ ಜನತೆಗೆ ನೆರೆಯ ಕುಮಟಾ ಪೈಪಲೈನ್ ಮೂಲಕ ಆಗಮಿಸುವ ನೀರನ್ನೆ ಅವಲಂಭಿಸಬೇಕಿತ್ತು. ವರ್ಷದಲ್ಲಿ ಕೆಲ ದಿನ ಪೈಪ್ ಒಡೆದು ಹಾಗೂ ಇನ್ನು ಕೆಲವು ದಿನ ನೀರಿನ ಅಭಾವ ಕಾರಣದಿಂದ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿತ್ತು. ಮಾಜಿ ಶಾಸಕಿ ಶಾರದಾ ಶೆಟ್ಟಿ ಅಂದಿನ ಸಿದ್ದರಾಮಯ್ಯ ನೇತೃತ್ವದಲ್ಲಿ ಈ ಯೋಜನೆಯ ಬಗ್ಗೆ ಟೆಂಡರ್ ಆಗಿ ಕುಮಟಾದಲ್ಲಿ ಅಂದು ಚಾಲನೆ ನೀಡಿದ್ದರು. ಆ ಬಳಿಕ ಸರ್ಕಾರ ಹಾಗೂ ಶಾಸಕರು ಬದಲಾದ ಪರಿಣಾಮ ಯೋಜನೆ ಹಳ್ಳ ಹಿಡಿಯಲಿದೆ ಎನ್ನಲಾಗುತ್ತಿತ್ತು.
ಶಾಸಕರಾದ ದಿನಕರ ಶೆಟ್ಟಿ ಮೈತಿ ಸರ್ಕಾರ ಪತನದ ಬಳಿಕ ಅರಣ್ಯ ಭವನದಲ್ಲಿ ಅಧಿಕಾರಿಗಳನ್ನು ಕರೆದೊಯ್ದು ಈ ಯೋಜನೆ ಅನುಷ್ಠಾನಕ್ಕೆ ಮುಂದಾದರು. ಬಿಜೆಪಿ ಸರ್ಕಾರ ರಚನೆಯಾಗುತ್ತಿದ್ದಂತೆ ಈ ಯೋಜನೆಗೆ ಮತ್ತೊಮ್ಮೆ ಚಾಲನೆ ನೀಡಿದರು. ಕೊರೋನಾ ನೆರೆ ಹಾವಳಿ ಬಳಿಕ ಆರ್ಥಿಕ ಸಂಕಷ್ಟದ ನಡುವೆ ಈ ಯೋಜನೆ ತ್ವರಿತವಾಗಿ ನಡೆದು ಮೂರು ವಷÀðದೊಳಗೆ ಶರಾವತಿ ಯೋಜನೆಯು ಜಾರಿಯಾಗುವಂತಾಗಿದೆ.
ಒಟ್ಟು 122 ಕೋಟಿ ಅಂದಾಜು ವೆಚ್ಚದಲ್ಲಿ ಪೂರ್ಣಗೊಂಡಿರುವ ಈ ಯೋಜನೆಯು ಶಾಸಕ ದಿನಕರ ಶೆಟ್ಟಿಯವರ ನಿರಂತರ ಕಾಳಜಿ ಹಾಗೂ ಸತತ ಪ್ರಯತ್ನದಿಂದಾಗಿ ಕಡಿಮೆ ಅವಧಿಯಲ್ಲಿ ಪೂರ್ಣಗೊಂಡು ಸಾರ್ವಜನಿಕರ ಉಪಯೋಗಕ್ಕೆ ಸಜ್ಜುಗೊಂಡಿದೆ. ಕಾಮಗಾರಿಯ ಕೊನೆಯ ಹಂತದಲ್ಲಿ ತಲೆದೋರಿದ ಕೆಲವು ತಾಂತ್ರಿಕ ಅಡಚಣೆಗಳ ಕಾರಣದಿಂದ ಕೊಂಚ ವಿಳಂಬವಾಗಿತ್ತು. ಇದೀಗ ಮತ್ತೊಮ್ಮೆ ಆಯ್ಕೆಯಾದ ಬಳಿಕ ಅಧಿಕಾರಿಗಳೊಂದಿಗೆ ಹಾಗೂ ಅಭಿಯಂತರರೊoದಿಗೆ ನಿರಂತರ ಸಂಪರ್ಕದಲ್ಲಿದ್ದ ಶಾಸಕರು, ಸಭೆಗಳನ್ನು ಕರೆದು, ಆಗಾಗ ಸ್ಥಳಕ್ಕೆ ಭೇಟಿನೀಡಿ ಅಗತ್ಯ ಸಲಹೆ ಸೂಚನೆಗಳನ್ನು ನೀಡುವಮೂಲಕ ಸಮಸ್ಯೆಗಳನ್ನು ಬಗೆಹರಿಸಲು ಯಶಸ್ವಿಯಾಗಿದ್ದಾರೆ.
ಇದೀಗ ಪಟ್ಟಣದ ಪ್ರಭಾತನಗರದಲ್ಲಿ ಈಗಾಗಲೇ ನೀರು ಸರಬರಾಜು ಆಗಿದ್ದು, ಈ ವರ್ಷದಲ್ಲೆ ಪಟ್ಟಣ ನಿವಾಸಿಗಳಿಗೆ ಈ ಯೋಜನೆಯ ಸಂಪೂರ್ಣ ಪ್ರಯೋಜನ ದೊರೆಯಲಿದೆ. ಈಗಾಗಲೇ ಕುದ್ರಗಿ ಬಳಿ ಮೂರುಕಟ್ಟೆಯ ಬಳಿ ಯೋಜನೆಗೆ ಸಂಭದಿಸಿದ ಕಡ್ಟಡ ನಿರ್ಮಾಣ ಕಾರ್ಯ ಮುಗಿದಿದ್ದು, ಅಂತಿಮ ಹಂತದ ಪೈಪಲೈನ್ ಕಾರ್ಯ ಪ್ರಗತಿಯಲ್ಲಿದೆ. ದಶಕಗಳ ಪಟ್ಟಣದ ಬೇಡಿಕೆಯು ಈಡೇರಿದಂತಾಗಿದ್ದು, ಶಾಶ್ವತವಾಗಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ.

300x250 AD
Share This
300x250 AD
300x250 AD
300x250 AD
Back to top