Slide
Slide
Slide
previous arrow
next arrow

ಕುಮಟಾ- ತಿರುಪತಿ ಬಸ್ ಆರಂಭಕ್ಕೆ ಶಾಸಕರಿಗೆ ಪತ್ರ

300x250 AD

ಶಿರಸಿ: ಕುಮಟಾ ತಿರುಪತಿ ಬಸ್ ಸ್ಥಗಿತ ಮಾಡುವ ಸಾರಿಗೆ ಸಂಸ್ಥೆ ನಿರ್ಣಯಕ್ಕೆ ಶಿರಸಿ ನಿವಾಸಿ, ಹಾಲಿ ಬೆಂಗಳೂರಿನಲ್ಲಿ ನೆಲಸಿರುವ ಯುವಕನೊಬ್ಬ ಶಿರಸಿ ಶಾಸಕರಿಗೆ ಪತ್ರ ಬರೆದಿದ್ದಾನೆ. ಈ ಬಸ್ಸಿನಿಂದಾಗಿ ಬಡ ಹಾಗೂ ಮಧ್ಯಮ ವರ್ಗದವರಿಗೆ ಸಹಕಾರಿಯಾಗಿದೆ ಎಂಬುದನ್ನ ತಿಳಿಸಿದ್ದಾನೆ.

ಪತ್ರದಲ್ಲಿ, ಹಲವಾರು ವರ್ಷಗಳಿಂದ ಬೆಂಗಳೂರಿನಲ್ಲಿ ಕೆಲಸದ ನಿಮಿತ್ತ ವಾಸವಾಗಿರುತ್ತೇನೆ. ಆದಕಾರಣ ನಾನು ನನ್ನ ಊರಿಗೆ ಬಂದು ಹೋಗಲು ಕುಮಟಾ-ತಿರುಪತಿ ಬಸ್ಸಿನ ಸೇವೆಯನ್ನು ನಿರಂತರವಾಗಿ ಬಳಸಿಕೊಳ್ಳುತ್ತಾ ಬಂದಿರುತ್ತೇನೆ. ಅಲ್ಲದೇ, ನನ್ನಂತಹ ಹಲವಾರು ಶಿರಸಿ-ಸಿದ್ದಾಪುರ ನಾಗರೀಕರು ಈ ಸೇವೆಯ ಸದುಪಯೋಗವನ್ನು ಬಳಸಿಕೊಳ್ಳುತ್ತಿರುತ್ತಾರೆ. ಇಂತಹ ಸೇವೆಯನ್ನು ಒದಗಿಸಿದಂತಹ ತಮಗೆ ಹಾಗೂ ಸಾರಿಗೆ ಇಲಾಖೆಗೆ ತುಂಬು ಹೃದಯದ ಧನ್ಯವಾದಗಳು ಎಂದಿದ್ದಾರೆ.
ನಮ್ಮೆಲ್ಲ ಕೆಲಸ- ಕಾರ್ಯಗಳನ್ನು ಮುಗಿಸಿ ಬೆಂಗಳೂರಿನಿoದ ತವರೂರಿಗೆ ಪ್ರಯಾಣ ಬೆಳೆಸಲು ಇರುವ ದಿನದ ಕಡೆಯ ಬಸ್ಸ್ ಸಂಚಾರ ಸೇವೆ ಎಂದರೆ ತಪ್ಪಾಗಲಾರದು. ಕುಮಟಾದಿಂದ ಪ್ರತಿದಿನ ಸಂಜೆ 4 ಗಂಟೆಯಿoದ ತನ್ನ ಸೇವೆಯನ್ನು ಪ್ರಾರಂಭಿಸಿ ಶಿರಸಿಗೆ 5.30 ಗಂಟೆಗೆ ಬಂದು ತಲುಪುವ ಮಧ್ಯಮ ವರ್ಗದವರ ಬಸ್ಸು ಇದಾಗಿರುತ್ತದೆ. ಈ ಬಸ್ಸಿನಲ್ಲಿ ಹಲವಾರು ಬಾರಿ ಪ್ರಯಾಣಿಸಿರುವ ನನಗೆ ಬಸ್ಸ್ ನಿರ್ವಾಹಕರ, ಚಾಲಕರ ಸೇವೆಯು ಅತ್ಯತ್ತಮವಾಗಿದ್ದು ಅವರು ಪ್ರಯಾಣಿಕರೊಂದಿಗೆ ಸಹಕರಿಸುವ, ಬೆರೆಯುವ ರೀತಿ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತಾ ಬಂದಿದೆ. ಆದರೆ, ಈಗ ಬಸ್ಸಿನ ತಾಂತ್ರಿಕ ಕಾರಣಗಳಿಂದಾಗಿ ಈ ಸೇವೆಯನ್ನು ರದ್ದುಪಡಿಸುವ ನಿರ್ಣಯ ಕೈಗೊಂಡಿರುವ ಮಾತುಗಳು ಕೇಳಿಬರುತ್ತಿದೆ. ಇದರಿಂದ ಜನಸಾಮಾನ್ಯರಿಗೆ ತೊಂದರೆ ಉಂಟಾಗಲಿದೆ ಎಂದಿದ್ದಾರೆ.

300x250 AD

ಕೇವಲ ಬಸ್ಸಿನಲ್ಲಿರುವ ತಾಂತ್ರಿಕ ಮತ್ತು ಯಾಂತ್ರಿಕ ದೋಷಗಳಿಂದಾಗಿ ಕುಮಟಾ-ತಿರುಪತಿ ಮಾರ್ಗದ ಈ ಬಸ್ಸ್ ಸೇವೆಯನ್ನು ಸ್ಥಗಿತಗೊಳಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ದೋಷಪೂರಿತ ಬಸ್‌ಗಳ ಬದಲಾಗಿ ಚಾಲನೆಯಲ್ಲಿರುವ ಬಸ್ಸಗಳನ್ನು ಕುಮಟಾ-ತಿರುಪತಿ ಮಾರ್ಗದಲ್ಲಿ ಮುಂದುವರೆಸಿಕೊoಡು ಸಂಚಾರ ಸೇವೆಯನ್ನು ನಿರಂತರವಾಗಿರಿಸಬೇಕೆoದು ಕೋರಿದ್ದಾರೆ. ಇದು ಕೇವಲ ನನ್ನಂತಹ ಪ್ರಯಾಣಿಕರಲ್ಲದೆ, ಕೆಎಸ್‌ಆರ್‌ಟಿಸಿ ನಿರ್ವಾಹಕ ಹಾಗೂ ಚಾಲಕರ ಒತ್ತಾಯ ಕೂಡ ಆಗಿದೆ ಎಂದು ಶಾಸಕರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top