• Slide
    Slide
    Slide
    previous arrow
    next arrow
  • ಅರೆಕಾಲಿಕ ಉಪನ್ಯಾಸಕರ ತಾತ್ಕಾಲಿಕ ನೇಮಕಾತಿಗಾಗಿ ಅರ್ಜಿ ಆಹ್ವಾನ

    300x250 AD

    ಶಿರಸಿ: ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಶಿರಸಿಯ ಅರಣ್ಯ ಮಹಾವಿದ್ಯಾಲಯದಲ್ಲಿ 2022-23ನೇ ಸಾಲಿನ ಪ್ರಥಮ ವರ್ಷದ 2ನೇ ಷಾಣ್ಮಾಸಿಕದಲ್ಲಿ ಬಿಎಸ್‌ಸಿ (ಹಾನರ್) ಫಾರೆಸ್ಟ್ರಿ ವಿದ್ಯಾರ್ಥಿಗಳಿಗೆ ವಿಷಯಗಳನ್ನು ಭೋದಿಸಲು ಅರೆಕಾಲಿಕ ಉಪನ್ಯಾಸಕರ ತಾತ್ಕಾಲಿಕ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
    ಸದರಿ ಹುದ್ದೆಗಳಲ್ಲಿ ಸ್ಟ್ಯಾಟಿಸ್ಟಿಕಲ್ ಮೆಥಡ್ಸ್ ಮತ್ತು ಎಕ್ಸ್ಪಿರಿಯನ್ಶಿಯಲ್ ಡಿಸೈನ್ಸ್- 1, ಎಲಿಮೆಂಟ್ರಿ ಮ್ಯಾಥಮೆಟಿಕ್ 1 ಹುದ್ದೆಗಳಿದ್ದು, ಹುದ್ದೆಗಳ ಅವಧಿಯು 179 ದಿನಗಳು ಅಥವಾ ಸೆಮಿಸ್ಟರ್ ಅಂತ್ಯದವರೆಗೆ ಯಾವುದು ಮೊದಲೋ ಅದು ಇರುತ್ತದೆ. ಕೃಷಿ ವಿವಿಯಿಂದ ನಿಗದಿಪಡಿಸಲಾದಂತ ತಿಂಗಳಿಗೆ ಒಟ್ಟು ಗರಿಷ್ಠ ರೂ.40,000 ಮಿತಿಗೊಳಪಟ್ಟು ಗೌರವಧನ ಇರುತ್ತದೆ.

    ನೇಮಕಾತಿ ಪಡೆಯಲು ಬಯಸುವ ಅಭ್ಯರ್ಥಿಗಳು ಆರ್ಜಿ ನಮೂನೆಯ ಎರಡು ಪ್ರತಿಗಳೊಂದಿಗೆ ಜುಲೈ 5ರಂದು ಮುಂಜಾನೆ 11 ಗಂಟೆಗೆ ಡೀನ್ (ಅರಣ್ಯ) ಅರಣ್ಯ ಮಹಾವಿದ್ಯಾಲಯ, ಶಿರಸಿರವರ ಕಾರ್ಯಲಯದಲ್ಲಿ ಸಂದರ್ಶನಕ್ಕೆ ಹಾಜರಾಗಲು ತಿಳಿಸಲಾಗಿದೆ. ಸಂದರ್ಶನಕ್ಕೆ ಹಾಜರಾಗುವಾಗ ತಮ್ಮ ವಿದ್ಯಾರ್ಹತೆಗೆ ಸಂಬ0ಧಪಟ್ಟ ಎಲ್ಲಾ ಮೂಲ ದಾಖಲೆಗಳನ್ನು ಹಾಗೂ ಅವುಗಳ ಎರಡು ದೃಢೀಕೃತ ಪ್ರತಿಗಳನ್ನು ಸಂದರ್ಶನದ ಸಮಯದಲ್ಲಿ ತರಲು ತಿಳಿಸಲಾಗಿದೆ. ಯಾವುದೇ ಸಂದರ್ಭದಲ್ಲಿ ಆರ್ಜಿಯನ್ನು ಮುಂಗಡವಾಗಿ ಕಳುಹಿಸಬಾರದು ಎಂದು ಶಿರಸಿ ಅರಣ್ಯ ಮಹಾವಿದ್ಯಾಲಯದ ಡೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top