• Slide
  Slide
  Slide
  previous arrow
  next arrow
 • ಕಾಶಿ ವಿಶ್ವೇಶ್ವರನ ಮುಕ್ತಿಗಾಗಿ ಜೀವನದ ಕೊನೆಯ ಉಸಿರಿರುವವರೆಗೂ ಹೋರಾಡುತ್ತೇವೆ: ವಿಷ್ಣು ಶಂಕರ ಜೈನ್

  300x250 AD

  ಗೋವಾ: ಉತ್ತರಪ್ರದೇಶದ ಕಾಶಿಯ ಜ್ಞಾನವಾಪಿ ಮಸೀದಿಯಲ್ಲಿ ಮೇ.16 2022 ರಂದು ಶಿವಲಿಂಗ ಪತ್ತೆಯಾಗಿದ್ದಾಗಿನಿಂದ ನಾವು ಅದರ ಮುಕ್ತಿಗಾಗಿ ನಿರಂತರವಾಗಿ ಹೋರಾಡುತ್ತಿದ್ದೇವೆ. ಈ ಹೋರಾಟದಲ್ಲಿ ಮುಸಲ್ಮಾನ ಪಕ್ಷದವರು ಯಶಸ್ವಿಯಾಗಲಾರರು ಎಂಬುದು ಗೊತ್ತಿರುವುದರಿಂದ ಈ ಅರ್ಜಿಗೆ ಸಂಬಂಧಿಸಿದಂತೆ ಅಡೆತಡೆಗಳನ್ನು ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಕೆಲವರು ಅರ್ಜಿ ಹಿಂಪಡೆದಿರುವ ವದಂತಿ ಹಬ್ಬಿಸುತ್ತಿದ್ದಾರೆ. ವಾಸ್ತವದಲ್ಲಿ ನಾವು ಯಾವುದೇ ಅರ್ಜಿಯನ್ನು ಹಿಂಪಡೆದಿಲ್ಲ ಮತ್ತು ಶ್ರೀ ಕಾಶಿ ವಿಶ್ವೇಶ್ವರನ ಮುಕ್ತಿಗಾಗಿ ನಾವು ಜೀವನದ ಕೊನೆಯ ಉಸಿರಿರುವವರೆಗೂ ಹೋರಾಟವನ್ನು ಮುಂದುವರೆಸುತ್ತೇವೆ ಎಂದು ಎಲ್ಲರಿಗೂ ಭರವಸೆ ನೀಡುತ್ತೇನೆ, ಎಂದು ’ಹಿಂದೂ ಫ್ರಂಟ್ ಫಾರ್ ಜಸ್ಟಿಸ್’ ವಕ್ತಾರ ಮತ್ತು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಷ್ಣು ಶಂಕರ ಜೈನ್ ಮನವಿ ಮಾಡಿದರು.

  ಅವರು ಗೋವಾದ ಫೋಂಡಾದಲ್ಲಿರುವ ’ಶ್ರೀ ರಾಮನಾಥ ದೇವಸ್ಥಾನ’ದಲ್ಲಿ ನಡೆಯುತ್ತಿರುವ ’ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ ಎರಡನೇ ದಿನದ ’ದೇವಸ್ಥಾನ ಮುಕ್ತಿ ಅಭಿಯಾನ’ದ ಕುರಿತ ಭಾಗದಲ್ಲಿ ಮಾತನಾಡಿದರು.

  ಈ ಸಂದರ್ಭದಲ್ಲಿ ನ್ಯಾಯವಾದಿ ನೀಲೇಶ ಸಂಗೋಲಕರ್ ಕೊಲ್ಲಾಪುರದ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಶ್ರೀ ಮಹಾಲಕ್ಷ್ಮೀ ದೇವಿಯ ವಿಗ್ರಹದ ಬಗ್ಗೆ ಪ್ರಸ್ತುತ ಪರಿಸ್ಥಿತಿ, ಜೊತೆಗೆ ಕರ್ನಾಟಕದ ಸಹಕಾರ ಸಂಜೀವನಿ ಆಸ್ಪತ್ರೆಯ ಡಾ. ಎನ್. ರಮೇಶ ಹಾಸನ ಇವರು ಚನ್ನಕೇಶವ ದೇವಸ್ಥಾನದಲ್ಲಿ ಕುರಾನ್ ಓದುವ ವಿರುದ್ಧ ತಮ್ಮ ಯಶಸ್ವಿ ಹೋರಾಟದ ಬಗ್ಗೆ ವಿವರಿಸಿದರು.

  ಗಂಗಾನದಿಗೆ ರೋಗಮುಕ್ತ ಮಾಡುವ ಕ್ಷಮತೆ ಇರುವುದರಿಂದ ಗಂಗಾಜಲದ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆಯಬೇಕಿದೆ ಎಂದು ಅಲಹಾಬಾದ್ ಉಚ್ಚನ್ಯಾಯಾಲಯ ನ್ಯಾಯವಾದಿ ಅರುಣ ಗುಪ್ತ ಅಭಿಪ್ರಾಯ ವ್ಯಕ್ತಪಡಿಸಿದರು.

  300x250 AD

  ಗಂಗಾನದಿಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಆಮ್ಲಜನಕವಿದ್ದು ನದಿಯಲ್ಲಿ ’ಬ್ಯಾಕ್ಟೀರಿಯಾ ಫಾಸ್’ ಎಂಬ ವೈರಸ್ ಇದೆ. ಹಾಗಾಗಿ ಗಂಗಾಜಲ ಕೆಡುವುದಿಲ್ಲ. ಕರೋನಾ ಸಮಯದಲ್ಲಿ, ಗಂಗಾ ನದಿಯ ದಡದಲ್ಲಿರುವ ನಗರಗಳಲ್ಲಿ, ಕರೋನಾ ರೋಗಿಗಳ ಸಂಖ್ಯೆ ಇತರ ನಗರಗಳ ತುಲನೆಯಲ್ಲಿ ಅತ್ಯಂತ ಕಡಿಮೆ ಕಂಡುಬಂದಿದೆ ಮತ್ತು ಚೇತರಿಸಿಕೊಂಡವರ ಸಂಖ್ಯೆಯೂ ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿದೆ. ಗಂಗಾಜಲದಿಂದ ಕರೋನಾ ಮಾತ್ರವಲ್ಲ, ಇತರ ಕಾಯಿಲೆಗಳನ್ನೂ ಗುಣಪಡಿಸಬಹುದು. ಹಾಗಾಗಿ ಇಂತಹ ಗಂಗಾಜಲದ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯಬೇಕಿದೆ ಎಂದು ಹೇಳಿದರು.

  ಈ ಅಧಿವೇಶನವನ್ನು ಹಿಂದೂ ಜನಜಾಗೃತಿ ಸಮಿತಿಯ ವೆಬ್‌ಸೈಟ್ http://Hindujagruti.org ಮೂಲಕ ಅದೇ ರೀತಿ ಯೂಟ್ಯೂಬ್ ಚಾನೆಲ್ ’ http://Hindujagruti’ ಮೂಲಕ ವೀಕ್ಷಿಸಬಹುದಾಗಿದೆ.

  Share This
  300x250 AD
  300x250 AD
  300x250 AD
  Leaderboard Ad
  Back to top