• Slide
    Slide
    Slide
    previous arrow
    next arrow
  • ವಾಯುಸೇನೆಯಲ್ಲಿ ದೇಶದ ರಕ್ಷಣಾ ಸನ್ನದ್ಧತೆಗೆ ಸಮಗ್ರ ವಿಧಾನ ಅಳವಡಿಸಿಕೊಳ್ಳಿ: ರಾಷ್ಟ್ರಪತಿ ಮುರ್ಮು

    300x250 AD

    ನವದೆಹಲಿ: ದೇಶದ ರಕ್ಷಣಾ ಸನ್ನದ್ಧತೆಗೆ ಸಮಗ್ರ ವಿಧಾನವನ್ನು ಅಳವಡಿಸಿಕೊಳ್ಳುವಂತೆ, “ವೈಭವದಿಂದ ಆಕಾಶವನ್ನು ಸ್ಪರ್ಶಿಸಿ ಮತ್ತು ರಾಷ್ಟ್ರದ ನಿರೀಕ್ಷೆಗಳಿಗೆ ತಕ್ಕಂತೆ ಜೀವಿಸಿ” ಎಂಬ ಸ್ಪೂರ್ತಿದಾಯಕ ಧ್ಯೇಯವಾಕ್ಯದ ಚೈತನ್ಯವನ್ನು ಅಳವಡಿಸಿಕೊಳ್ಳುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾರತೀಯ ವಾಯುಪಡೆಯ ಸಿಬ್ಬಂದಿಗೆ ಕರೆ ನೀಡಿದ್ದಾರೆ.

    ಹೈದರಾಬಾದಿನಲ್ಲಿ ಇಂದು ತರಬೇತಿಯನ್ನು ಪೂರ್ಣಗೊಳಿಸಿದ ಫ್ಲೈಯಿಂಗ್ ಶಾಖೆಯಲ್ಲಿನ ಭಾರತೀಯ ವಾಯುಪಡೆಯ ತರಬೇತುದಾರರಿಗೆ ಮತ್ತು ಗ್ರೌಂಡ್ ಡ್ಯೂಟಿ ಶಾಖೆಯಲ್ಲಿನ ಪ್ರಶಿಕ್ಷಣಾರ್ಥಿಗಳಿಗೆ,  ಫ್ಲೈಯಿಂಗ್ ಆಫೀಸರ್‌ಗಳಿಗೆ ವಿಂಗ್ಸ್ ಮತ್ತು ಬ್ರೆವೆಟ್‌ಗಳನ್ನು ಪ್ರದಾನಿಸಿ ಅವರು ಮಾತನಾಡಿದರು.

    ಕಂಬೈನ್ಡ್‌ ಗ್ರಾಜ್ಯುವೇಶನ್‌ ಪರೇಡ್‌ನಲ್ಲಿ ವಿಯೆಟ್ನಾಂನ ತರಬೇತಿ ಅಧಿಕಾರಿಗಳಿಗೂ ವಿಂಗ್ಸ್ ಪ್ರದಾನಿಸಲಾಗಿದೆ. ವಾಯುಪಡೆಯ ಅಕಾಡೆಮಿಯ ಇತಿಹಾಸದಲ್ಲಿ ಭಾರತದ ರಾಷ್ಟ್ರಪತಿಗಳು ಪರಿಶೀಲನಾ ಅಧಿಕಾರಿಯಾಗಿರುವುದು ಇದೇ ಮೊದಲು.

    ದೇಶವನ್ನು ರಕ್ಷಿಸುವಲ್ಲಿ ಭಾರತೀಯ ವಾಯುಪಡೆಯ ಶ್ರೇಷ್ಠ ಪರಂಪರೆಯನ್ನು ಮುಂದುವರಿಸಲು ಮತ್ತು ಹಿಂದಿನ ಸಂಘರ್ಷಗಳ ಸಮಯದಲ್ಲಿ ಪಡೆ ತೋರಿದ ದೃಢಸಂಕಲ್ಪದಿಂದ ಮಾರ್ಗದರ್ಶನ ಪಡೆಯುವಂತೆ ನೂತನವಾಗಿ ನಿಯೋಜಿತ ಅಧಿಕಾರಿಗಳಿಗೆ ರಾಷ್ಟ್ರಪತಿ ತಿಳಿಸಿದರು.

    300x250 AD

    ವಿಪತ್ತುಗಳು ಮತ್ತು ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಟರ್ಕಿ ಮತ್ತು ಸಿರಿಯಾದಲ್ಲಿ ಇತ್ತೀಚಿನ ಕಾರ್ಯಾಚರಣೆಗಳಲ್ಲಿ ವಾಯುಪಡೆಯ ಸೇವೆಗಳನ್ನು ಶ್ಲಾಘಿಸಿದ ಅವರು, ಈ ಕಾರ್ಯಾಚರಣೆಗಳು ಪಡೆಯ ಹೆಚ್ಚಿನ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

    ರಫೆಲ್ ವಿಮಾನಗಳು ಮತ್ತು ಇತರ ಆಧುನಿಕ ಹೆಲಿಕಾಪ್ಟರ್‌ಗಳನ್ನು ಸೇರಿಸುವ ಮೂಲಕ ವಾಯುಪಡೆಯನ್ನು ಆಧುನೀಕರಿಸಲು ಮತ್ತು ಬಲಪಡಿಸಲು ನಡೆಯುತ್ತಿರುವ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು. ಇದಕ್ಕೂ ಮುನ್ನ ಅಕಾಡೆಮಿಯ ಕಮಾಂಡೆಂಟ್ ಏರ್ ಮಾರ್ಷಲ್ ಚಂದ್ರಶೇಖರ್ ನೂತನವಾಗಿ ಅಧಿಕಾರ ಸ್ವೀಕರಿಸಿದ ಅಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ತೆಲಂಗಾಣ ಗವರ್ನರ್ ಡಾ. ತಮಿಳಿಸೈ ಸೌಂದರರಾಜನ್ ಮತ್ತು ವಾಯುಪಡೆ ಮುಖ್ಯಸ್ಥ ಚೀಫ್ ಮಾರ್ಷಲ್ ವಿ ಆರ್ ಚೌಧರಿ ಕೂಡ ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top