• Slide
    Slide
    Slide
    previous arrow
    next arrow
  • ವಿಕಲಚೇತನರ ಸಬಲೀಕರಣಕ್ಕೆ ಸ್ಕೊಡವೆಸ್ ಸಂಸ್ಥೆ ಬದ್ಧ: ರಿಯಾಜ್ ಸಾಗರ

    300x250 AD

    ಕುಮಟಾ: ಸ್ಕೊಡವೆಸ್ ಸಂಸ್ಥೆ ಕಳೆದ ಒಂದೂವರೆ ದಶಕದಿಂದ ವಿಕಲಚೇತನರ ಸಬಲೀಕರಣಕ್ಕಾಗಿ ವಿವಿಧ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದು ಆರೋಗ್ಯ, ಕೌಶಲ್ಯಾಭಿವೃದ್ಧಿ, ಪುನರ್ವಸತಿ, ಸೇರಿದಂತೆ ಮುಂದುವರೆದ ಭಾಗವಾಗಿ ಕೃತಕ ಕಾಲು ಪೂರೈಕೆಗಾಗಿ ತಪಾಸಣಾ ಶಿಬಿರವನ್ನು ಆಯೋಜಿಸಿದೆ ಎಂದು ಸಂಸ್ಥೆಯ ಕಾರ್ಯಕ್ರಮಾಧಿಕಾರಿಗಳಾದ ರಿಯಾಜ ಸಾಗರ ಅವರು ತಿಳಿಸಿದರು.

    ಇಲ್ಲಿನ ತಾಲೂಕ ಪಂಚಾಯತ ಸಭಾಂಗಣದಲ್ಲಿ ಸ್ಕೊಡವೆಸ್ ಸಂಸ್ಥೆ, ಒಮೆಗಾ ಸಂಸ್ಥೆ, ಡಿ.ಎನ್.ಎ ಸಂಸ್ಥೆ ಬೆಂಗಳೂರು ಹಾಗೂ ಪ್ರಜಾವಾಣಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕೃತಕ ಕಾಲು ಪೂರೈಕೆಗಾಗಿ ಆಯೋಜಿಸಲಾದ ತಪಾಸಣಾ ಶಿಬಿರದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ಈ ತಪಾಸಣೆಯಲ್ಲಿ ಕಾರವಾರ, ಅಂಕೋಲಾ, ಭಟ್ಕಳ, ಹೊನ್ನಾವರದ ವಿಶೇಷ ಚೇತನರಿಗೆ ಅವರ ಕಾಲುಗಳ ಮಾಪನ ಮತ್ತು ಅವಶ್ಯಕತೆಗೆ ತಕ್ಕಂತೆ ವೈದ್ಯಾಧಿಕಾರಿಗಳು ತಪಾಸಣೆ ನಡೆಸಿ ಮುಂದಿನ ದಿನದಲ್ಲಿ ಕೃತಕ ಕಾಲುಗಳನ್ನು ಪೂರೈಸಲಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಒಮೆಗಾ ಸಂಸ್ಥೆಯ ವೈದ್ಯಾಧಿಕಾರಿಗಳಾದ ಡಾ. ದಿನೇಶ, ಡಾ. ಆನಂದ ರಾಜ್, ಡಾ. ಸೆಂದಿಲ್, ಡಾ.ಮದನ್, ಡಿ.ಎನ್.ಎ ಸಂಸ್ಥೆಯ ಶ್ರುತಿ ಶೆಟ್ಟಿ, ಡೆನಿಸ್ ಉಪಸ್ಥಿತರಿದ್ದರು. ಈ ತಪಾಸಣಾ ಶಿಬಿರದಲ್ಲಿ ಸುಮಾರು 30 ಕ್ಕೂ ಹೆಚ್ಚು ಫಲಾನುಭವಿಗಳು ತಪಾಸಣೆಗೆ ಒಳಗಾದರು. ಕಾರ್ಯಕ್ರಮವನ್ನು ಸ್ಕೊಡವೆಸ್ ಸಂಸ್ಥೆಯ ಸ್ಮಿತಾ ಶೆಟ್ಟಿ ಹಾಗೂ ಶರತ್ ನಾಯ್ಕರವರು ನಿರ್ವಹಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top