ಹೊನ್ನಾವರ: ತಾಲ್ಲೂಕಿನ ಹಸಿಮೀನು ವ್ಯಾಪರಸ್ಥರ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯು ಕಾಸರಕೋಡ ಟೊಂಕದಲ್ಲಿ ನಡೆದು, ಕಳೆದ ಸಾಲಿನಲ್ಲಿ ಕೈಗೊಂಡ ಕಾರ್ಯಚಟುವಟಿಗಳಿಗೆ ಅನುಮೋದನೆ ಪಡೆಯಲಾಯಿತು. ಇದೇ ವೇಳೆ ಪದಾಧಿಕಾರಿಗಳ ಆಯ್ಕೆ ನಡೆದಿದ್ದು,
ಅಧ್ಯಕ್ಷರಾಗಿ ಜಲೀಲ ಸಾಬ, ಗೌರವ ಅಧ್ಯಕ್ಷರಾಗಿ ಗಣಪತಿ ಗಂಗಾಧರ ಮೇಸ್ತ, ಉಪಾಧ್ಯಕ್ಷರಾಗಿ ರಾಜನ್ ಫರ್ನಾಂಡಿಸ್, ಕಾರ್ಯದರ್ಶಿಯಾಗಿ ಲೋಕೇಶ ಎಂ.ಜಾಧವ, ಖಜಾಂಚಿಯಾಗಿ ಪ್ರದೀಪ ಶೇಷಗಿರಿ ತಾಂಡೇಲ್, ಸಂಘಟನಾ ಕಾರ್ಯದರ್ಶಿಯಾಗಿ ರಿಜ್ವಾನ ಎಂ.ಸಾಬ, ಸಹ ಖಜಾಂಚಿಯಾಗಿ ಪಾಂಡುರಂಗ ಶೇಷಗಿರಿ ತಾಂಡೇಲ್ ಆಯ್ಕೆಯಾದರು.
ಸಭೆಯಲ್ಲಿ ಮುಂದಿನ ಸಾಲಿಗೆ ಆಡಳಿತ ಮಂಡಳಿಗೆ ಆಯ್ಕೆ ಮಾಡುವ ಮೂಲಕ ಅಧಿಕಾರ ಹಸ್ತಾಂತರಿಸಲಾಯಿತು. ಸಭೆಯಲ್ಲಿ ಮಾಜಿ ಅಧ್ಯಕ್ಷ ಗಣಪತಿ ತಾಂಡೇಲ, ಮೀನುಗಾರ ಸಂಘದ ಪ್ರಮುಖರು ಉಪಸ್ಥಿತರಿದ್ದರು.