Slide
Slide
Slide
previous arrow
next arrow

ನಗೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ

300x250 AD

ಕಾರವಾರ: ಮೇ 31ರಂದು ನಗೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಲಾಯಿತು.
ಶಾಲಾ ಮಕ್ಕಳು ಬಣ್ಣಬಣ್ಣದ ಉಡುಗೆಗಳನ್ನು ತೊಟ್ಟು ಶಾಲೆಗೆ ಆಗಮಿಸಿದ್ದರು. ಶಾಲಾ ಎಸ್.ಡಿ.ಎಂ.ಸಿ.ಯ ಪಾಲಕರು ಆಗಮಿಸಿದ್ದರು. ಮುಖ್ಯಾಧ್ಯಾಪಕ ಅಖ್ತರ ಸೈಯದ್ ಅವರ ಮಕ್ಕಳಿಗೆ ಸಿಹಿ ಪಾಯಸವನ್ನು ನೀಡಿ ಸ್ವಾಗತಿಸಿದರು.
ಶಾಲಾ ಸಹ ಶಿಕ್ಷಕಿ ರೂಪಾ ನಾಯ್ಕ ಮಕ್ಕಳನ್ನು ಸಂತೋಷದಿಂದ ಬರಮಾಡಿಕೊಂಡರು. ಅತಿಥಿ ಶಿಕ್ಷಕಿಯಾಗಿ ನಿರ್ವಹಿಸಿದ ಶುಭಾಂಗಿ ಜೆ. ಪಡುವಳಕರ ಇವರು ಇಂದಿನ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಶಾಲಾ ಮಕ್ಕಳು 2023-24ನೇ ಸಾಲಿನ ಶೈಕ್ಷಣಿಕ ಪ್ರಾರಂಭೋತ್ಸವವನ್ನು ಬಣ್ಣ ಬಣ್ಣದ ಹೂಕುಂಡ ತೆಗೆದುಕೊಂಡ ತಮ್ಮ ಹೆಸರಿನಲ್ಲಿ ಶಾಲೆಯ ಕೈತೋಟದಲ್ಲಿ ಗಿಡ ನೆಡುವ ಯೋಜನೆಯನ್ನು ಹಮ್ಮಿಕೊಂಡಿದ್ದು ವಿಶೇಷವಾಗಿತ್ತು. ಮುಖ್ಯ ಶಿಕ್ಷಕರು ಗಿಡ ನೆಡುವ ಯೋಜನೆಯ ಜಾರಿಗಾಗಿ ಮಕ್ಕಳಿಗೆ ಅಭಿನಂದಿಸಿದರು.

300x250 AD
Share This
300x250 AD
300x250 AD
300x250 AD
Back to top