• Slide
    Slide
    Slide
    previous arrow
    next arrow
  • ಶಿಕ್ಷಕರಿಗಾಗಿ ವೃತ್ತಿ ಪ್ರವೃತ್ತಿ, ಚಿಂತನ- ಮಂಥನ ಕಾರ್ಯಗಾರ

    300x250 AD

    ಕುಮಟಾ: ತಾಲೂಕಿನ ಮೂರೂರಿನ ಪ್ರಗತಿ ವಿದ್ಯಾಲಯದಲ್ಲಿ ಕೌಶಲ್ಯಾಭಿವೃದ್ಧಿ ಘಟಕದ ವತಿಯಿಂದ ಶಿಕ್ಷಕರಿಗಾಗಿ ವೃತ್ತಿ ಪ್ರವೃತ್ತಿ, ಚಿಂತನ- ಮಂಥನ ಕಾರ್ಯಗಾರ ನಡೆಯಿತು.

    ಕಾರ್ಯಗಾರವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಲ್.ಭಟ್ ಉದ್ಘಾಟಿಸಿ ಮಾತನಾಡಿದರು. ಬೋಧನೆ ಎನ್ನುವುದು ಒಂದು ಕಲೆ ಅಂತಹ ಕಲೆಯನ್ನು ಕರಗತ ಮಾಡಿಕೊಳ್ಳಲು ಕೌಶಲ್ಯಾಭಿವೃದ್ಧಿ ಸಂಸ್ಥೆ ಈ ಶಾಲೆಯಲ್ಲಿ ಪ್ರಾರಂಭವಾಗಿರುವುದು ಸಂತಸದ ಸಂಗತಿ. ವೃತ್ತಿ-ಪ್ರವೃತ್ತಿ ಮೇಳೈಸಿದಾಗ ಮಾತ್ರ ನಿವೃತ್ತಿ ಎಂಬುದಿಲ್ಲ. ಶಿಕ್ಷಕ ವೃತ್ತಿ ಶ್ರೇಷ್ಠವಾದ ವೃತ್ತಿ. ಇಂದಿನ ಶಿಕ್ಷಕರು ತಮ್ಮ ವೃತ್ತಿ ನಿಷ್ಠೆಯಿಂದ, ಪ್ರವೃತ್ತಿಯಿಂದ ಆವೃತ್ತಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು. ಅವರು ನಿವೃತ್ತರಾಗದ ಶಿಕ್ಷಕರಾಗಬೇಕು. ಇದೊಂದು ಅಪೂರ್ವವಾದ, ಅವಶ್ಯವಾದ ಕಾರ್ಯಗಾರ. ಇಂತಹ ಕಾರ್ಯಾಗಾರದ ಮೂಲಕ ಶಿಕ್ಷಕರು ತಮ್ಮ ಜ್ಞಾನ ಹೆಚ್ಚಿಸಿಕೊಂಡು ವೃತ್ತಿ ಜೀವನದಲ್ಲಿ ಅದನ್ನು ಅಳವಡಿಸಿಕೊಂಡು ಯಶಸ್ವಿ ಶಿಕ್ಷಕರಾಗಬೇಕೆಂದು ಕರೆ ನೀಡಿದರು.

    ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಬೆಂಗಳೂರಿನ ಖ್ಯಾತ ಉದ್ಯಮಿ ವಿದ್ಯಾಧರ ಹೆಗಡೆ ಮಾತನಾಡಿ, ಈ ಶಾಲೆಯಲ್ಲಿ ಕೌಶಲ್ಯಾಭಿವೃದ್ಧಿ ಘಟಕ ಪ್ರಾರಂಭಿಸಿರುವುದು ಹೆಮ್ಮೆಯ ಸಂಗತಿ. ಅದರ ಅಡಿಯಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಉತ್ತಮ ಕೌಶಲ್ಯ ಪಡೆದು ವಿಜ್ಞಾನ- ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಸ್ವಾವಲಂಭಿ ಬದುಕನ್ನು ಹೊಂದುವAತಾಗಲಿ ಎಂದು ಹಾರೈಸಿದರು.

    ಜಯಾ ಹೆಗಡೆ ಮಾತನಾಡಿ, ಶಿಕ್ಷಕರು ಇಂದಿನ ಕಾರ್ಯಾಗಾರದಲ್ಲಿ ಉತ್ತಮ ಕೌಶಲ್ಯ ಪಡೆಯುವಂತಾಗಲಿ. ಭವಿಷ್ಯದ ಪ್ರಜೆಯನ್ನ ರೂಪಿಸುವ ಮಹತ್ವದ ಜವಾಬ್ದಾರಿ ಶಿಕ್ಷಕರ ಮೇಲಿದೆ. ನಮ್ಮ ಸಂಸ್ಕೃತಿ ಪರಂಪರೆ, ದೇಶಾಭಿಮಾನ ಬೆಳೆಸುವ ಕಾರ್ಯ ನಿಮ್ಮಿಂದಾಗಲಿ ಎಂದರು.

    300x250 AD

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾನಿಕೇತನ ಸಂಸ್ಥೆಯ ಕಾರ್ಯಾಧ್ಯಕ್ಷ ಆರ್.ಜಿ. ಭಟ್ಟ ಮಾತನಾಡಿ, ಇಂದಿನ ಕಾರ್ಯಕ್ರಮ ನಮ್ಮ ಬಹುದಿನದ ಕನಸು. ಸಂಪನ್ಮೂಲ ವ್ಯಕ್ತಿಗಳು ನಮ್ಮ ಶಿಕ್ಷಕರಿಗೆ ಉತ್ತಮ ಮಾರ್ಗದರ್ಶನ ನೀಡಲಿದ್ದಾರೆ. ಶಿಕ್ಷಕರು ಅದರ ಪ್ರಯೋಜನ ಪಡೆದು, ತರಗತಿ ಕೋಣೆಗಳಲ್ಲಿ ಉತ್ತಮ ಕೌಶಲ್ಯದಿಂದ,ಆತ್ಮವಿಶ್ವಾಸದಿAದ ಬೋಧನೆ ಮಾಡುವಂತೆ ಕರೆ ನೀಡಿದರು.

    ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಡಾ.ಮಹಾಬಲೇಶ್ವರ ರಾವ್ ಮತ್ತು ರಾಘವೇಂದ್ರ ಹೇರ್ಳೆ ಉಪಸ್ಥಿತರಿದ್ದರು. ಪ್ರಾಚಾರ್ಯರದ ಜಿ.ಎಂ.ಭಟ್ಟ ಪ್ರಾಸ್ತಾವಿಸಿದರು. ಮಮತಾ ಕೆ.ಎಸ್. ವಂದಿಸಿದರು. ರಾಘವೇಂದ್ರ ಭಟ್ಟ ನಿರೂಪಿಸಿದರು. ವಿದ್ಯಾನಿಕೇತನ ಸಂಸ್ಥೆಯ ಶಿಕ್ಷಣ ವಿಭಾಗದ ಸಂಚಾಲಕರಾದ ಟಿ.ಆರ್.ಜೋಶಿ, ವಸತಿ ನಿಲಯದ ಸಂಚಾಲಕರಾದ ಐ.ಪಿ.ಭಟ್ಟ, ಎಸ್ ವಿ ಹೆಗಡೆ ಭದ್ರನ್ ಉಪಸ್ಥಿತರಿದ್ದರು.

    ಸಭಾ ಕಾರ್ಯಕ್ರಮದ ನಂತರ ಶಿಕ್ಷಕರಿಗಾಗಿ ಕಾರ್ಯಗಾರ ದಲ್ಲಿ- ‘ವೃತ್ತಿ ಪ್ರವೃತ್ತಿ’ ಈ ಕುರಿತು ‘ಪರಿಣಾಮಕಾರಿ ಸಂವಹನ’ ಈ ವಿಷಯದ ಮೇಲೆ ಡಾ. ಮಹಾಬಲೇಶ್ವರ ರಾವ್ ಸಂಪನ್ಮೂಲ ವ್ಯಕ್ತಿಗಳಾಗಿ ಗಮನ ಸೆಳೆದರೆ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲುದ್ದೇಶಗಳ ಹಾಗೂ ಅದರ ಚೌಕಟ್ಟಿನ ಕುರಿತು ರಾಘವೇಂದ್ರ ಹೇರ್ಳೆ ಅವರು ಶಿಕ್ಷಕರ ಗಮನ ಸೆಳೆದರು. ಪ್ರಗತಿ ವಿದ್ಯಾಲಯ ಸಮೂಹದ ಎಲ್ಲಾ ಶಿಕ್ಷಕರು ಕಾರ್ಯಾಗಾರದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

    Share This
    300x250 AD
    300x250 AD
    300x250 AD
    Leaderboard Ad
    Back to top