• Slide
    Slide
    Slide
    previous arrow
    next arrow
  • ಜಿಲ್ಲಾಸ್ಪತ್ರೆಯಲ್ಲಿ ಮಲಗಿದ್ದವನ ಮೊಬೈಲ್ ಎಗರಿಸಿದ ಐನಾತಿ

    300x250 AD

    ಕಾರವಾರ: ನಗರದ ಜಿಲ್ಲಾ ಆಸ್ಪತ್ರೆಯ ಹೆರಿಗೆ ವಾರ್ಡ್ ಬಳಿ ರಾತ್ರಿ ವೇಳೆ ಮಲಗಿದ್ದ ವ್ಯಕ್ತಿಯೋರ್ವನ ಮೊಬೈಲ್ ಅನ್ನು ಕಳ್ಳನೋರ್ವ ಎಗರಿಸಿರುವ ಘಟನೆ ಇತ್ತೀಚೆಗೆ ನಡೆದಿದ್ದು ಕಳ್ಳತನದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
    ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಕಳೆದ ನಾಲ್ಕು ದಿನದ ಹಿಂದೆ ಹೆರಿಗೆ ವಾರ್ಡ್ ಬಳಿ ಹಲವರು ಮಲಗಿದ್ದು ಇನ್ನು ಕೆಲವರು ಕುರ್ಚಿ ಮೇಲೆ ಕುಳಿತು ಮಾತನಾಡತೊಡಗಿದ್ದರು. ಇದೇ ವೇಳೆ ಆಗಮಿಸಿದ ಕಳ್ಳನೋರ್ವ ಮಲಗಿದ ವ್ಯಕ್ತಿ ಬಳಿ ತಾನು ಮಲಗುವ ರೀತಿ ನಾಟಕ ಮಾಡಿದ್ದಾನೆ.
    ಬಳಿಕ ವ್ಯಕ್ತಿಯ ತಲೆಯ ಬಳಿ ಮೊಬೈಲ್ ಕಂಡು ಸುತ್ತಮುತ್ತ ಯಾರು ಇಲ್ಲದನ್ನು ಗಮನಿಸಿ ನಿಧಾನವಾಗಿ ಮೊಬೈಲ್ ಕಳವು ಮಾಡಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಬೆಳಿಗ್ಗೆ ಎದ್ದಾಗ ಮೊಬೈಲ್ ಕಾಣದನ್ನು ಕಂಡು ದಂಗಾದ ವ್ಯಕ್ತಿ ಸಿಬ್ಬಂದಿಗೆ ತಿಳಿಸಿದ್ದರು. ಬಳಿಕ ಸಿಸಿ ಟಿವಿ ಚೆಕ್ ಮಾಡಿದಾಗ ಕಳ್ಳನೋರ್ವ ಮೊಬೈಲ್ ಎಗರಿಸಿರುವುದು ಪತ್ತೆಯಾಗಿದೆ. ಬಳಿಕ ಮೊಬೈಲ್ ಕಳೆದುಕೊಂಡವರು ಪೊಲೀಸ್ ದೂರು ನೀಡಿದ್ದಾರೆ ಎನ್ನಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top