• Slide
    Slide
    Slide
    previous arrow
    next arrow
  • ಜೀವನದಲ್ಲಿ ಛಲ ಇರುವವರು ಮಾತ್ರ ತಮ್ಮ ಇಚ್ಛಿತ ಕಾರ್ಯದಲ್ಲಿ ಯಶಸ್ಸನ್ನು ಗಳಿಸುತ್ತಾರೆ: ಸ್ಮಿತಾ ಕಾಮತ್

    300x250 AD

    ಶಿರಸಿ: ಜೀವನದಲ್ಲಿ ಛಲ ಇರುವವರು ಮಾತ್ರ ತಮ್ಮ ಇಚ್ಛಿತ ಕಾರ್ಯದಲ್ಲಿ ಯಶಸ್ಸನ್ನು ಗಳಿಸುತ್ತಾರೆ. ಅದಕ್ಕಾಗಿ ಅವರು ನಿರಂತರವಾಗಿ
    ಪ್ರಯತ್ನಶೀಲರಾಗಿರುತ್ತಾರೆ. ಇದಕ್ಕೆ ಶ್ರೀಮತಿ ಜಯಶ್ರೀ ನಾರಾಯಣ ನಾಯಕ ಒಳ್ಳೆಯ ಉದಾಹರಣೆ. ತಮ್ಮ ದೊಡ್ಡ ಕುಟುಂಬವನ್ನು ಸುಧಾರಿಸಿಕೊಂಡು ಹೋಗುವುದರೊOದಿಗೆ ಸುದೀರ್ಘ 50 ವರ್ಷಗಳ ಕಾಲ ಮಾತೃಭಾಷೆ ಕೊಂಕಣಿ ಸಾಹಿತ್ಯ ಸೇವೆಯನ್ನು ಎಲ್ಲರಿಗೂ ಅನುಕರಣೀಯವಾಗಿ ಮಾಡಿದ್ದಾರೆ. ಅಪಾರ ಪ್ರಮಾಣದ ಕೊಂಕಣಿ ಜಾನಪದ ಸಾಹಿತ್ಯವನ್ನು ಸಹ ಸಂಗ್ರಹಿಸಿದ್ದಾರೆ. ಹುಬ್ಬಳ್ಳಿಯ ಸರಸ್ವತಿ ಪ್ರಭಾ ಕೊಂಕಣಿ ಪತ್ರಿಕೆಯು ಪುರಸ್ಕಾರಕ್ಕೆ ಯೋಗ್ಯರನ್ನೇ ಆರಿಸಿದೆ ಎಂದು ಶಿರಸಿಯ ಶ್ರೀಮತಿ ಸ್ಮಿತಾ ಎಸ್. ಕಾಮತ್ ಹೇಳಿದರು.

    ಅವರು ಇತ್ತೀಚೆಗೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆವರಣದಲ್ಲಿ ಶ್ರೀಮತಿ ಜಯಶ್ರೀ ನಾರಾಯಣ ನಾಯಕ ಇವರಿಗೆ “ಸರಸ್ವತಿ ಪ್ರಭಾ ಪುರಸ್ಕಾರ 2023’’ ಪ್ರದಾನ ಮಾಡಿ ಮಾತನಾಡಿ ಜಯಶ್ರೀ ನಾಯಕ ಅವರ ಸಾಹಿತ್ಯ, ಗಾಯನ ಪ್ರತಿಭೆಯ ಬಗೆಗೂ ವಿಸ್ತಾರವಾಗಿ ಹೇಳಿದರು. ಮುಖ್ಯ ಅತಿಥಿಗಳಾಗಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಮೊಕ್ತೇಸರರಾದ ವಿವೇಕಾನಂದ ಕಾಮತ ಆಗಮಿಸಿದ್ದರು.
    ಸರಸ್ವತಿ ಪ್ರಭಾ ಪತ್ರಿಕಾ ಸಂಪಾದಕ ಆರ‍್ಗೋಡು ಸುರೇಶ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಕವಿ ಶ್ರೀ ರಾಮಚಂದ್ರ ಪೈ ಶಿರಸಿ
    ಸನ್ಮಾನ ಪತ್ರ ವಾಚಿಸಿದರೆ, ಶ್ರೀಧರ ನಾಯಕ ಆರಂಭದಲ್ಲಿ ಸ್ವಾಗತ ಮಾಡಿ, ಕಾರ್ಯಕ್ರಮವನ್ನು ನಿರ್ವಹಿಸಿ ಕೊನೆಗೆ
    ವಂದನಾರ್ಪಣೆಗೈದರು. ಶ್ರೀಮತಿ ಜಯಶ್ರೀ ನಾರಾಯಣ ನಾಯಕ ಇವರಿಗೆ ಶಾಲು ಹೊದಿಸಿ, ಹಣ್ಣುಹಂಪಲು ನೀಡಿ ಸನ್ಮಾನಿಸಿ ರೂ.
    5,000/- ಗಳ ಚೆಕ್, ಸ್ಮರಣಿಕೆ ಹಾಗೂ ಸನ್ಮಾನ ಪತ್ರ ಕೊಟ್ಟು ಗೌರವಿಸಲಾಯಿತು. ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವತಿಯಿಂದಲೂ
    ಶ್ರೀಯುತರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.ಈ ಸಮಾರಂಭದಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಕಾರ್ಯದರ್ಶಿ ಹರೀಶ್ ಪಂಡಿತ್, ವರೇ0ದ್ರ ಕಾಮತ್, ಜಾಗೇಶ್ ಧಾಕಪ್ಪ, ನಾಗರಾಜ್ ಶಾನಭಾಗ್, ಗೀತಾ ಕಾಮತ್, ಶ್ರೀಲಕ್ಷ್ಮಿ ಶಾನಭಾಗ್ ಜವಾಹರ್ ಹೆರ್ವಾಟ್ಟಾ, ಅನುರಾಧ ಹೆರ್ವಾಟ್ಟಾ, ಶಚಿ ಶ್ರೀಧರ್ ನಾಯಕ, ತೃಯೀ ನಾಯಕ, ವೈಜಪ್ಪ ನಾಯಕ, ಉದಯ್ ಹೆಬ್ಳೆ, ಆನಂದ್ ಪ್ರಭು, ವಿಠ್ಠಲ್ ನಾಯಕ, ವಿಘ್ನೇಶ್ ಕಾಮತ್, ಹರ್ಷ ಪ್ರಭು, ನಿರಂಜನ್ ಕಾಮತ್, ನಾಗೇಶ ನಾಯಕ, ರಾಜೇಶ ನಾಯಕ, ಚಂದನ ನಾಯಕ, ದೀಪಕ ಶೆಣೈ ಸಹಿತ ಶ್ರೀಮತಿ ಜಯಶ್ರೀ ನಾಯಕ ಇವರ ಅಪಾರ ಅಭಿಮಾನಿ ಬಳಗ ಹಾಗೂ ಕುಟುಂಬದವರು ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top