• Slide
    Slide
    Slide
    previous arrow
    next arrow
  • ಜೂ.1,2 ಕ್ಕೆ ಹೀರೆಕೈ ಶ್ರೀ ರಾಮೇಶ್ವರ ದೇವರ ಪ್ರತಿಷ್ಠಾಪನೆ,ನೂತನ ದೇವಾಲಯ ಸಮರ್ಪಣೆ

    300x250 AD

    ಸಿದ್ದಾಪುರ: ತಾಲೂಕಿನ ಹಿರೇಕೈ( ಹಾಲ್ಕಣಿ) ಯಲ್ಲಿರುವ ಪುರಾತನ ದೇವಸ್ಥಾನವಾದ ಶ್ರೀ ರಾಮೇಶ್ವರ ದೇವರ ಪ್ರತಿಷ್ಠಾಪನೆ ಹಾಗೂ ನೂತನ ದೇವಸ್ಥಾನದ ಸಮರ್ಪಣೆ ಕಾರ್ಯಕ್ರಮವು ಜೂನ್ 1 ಹಾಗೂ 2ರಂದು ನಡೆಯಲಿದೆ.

    ವಿದ್ವಾನ್ ವಿನಾಯಕ ಭಟ್ ಮತ್ತಿಹಳ್ಳಿ ಹಾಗೂ ವಿದ್ವಾನ್ ಕುಮಾರ ಭಟ್ ಕೊಳಗೀಬಿಸ್ ಅವರ ಆಚಾರ್ಯತ್ವದಲ್ಲಿ ಕಾರ್ಯಕ್ರಮಗಳು ನಡೆಯಲಿದ್ದು,
    ಜೂನ್ 1ಗುರುವಾರ ದಂದು ಗಣಪತಿ ಪೂಜೆ, ದೇವನಾಂದಿ, ಮಹಾಸಂಕಲ್ಪ , ಕಲಶ ಸ್ಥಾಪನೆ ಪೂಜೆ ಸೇರಿ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.
    ಜೂನ್ 2ರಂದು ಮುಂಜಾನೆ 6.30ಕ್ಕೆ ವೃಷಭ ಲಗ್ನದ ಶುಭ ಮೂಹೂರ್ತದಲ್ಲಿ ರಾಮೇಶ್ವರ ದೇವರ ಪ್ರತಿಷ್ಠಾಪನೆ, ಮಹಾ ಕಲಶ ಸ್ಥಾಪನೆ,ಕುಂಭಾಭಿಷೇಕ, ಮಹಾಪೂಜೆ ನಡೆಯಲಿದೆ.ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ.
    ಸಂಜೆ 4 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top