• Slide
    Slide
    Slide
    previous arrow
    next arrow
  • ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ: ಹೊನ್ನಾವರದಲ್ಲಿ ಸಂಭ್ರಮಾಚರಣೆ

    300x250 AD

    ಹೊನ್ನಾವರ: ರಾಜ್ಯದಲ್ಲಿ ಶನಿವಾರ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್.ತೆಂಗೇರಿ ನೇತೃತ್ವದಲ್ಲಿ ನೂರಾರು ಪಕ್ಷದ ಕಾರ್ಯಕರ್ತರು ಪಟ್ಟಣದಲ್ಲಿ ಮೆರವಣಿಗೆ ನಡೆಸಿ, ಕಾಂಗ್ರೆಸ್ ಸರಕಾರದ ಪರ ಜಯಕಾರ ಹಾಕುತ್ತಾ, ನಗರದ ಶರಾವತಿ ಸರ್ಕಲ್ ಬಳಿ ಆಗಮಿಸಿ, ಪಟಾಕಿ ಸಿಡಿಸಿ, ಸಿಹಿ ವಿತರಿಸುವ ಮೂಲಕ ಸಂಭ್ರಮಾಚರಣೆ ನಡೆಸಿದರು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್.ತೆಂಗೇರಿ, ಉಪಾಧ್ಯಕ್ಷ ದಾಮೋದರ ನಾಯ್ಕ, ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷ ಕೆ.ಎಚ್.ಗೌಡ, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಜಕ್ರಿಯಾ ಶೇಖ್, ಸೇವಾದಳದ ಅಧ್ಯಕ್ಷ ಮೋಹನ ಆಚಾರಿ, ಇಂಟೆಕ್ ಅಧ್ಯಕ್ಷ ಆಗ್ನೇಲ್ ಡಯಾಸ್, ಸೇವಾದಳದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಮಾರಿಮನೆ, ನಗರ ಘಟಕದ ಅಧ್ಯಕ್ಷ ಕೇಶವ ಮೇಸ್ತ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಮೇಸ್ತ, ಕಾರ್ಯದರ್ಶಿ ಸುರೇಶ ಮೇಸ್ತ, ಪಕ್ಷದ ಹಿರಿಯ ಮುಖಂಡರಾದ ಸುರೇಶ ಮೇಸ್ತ, ಬಾಲಚಂದ್ರ ನಾಯ್ಕ, ಹನೀಫ್ ಶೇಖ್, ಮನ್ಸೂರ್ ಸೈಯದ್, ವಸಿಂ ಶೇಖ, ಮಾದೇವ ನಾಯ್ಕ ಕರ್ಕಿ, ಬ್ರಾಝಿಲ್ ಪಿಂಟೊ, ನಾಗೇಶ ನಾಯ್ಕ, ಮಂಜು ಮುಕ್ರಿ, ಮೋಹನ ಮೇಸ್ತ, ಹರೀಶ ಮೇಸ್ತ, ಜನಾರ್ಧನ ನಾಯ್ಕ, ಮಂಜು ಮುಕ್ರಿ, ನಾರಾಯಣ ಮಹಾಲೆ, ಜೋಸೆಫ್ ಡಿಸೋಜಾ ಹಾಗೂ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top