• Slide
    Slide
    Slide
    previous arrow
    next arrow
  • ಭೀಮಣ್ಣ ನಾಯ್ಕ್ ಗೆಲುವು: ರವೀಂದ್ರ ನಾಯ್ಕ್ ಅಭಿನಂದನೆ

    300x250 AD

    ಶಿರಸಿ: ವಿಧಾನ ಸಭಾ ಶಿರಸಿ- ಸಿದ್ಧಾಪುರ ಕ್ಷೇತ್ರಕ್ಕೆ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಭೀಮಣ್ಣ ನಾಯ್ಕರ ಐತಿಹಾಸಿಕ ಗೆಲುವಿಗೆ ಕಾಂಗ್ರೇಸ್ ಪಕ್ಷದ ಧುರೀಣ ರವೀಂದ್ರ ನಾಯ್ಕ ಹರ್ಷ ವ್ಯಕ್ತಪಡಿಸುತ್ತಾ ಈ ಗೆಲುವು ಐತಿಹಾಸಿಕ ಗೆಲುವು ಎಂದು ಬಣ್ಣಿಸಿದ್ದಾರೆ.

     ಶಿರಸಿ- ಸಿದ್ಧಾಪುರ ಕ್ಷೇತ್ರದ ಅಭಿವೃದ್ಧಿ ಮತ್ತು ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾದ ಸಂದರ್ಭದಲ್ಲಿ ರಾಜ್ಯದಲ್ಲಿ ಆಡಳಿತ ಪಕ್ಷವಾಗಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದಿರುವಂತಹ ಸಂದರ್ಭದಲ್ಲಿ ಕ್ಷೇತ್ರದ ಅಭಿವೃದ್ಧಿ ದಿಶೆಯಲ್ಲಿ ಭೀಮಣ್ಣ ಅವರ ಗೆಲುವು ಗಮನಾರ್ಹವಾಗಿದೆ ಎಂದು ಅವರು ವಿಶ್ಲೇಷಿಸಿದರು.

    ವಿಜಯೋತ್ಸವ:
     ಬಸ್‌ಸ್ಟಾಂಡ್ ಸರ್ಕನಲ್ಲಿ ಸಹಸ್ರಾರು ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಸಿಡಿಮದ್ದು ಸಿಡಿಸಿ, ಜಯಘೋಷಣೆಯೊಂದಿಗೆ ವಿಜಯೋತ್ಸವವನ್ನು ಆಚರಿಸಿದರು. ವಿಜಯೋತ್ಸವದ ಸಾಂಕೇತಿಕವಾಗಿ ಕಾರ್ಯಕರ್ತರು ಬಿಡ್ಕಿಬೈಲಿನ ಸುತ್ತ ವಿಜಯೋತ್ಸವದ ಮೆರವಣಿಗೆ ಸಾಗಿದರು.

    300x250 AD

     ವಿಜಯೋತ್ಸವದಲ್ಲಿ ಕಾಂಗ್ರೇಸ್ ಪಕ್ಷದ ಧುರೀಣರಾದ ರವೀಂದ್ರ ನಾಯ್ಕ, ನಗರ ಸಭಾ ಸದಸ್ಯ ಲುಕ್ಕು ನರೊನಾ, ಅರುಣ ಪ್ರಭು, ಪಠಾಣ, ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಗೀತಾ ಶೆಟ್ಟಿ, ನಜಿರ್ ಮೂಡಿ, ರಾಘವೇಂದ್ರ ಶೆಟ್ಟಿ, ರಮೇಶ ನಾಯ್ಕ, ದತ್ತು ಪೂಜಾರಿ ಮುಂತಾದವರು ನೇತೃತ್ವ ವಹಿಸಿದ್ದರು.

     ಭೀಮಣ್ಣ ನಾಯ್ಕರ ಗೆಲುವಿನ ಹಿನ್ನೆಲೆಯಲ್ಲಿ ಸಾರ್ವತ್ರಿಕವಾಗಿ ಮತ ನೀಡಿದಂತಹ ಮತದಾರರಿಗೆ ರವೀಂದ್ರ ನಾಯ್ಕ ಅಭಿನಂದನೆ ಸಲ್ಲಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top