ಶಿರಸಿ: ಇಲ್ಲಿನ ನಟರಾಜ ನೃತ್ಯಶಾಲೆಯ ಅಧ್ಯಕ್ಷರು, ಮೊರ್ಚಿಂಗ್ ಕಲಾವಿದರಾಗಿ ಸಾಂಸ್ಕೃತಿಕ ರಂಗದಲ್ಲಿ ತೊಡಗಿಸಿಕೊಂಡಿದ್ದ ಪ್ರದೀಪ ಭಾಗವತ್ ಅಕಾಲಿಕ ಮರಣವನ್ನು ಹೊಂದಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಖ್ಯಾತ ಭರತನಾಟ್ಯ ಕಲಾವಿದೆ ಸೀಮಾ ಭಾಗವತ್ ಪತಿಯಾಗಿದ್ದ ಇವರು, ಸಾಂಸ್ಕೃತಿಕ ರಂಗದಲ್ಲಿ ಸಾಕಷ್ಟು ಕೆಲಸ ಮಾಡಿದ್ದರು. ಇವರ ನಿಧನಕ್ಕೆ ಜಿಲ್ಲೆಯಾದ್ಯಂತ ಗಣ್ಯರು ಕಂಬನಿ ಮಿಡಿದಿದ್ದಾರೆ.