• Slide
  Slide
  Slide
  previous arrow
  next arrow
 • ಆಸ್ತಿ ವ್ಯಾಜ್ಯ: ಅರಣ್ಯ ಇಲಾಖೆ ನೌಕರನ ಕಾಲು ಕತ್ತರಿಸಿ ಕೊಲೆ

  300x250 AD

  ಹಳಿಯಾಳ: ಅರಣ್ಯ ಇಲಾಖೆಯ ದಿನಗೂಲಿ ನೌಕರನೊಬ್ಬನನ್ನು ಹೊಲದಲ್ಲಿ ಕಾಲು ಕತ್ತರಿಸಿ ಕೊಲೆ ಮಾಡಲಾಗಿದ್ದು, ಗ್ರಾಮಸ್ಥರನ್ನು ಬೆಚ್ಚಿಬೀಳುವಂತೆ ಮಾಡಿದೆ.

  2021ನೇ ಸಾಲಿನಲ್ಲಿ ವರ್ಷದ ಸಾಮಾಜಿಕ ಕಾರ್ಯ ವಲಯದಲ್ಲಿ ಕೊಡಮಾಡುವ ಮುಖ್ಯಮಂತ್ರಿ ಪದಕಕ್ಕೂ ಭಾಜನರಾಗಿದ್ದ, ಉರಗ ಸಂರಕ್ಷಕ ಪರಶುರಾಮ ತೋರಸ್ಕರ (54) ಕೊಲೆಯಾದ ವ್ಯಕ್ತಿ. ತಾಲೂಕಿನ ಕರ್ಲಕಟ್ಟಾ ಗ್ರಾಮದ ವ್ಯಾಪ್ತಿಯ ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಮಚ್ಚಿನಿಂದ ಎರಡೂ ಕಾಲನ್ನು ಕತ್ತರಿಸಿ ಕೊಲೆ ಮಾಡಲಾಗಿದೆ.
  ಇವರು 2021ರಲ್ಲಿ ಕರಲಕಟ್ಟ ಗ್ರಾಮದ ಬಳಿ ಯಡೋಗಾದ ರೈತನಿಂದ 3.5 ಎಕರೆ ಆಸ್ತಿ ಖರೀದಿ ಮಾಡಿದ್ದರು. ಆಸ್ತಿ ಖರೀದಿ ವಿಚಾರದಲ್ಲಿ ಗ್ರಾಮದ ಕೆಲವು ವ್ಯಕ್ತಿಗಳೊಂದಿಗೆ ನಿರಂತರ ಕಲಹ ಏರ್ಪಟ್ಟಿತ್ತು ಎನ್ನಲಾಗಿದ್ದು, ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿತ್ತು. ಈಗಲೂ ಕೋರ್ಟ್ನಲ್ಲಿ ಆಸ್ತಿಯ ವ್ಯಾಜ್ಯ ನಡೆಯುತ್ತಿದೆ ಎನ್ನಲಾಗಿದೆ. ಆರೋಪಿಗಳು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಚ್ಚಿನಿಂದ ಎರಡು ಕಾಲು ಕತ್ತರಿಸಿದ್ದಾರೆನ್ನಲಾಗಿದ್ದು, ಪರಿಣಾಮ ತೀವ್ರ ರಕ್ತಸ್ರಾವವಾಗಿ ಹೊಲದಲ್ಲಿ ಪರಶುರಾಮ ಸಾವನ್ನಪ್ಪಿದ್ದಾರೆ.

  300x250 AD

  ಘಟನಾ ಸ್ಥಳಕ್ಕೆ ಡಿವೈಎಸ್ಪಿ ಶಿವಾನಂದ ಕಟಗಿ, ಸಿಪಿಐ ಸುರೇಶ ಶಿಂಗಿ, ಪಿಎಸ್‌ಐ ವಿನೋದ ರೆಡ್ಡಿ ಮತ್ತು ಕ್ರೈಂ ಪಿಎಸ್‌ಐ ಅಮೀನ್ ಅತ್ತಾರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಮಹತ್ವದ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಸ್ಥಳದಲ್ಲಿ ಅರಣ್ಯ ಇಲಾಖೆಯ ವಲಯ ಮತ್ತು ಡಿಎಫ್‌ಒ ಕಛೇರಿಯ ಅಧಿಕಾರಿ, ಸಿಬ್ಬಂದಿ ಮತ್ತು ಮೃತನ ಸಂಬಂಧಿಕರು ನೆರೆದಿದ್ದು, ದುಃಖ ಮಡುಗಟ್ಟಿದೆ.

  Share This
  300x250 AD
  300x250 AD
  300x250 AD
  Leaderboard Ad
  Back to top