Slide
Slide
Slide
previous arrow
next arrow

ಕೈಕೊಟ್ಟ ಇವಿಎಂ: ಒಂದು ಗಂಟೆಗಳ ಕಾಲ ಮತದಾನ ಸ್ಥಗಿತ

300x250 AD

ಅಂಕೋಲಾ: ತಾಲೂಕಿನ ಖೇಣಿ ಗ್ರಾಮದಲ್ಲಿ ಇವಿಎಂ ಮಷಿನ್ ಕೈಕೊಟ್ಟ ಕಾರಣ ಒಂದು ಗಂಟೆಗಳ ಕಾಲ ಮತದಾನ ಸ್ಥಗಿತಗೊಂಡ ಘಟನೆ ನಡೆದಿದೆ. ಖೇಣಿಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 204ರಲ್ಲಿ ಬೆಳಿಗ್ಗೆಯಿಂದಲೇ ಮತದಾನ ಆರಂಭಿಸಲಾಗಿತ್ತಾದರೂ ಬೆಳಿಗ್ಗೆ 11.50 ಸುಮಾರಿಗೆ ಮತಯಂತ್ರ ಕೈಕೊಟ್ಟ ಕಾರಣ ಒಂದು ಗಂಟೆಗಳ ಕಾಲ ಮತದಾನ ಸ್ಥಗೀತಗೊಂಡಿತ್ತು.

ಮತಗಟ್ಟೆಯಲ್ಲಿ ಸಾಕಷ್ಟು ಮತದಾರರು ಮತದಾನಕ್ಕಾಗಿ ಸಾಲುಗಟ್ಟಿದ ವೇಳೆಯೇ ಮತಯಂತ್ರ ಸ್ಥಗಿತಗೊಂಡಿತ್ತು. ಒಟ್ಟು 82 ಮಂದಿ ಮತ ಚಲಾವಣೆ ಬಳಿಕ ಮತಯಂತ್ರ ಕೈಕೊಟ್ಟಿದೆ. ತಕ್ಷಣ ಪಿಆರ್ ಓ ಗಳು ತಕ್ಷಣ ಆರ್ ಓ ಗಳ ಗಮನಕ್ಕೆ ತಂದಿದ್ದು ಒಂದು ಗಂಟೆಯಲ್ಲಿ ಮತಯಂತ್ರವನ್ನು ಬದಲಿಸಲಾಗಿದೆ. ಅಲ್ಲದೆ ವಿಳಂಬವಾದ ಕಾರಣ ಸ್ಥಳೀಯರು ಒಂದು ಗಂಟೆ ಹೆಚ್ಚುವರಿಯಾಗಿ ಮತದಾನಕ್ಕೆ ಆಗ್ರಹಿಸಿದ್ದರು.

300x250 AD

ಆದರೆ ಅಧಿಕಾರಿಗಳು ಈ ಬಗ್ಗೆ ಜನರಿಗೆ ಮಾಹಿತಿ ನೀಡಿ ಪುನಃ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮತದಾನ ವಿಳಂವವಾದ ಕಾರಣ ಮಧ್ಯಾಹ್ನದ ವೇಳೆಗೆ ಮತಗಟ್ಟೆಯಲ್ಲಿ ದೊಡ್ಡ ಸಾಲು ನಿರ್ಮಾಣವಾಗಿತ್ತು.

Share This
300x250 AD
300x250 AD
300x250 AD
Back to top