Slide
Slide
Slide
previous arrow
next arrow

ಕ್ಷೇತ್ರದಲ್ಲಿ ಮತಯಾಚಿಸಿದ ಶಾಸಕಿ ರೂಪಾಲಿ

300x250 AD

ಕಾರವಾರ: ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಎಲ್ಲ ಪಕ್ಷದವರು ಅಬ್ಬರದ ಪ್ರಚಾರವನ್ನು ನಡೆಸಲಾರಂಭಿಸಿದ್ದಾರೆ. ಅದೇ ರೀತಿಯಲ್ಲಿ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ರೂಪಾಲಿ ಎಸ್. ನಾಯ್ಕ, ತಾಲೂಕಿನ ಕೆರವಡಿ ಗ್ರಾಮದಲ್ಲಿ ಪ್ರಚಾರ ಸಭೆಯನ್ನು ಕೈಗೊಂಡರು.

ಈ ವೇಳೆ ಮಾತನಾಡಿದ ಶಾಸಕಿ ರೂಪಾಲಿ ನಾಯ್ಕ, ಪ್ರಧಾನಿ ಮೋದಿ ಅವರಿಂದ ಅಂಕೋಲಾದ ಅಲಗೇರಿಯ ವಿಮಾನ ನಿಲ್ದಾಣದ ಅಡಿಗಲ್ಲು ಸ್ಥಾಪನೆ ಕಾರ್ಯಕ್ರಮ ನೆರವೇರಿಸುವ ಯೋಜನೆಯನ್ನು ರೂಪಿಸಲಾಗಿತ್ತು. ಆದರೆ, ಭೂಸ್ವಾಧೀನದ ಹಣ ಸಂದಾಯದ ಕಾರ್ಯ ಇನ್ನೂ ನಡೆಯುತ್ತಿದ್ದು, ಅದು ಪೂರ್ಣವಾದ ನಂತರವೇ ಅಡಿಗಲ್ಲು ಸಮಾರಂಭವನ್ನು ನಡೆಸುತ್ತೇವೆ ಎಂದರು.

300x250 AD

ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು 108 ಕೋಟಿ ರೂಪಾಯಿಗಳ ಯೋಜನೆಗೆ ಅಡಿಪಾಯ ಹಾಕಲಾಗಿದ್ದು, ನೀತಿ ಸಂಹಿತೆ ಮುಗಿದ ತಕ್ಷಣ ಕಾರ್ಯಾರಂಭವಾಗಲಿದೆ. ದೊಡ್ಡ ದೊಡ್ಡ ಯೋಜನೆಗಳು ಸಮಯವನ್ನು ತೆಗೆದುಕೊಳ್ಳುತ್ತದೆ. ಆದರೆ ದೊಡ್ಡ ಯೋಜನೆಗಳ ಉಪಯೋಗ ಶಾಶ್ವತವಾಗಿರುತ್ತವೆ. ಇನ್ನೂ ಹಲವಾರು ಯೋಜನೆಗಳ ರೂಪುರೇಷೆ ಸಿದ್ಧವಾಗಿದ್ದು, ಆ ಯೋಜನೆಗಳ ಸಾಕಾರಕ್ಕೆ ತಮ್ಮೆಲ್ಲರ ಸಹಕಾರದ ಅವಶ್ಯಕತೆ ಇದೆ. ಬುಧವಾರ ಮೋದಿಜಿ ಅವರು ಹೇಳಿದ ರೀತಿಯಲ್ಲಿ ಜೈ ಬಜರಂಗಬಲಿ ಎಂದು ಕಮಲದ ಗುರುತಿಗೆ ಮತ ನೀಡಿ ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಬಿಜೆಪಿ ಕಾರವಾರ ಗ್ರಾಮೀಣಾಧ್ಯಕ್ಷ ಸುಭಾಷ್ ಗುನಗಿ, ಕೆರವಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ದೀಪಾ ನಾಯ್ಕ, ಉಪಾಧ್ಯಕ್ಷ ರಾಮಚಂದ್ರ ನಾಯ್ಕ, ಸದಸ್ಯರಾದ ಬಾಲಚಂದ್ರ ಕಾಮತ್, ಕಾರವಾರ ನಗರಸಭೆ ಉಪಾಧ್ಯಕ್ಷ ಪಿ.ಪಿ.ನಾಯ್ಕ, ಬಿಜೆಪಿ ಕಾರವಾರ ಗ್ರಾಮೀಣ ಪ್ರಧಾನ ಕಾರ್ಯದರ್ಶಿ ದತ್ತಾರಾಮ ಬಾಂದೇಕರ ಹಾಗೂ ಕಾರ್ಯಕರ್ತರು ಸಾರ್ವಜನಿಕರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top