Slide
Slide
Slide
previous arrow
next arrow

ಡಿಕೆಶಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಹೆಲಿಪ್ಯಾಡ್’ನಲ್ಲಿ ಬೆಂಕಿ

300x250 AD

ಹೊನ್ನಾವರ: ತಾಲೂಕಿನ ರಾಮತೀರ್ಥ ಬಳಿಯ ಹೆಲಿಪಾಡ್ ಗೆ ಮೈಸೂರಿನಿಂದ ಡಿ.ಕೆ ಶಿವಕುಮಾ‌ರ್ ಆಗಮಿಸುತಿದ್ದಂತೆ ಹೆಲಿಕಾಪ್ಟರ್ ಗೆ ಸಿಗ್ನಲ್ ಕೊಡುವ ಸ್ಮೋಕ್ ಕಾಂಡಲ್’ ನಿಂದ ಹೆಲಿಪ್ಯಾಡ್ ನಲ್ಲಿದ್ದ ಹುಲ್ಲಿಗೆ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ.

ತಕ್ಷಣ ಸ್ಥಳದಲ್ಲಿದ್ದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಆಗಬಹುದಾದ ದುರ್ಘಟನೆಯನ್ನು ತಡೆದಿದ್ದಾರೆ. ಇಂದು ಹೊನ್ನಾವರದ ಸೆಂಟ್ ಥಾಮಸ್ ಸಭಾಂಗಣದ ಆವರಣದಲ್ಲಿ ಅಭ್ಯರ್ಥಿಗಳ ಪರ ಮತ ಪ್ರಚಾರ ಸಭೆ ಆಯೋಜಿಸಲಾಗಿತ್ತು. ಈ ಸಭೆಗೆ ಮೈಸೂರಿನಿಂದ ಹೊನ್ನಾವರಕ್ಕೆ ಹೆಲಿಕಾಪ್ಟರ್ ನಲ್ಲಿ ಡಿಕೆಶಿ ಪ್ರಯಾಣಿಸಿದ್ದರು.

300x250 AD

ಮೊನ್ನೆಯಷ್ಟೇ ಡಿಕೆ ಪ್ರಯಾಣಿಸುತಿದ್ದ ಹೆಲಿಕಾಪ್ಟರ್ ಗೆ ಹದ್ದೊಂದು ಡಿಕ್ಕಿ ಹೊಡೆದು ಹೆಲಿಕಾಪ್ಟರ್ ನ ಗಾಜು ಒಡೆದು ಅಪಾಯದಿಂದ ಪಾರಾಗಿದ್ದ ಟಿಕೆಶಿಗೆ ಪುನಃ ಹೆಲಿಪಾಡ್ ನಲ್ಲಿ ಬೆಂಕಿ ಕಂಟಕ ಎದುರಾಗಿದೆ.

Share This
300x250 AD
300x250 AD
300x250 AD
Back to top