• Slide
    Slide
    Slide
    previous arrow
    next arrow
  • ಮೀನುಗಾರರ ಮತಯಾಚಿಸಿದ ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವಾ

    300x250 AD

    ಹೊನ್ನಾವರ: ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವರವರು ಪಟ್ಟಣದ ಮೀನು ಮಾರುಕಟ್ಟೆಯಲ್ಲಿ ಮೀನುಗಾರರ ಮತಯಾಚಿಸಿದರು. ಮೀನುಗಾರರೊಂದಿಗೆ ಕೊಂಕಣಿ ಭಾಷೆಯಲ್ಲಿ ಮಾತನಾಡಿದರು.
    ಮೀನುಗಾರ ಮಹಿಳೆಯರು ತಮಗೆ ಸರಿಯಾದ ಮೀನು ಮಾರುಕಟ್ಟೆ ಇಲ್ಲ,ಸುಸಜ್ಜಿತ ಹೈಟೆಕ್ ಮೀನು ಮಾರುಕಟ್ಟೆ ಅವಶ್ಯಕತೆ ಇದೆ.ನಿಮ್ಮಗೆ ಮತ ನೀಡುತೇವೆ ಮಾರುಕಟ್ಟೆ ನಿರ್ಮಿಸಿ ಕೊಡಿ ಎಂದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿದ್ದಾಗ ಕರ್ಕಿ, ಹಳದಿಪುರದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಿಸಿದೆ. ನೀವು ನನಗೆ ಆಶೀರ್ವದಿಸಿ ಎಂದಾಗ ಮೀನುಗಾರ ಮಹಿಳೆಯರು ಅವರಿಗೆ ಹರಿಸಿದರು.
    ನಿಮ್ಮ ಯಾವುದೇ ಸಮಸ್ಯೆ ಇದ್ದರೂ ತಿಳಿಸಿ ಪರಿಹರಿಸಲು ಹೊನ್ನಾವರದಲ್ಲಿ ಮನೆ ಮಾಡಿ ಉಳಿಯುವ ಭರವಸೆ ನೀಡಿದರು. ಮೀನುಗಾರ ಮುಖಂಡರಾದ ಸುರೇಶ ಎಸ್.ಮೇಸ್ತ, ಲಕ್ಷ್ಮಣ ಮೇಸ್ತ, ಅಜಿತ್ ತಾಂಡೇಲ, ದಾಮು ಮೇಸ್ತ, ಸುರೇಶ ಎಸ್.ಮೇಸ್ತ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ತಂಗೇರಿ, ಕೃಷ್ಣ ಮಾರಿಮನೆ, ಜಿ.ಎನ್.ಗೌಡ, ಚಂದ್ರಶೇಖರ ಚಾರೋಡಿ ಇತರರು ಇದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top