• Slide
    Slide
    Slide
    previous arrow
    next arrow
  • ವಿಧಾನಸಭಾ ಚುನಾವಣೆ: ಮನೆಯಿಂದಲೇ ಮತದಾನ ಪ್ರಾರಂಭ

    300x250 AD

    ಶಿರಸಿ: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಈಗಾಗಲೇ 80 ವರ್ಷ ಮೇಲ್ಪಟ್ಟವರು ಮತ್ತು ವಿಶೇಷ ಚೇತನರಿಗೆಂದು ಮತದಾನ ಪ್ರಕ್ರಿಯೆಯನ್ನೂ ಆರಂಭಿಸಲಾಗಿದೆ. ಅದೇ ಹಿನ್ನೆಲೆಯಲ್ಲಿ ಶಿರಸಿ ಸಿದ್ದಾಪುರ ಕ್ಷೇತ್ರದಲ್ಲಿ ಸೋಮವಾರ ಮತದಾನ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ.

    ಕ್ಷೇತ್ರದಲ್ಲಿ ಮೇ 1 ರಿಂದ ಆರಂಭವಾದ ಅಂಚೆ ಮತದಾನ ಪ್ರಕ್ರಿಯೆ ಮೇ 4 ರವರೆಗೆ ನಡೆಯಲಿದೆ. ಕ್ಷೇತ್ರದಲ್ಲಿ ಇದೀಗ 80 ವರ್ಷ ಮೇಲ್ಪಟ್ಟ 315 ಮತದಾರರಿದ್ದರೆ, 88 ವಿಶೇಷ ಚೇತನ ಮತದಾರರಿದ್ದಾರೆ. ತಾಲೂಕಿನ 12 ಸೆಕ್ಟರ್ ಅಧಿಕಾರಿಗಳ ನೇತೃತ್ವದಲ್ಲಿ ಮತದಾನ ತಂಡ ರಚನೆ ಮಾಡಲಾಗಿದೆ. ಅವರು ಮತದಾರರ ಮನೆಗೆ ತೆರಳಿ ಅಂಚೆ ಮತಪತ್ರದ ವಿವರಣೆ ನೀಡಿ ಮತದಾನ ಪ್ರಕ್ರಿಯೆ ಆರಂಭಿಸಿದ್ದಾರೆ.

    300x250 AD

    ಮತದಾನ ಪ್ರಕ್ರಿಯೆಯೆ ಮೊದಲ ದಿನದಂದು 80 ವರ್ಷ ಮೇಲ್ಪಟ್ಟ ಪ್ರಗತಿ ನಗರದ ಶಾಕುಂತಲಾ ಹೆಗಡೆ, ಯಮುನಾ ಹೆಗಡೆ, ಸಿದ್ದಾಪುರ ತಾಲೂಕಿನ ರಾಮಚಂದ್ರ ಸೇರಿದಂತೆ ಇಪ್ಪತ್ತಕ್ಕೂ ಅಧಿಕ ಮತದಾರರು ಅಂಚೆ ಪತ್ರದ ಮೂಲಕ ಮತದಾನ ಮಾಡಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top